ಇಂದು ಅರೆನೆರಳಿನ ಚಂದ್ರ ಗ್ರಹಣ

Upayuktha
0

 



ಮೇ 2023ರ ಹುಣ್ಣಿಮೆಯ ಚಂದ್ರನು ಭೂಮಿಯ ಅರೆನೆರಳಲ್ಲಿ ಹಾದು ಹೋಗುತ್ತಾನೆ. ಇದರಿಂದ ಮೇ 5 ರಂದು ಅರೆನೆರಳಿನ ಚಂದ್ರ ಗ್ರಹಣವು ಗೋಚರಿಸುತ್ತದೆ. ಈ ಗ್ರಹಣವು ಭಾರತದ ಎಲ್ಲ ಪ್ರದೇಶಗಳಲ್ಲಿ ರಾತ್ರಿ 8.44 ರಿಂದ ಮರುದಿನ (ಮಧ್ಯರಾತ್ರಿ) 1.01 ಗಂಟೆಯವರೆಗೆ ನಡೆಯಲಿದೆ. ಗರಿಷ್ಠ ಗ್ರಹಣವು ರಾತ್ರಿ 10.52ಕ್ಕೆ ಗೋಚರಿಸುತ್ತದೆ.


ಈ ಗ್ರಹಣವು ಭೂಮಿಯ ಅರೆನೆರಳಿನಲ್ಲಿ ಚಂದ್ರನು ಬಂದಾಗ ಸಂಭವಿಸುತ್ತದೆ. ಯಾವುದೇ ವಸ್ತುವಿನ ನೆರಳಿನಲ್ಲಿ ಗರಿಷ್ಠ ಕತ್ತಲಿನ ಭಾಗವನ್ನು ನೆರಳು ಮತ್ತು ಆ ನೆರಳಿನ ಹೊರ-ತುದಿಯಲ್ಲಿರುವ ಮಸುಕಾದ ನೆರಳನ್ನು ಅರೆನೆರಳು ಎಂದು ಗುರುತಿಸುತ್ತಾರೆ. ಚಂದ್ರನು ಭೂಮಿಯ ಅರೆನೆರಳಲ್ಲಿ ಹಾದು ಹೋಗುವಾಗ ಅರೆನೆರಳಿನ ಚಂದ್ರ ಗ್ರಹಣ ಎನ್ನುತ್ತಾರೆ. ಇದೇ ರೀತಿ ಚಂದ್ರನು ಭೂಮಿಯ ನೆರಳಿನಿಂದ ಹಾದು ಹೋಗುವಾಗ ಅದು ಪಾರ್ಶ್ವ ಗ್ರಹಣ ಅಥವಾ ಖಗ್ರಾಸ ಚಂದ್ರ ಗ್ರಹಣವಾಗಿರುತ್ತದೆ.


ಅರೆನೆರಳಿನ ಚಂದ್ರಗ್ರಹಣವನ್ನು ವೀಕ್ಷಿಸುವುದು ಕಷ್ಟ. ಭೂಮಿಯ ಅರೆನೆರಳು ಮಸುಕಾಗಿರುವುದರಿಂದ ಚಂದ್ರನ ಮೇಲೆ ಈ ನೆರಳನ್ನು ಗಮನಿಸುವುದು ಸುಲಭವಲ್ಲ. ಬರಿಗಣ್ಣಿನಲ್ಲಿ ನೋಡುವಾಗ ಗರಿಷ್ಠ ಗ್ರಹಣದ ಸಮಯ ಚಂದ್ರ, ಸಾಮಾನ್ಯ ಹುಣ್ಣಿಮೆ ಚಂದ್ರನಿಗಿಂತ ಸ್ವಲ್ಪ ಕಡಿಮೆ ಪ್ರಕಾಶಮಾನದಿಂದ ಗೋಚರಿಸುತ್ತದೆ.


ಭಾರತದ ಎಲ್ಲ ಪ್ರದೇಶಗಳಿಂದ ಈ ಗ್ರಹಣವನ್ನು ನೋಡಬಹುದು. ನಮ್ಮೊಂದಿಗೆ, ದಕ್ಷಿಣ ಏಷಿಯಾದ ಎಲ್ಲ ದೇಶಗಳಲ್ಲಿ, ರಷ್ಯಾ, ಹಾಗೂ ಆಸ್ಟ್ರೇಲಿಯಾದಲ್ಲಿ ಈ ಗ್ರಹಣವು ಗೋಚರಿಸುತ್ತದೆ. ಈ ಗ್ರಹಣವನ್ನು ಬರಿಗಣ್ಣಿನಿಂದ ಸುರಕ್ಷಿತವಾಗಿ ವೀಕ್ಷಿಸಬಹುದು.


- ಅತುಲ್ ಭಟ್, ಸಂಯೋಜಕರು

  ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top