ಮೇ 28ರಂದು ಮಂಗಳೂರಿನಲ್ಲಿ "ಪುರ್ಸನ ಪುಗ್ಗೆ" ಜಪಾನ್ ಬುನ್ರಾಕು ಗೊಂಬೆಯಾಟ

Upayuktha
0

ಮಂಗಳೂರು: ಕಲಾಭಿ ಥಿಯೇಟರ್ ವತಿಯಿಂದ ನಗರದ ಡೊಂಗರಕೇರಿಯಲ್ಲಿರುವ ಕೆನರಾ ಪ್ರೌಢ ಶಾಲೆಯ ಭುವನೇಂದ್ರ ಸಭಾ ಭವನದಲ್ಲಿ ಜಪಾನಿನ ಸಾಂಪ್ರದಾಯಿಕ ರಂಗಕಲೆ ಬುನ್ರಾಕು ಮಾದರಿಯ ಗೊಂಬೆಯಾಟವಾದ "ಪುರ್ಸನ ಪುಗ್ಗೆ" ಪ್ರದರ್ಶನವನ್ನು ಮೇ 28ರ ಭಾನುವಾರ ಆಯೋಜಿಸಲಾಗಿದೆ.


ಹೆಸರಾಂತ ರಂಗಭೂಮಿ ನಿರ್ದೇಶಕ ಶ್ರವಣ್ ಹೆಗ್ಗೋಡು ಅವರ ನಿರ್ದೇಶನದಲ್ಲಿ ಯುವ ರಂಗಕರ್ಮಿಗಳಾದ ಅವಿನಾಶ್ ರೈ ಕಾಸರಗೋಡು, ಚೇತನ್ ಕೊ ಪ್ಪ, ಅಕ್ಷತಾ ಕುಡ್ಲ, ಉಜ್ವಲ್ ಯು.ವಿ. ಮಂಗಳೂರು, ಭುವನ್ ಮಣಿಪಾಲ, ಕಾರ್ತಿಕ್ ಸಾಲಿಯಾನ್ ಉಡುಪಿ, ಗಣೇಶ್ ಕೆವಿ ಚಿತ್ರದುರ್ಗ, ಉದಿತ್ ಯು.ವಿ. ಮಂಗಳೂರು ಹಾಗೂ ಅಭಿಷೇಕ್ ಮಡಿಕೇರಿ ಹೀಗೆ ಕರ್ನಾಟಕ ಹಾಗೂ ಕಾಸರಗೋಡಿನ ಒಟ್ಟು 10 ಕಲಾವಿದರು ಪ್ರಸ್ತುತಪಡಿಸುವ ವಿಭಿನ್ನ ಶೈಲಿಯ ಈ ಬೊಂಬೆಯಾಟವು ಭಾನುವಾರ ಒಂದೇ ದಿನ ಮೂರು ಪ್ರದರ್ಶನಗಳನ್ನು ಕಾಣಲಿದೆ. ಅಪರಾಹ್ನ 3:30, ಸಂಜೆ 5:30 ಮತ್ತು 7:30ಕ್ಕೆ ನಿಗದಿಯಾಗಿರುವ ಈ ನಾಟಕದ ಅವಧಿ 30 ನಿಮಿಷ. ಕಲಾಭಿಮಾನಿಗಳು ನಿಗದಿತ ಸಮಯಕ್ಕೆ ಮುಂಚಿತವಾಗಿ ಬಂದು ಕಲಾವಿದರ ಈ ಹೊಸ ಪ್ರಯೋಗವನ್ನು ವೀಕ್ಷಿಸಿ ತಮ್ಮ ಪೂರ್ಣ ಸಹಕಾರ ನೀಡಲು ವಿನಂತಿಸಲಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top