ಶ್ರೀಧರ ಪಂಜಾಜೆ ಅವರಿಗೆ ಕದ್ರಿ ಗುತ್ತು ಪ್ರಶಸ್ತಿ ಪ್ರದಾನ

Upayuktha
0

ಮಂಗಳೂರು: ಕಟೀಲು ಮೇಳದಲ್ಲಿ ನಿರಂತರ 42 ವರ್ಷಗಳಿಂದ ಕಲಾ ಸೇವೆ ಮಾಡುತ್ತಿರುವ ಹಿರಿಯ ಯಕ್ಷಗಾನ ವೇಷಧಾರಿ ಶ್ರೀಧರ ಪಂಜಾಜೆ ಅವರಿಗೆ ಕದ್ರಿ ಕಂಬಳ ಗುತ್ತು ಬಾಲಕೃಷ್ಣ ಶೆಟ್ಟಿ ಪ್ರಶಸ್ತಿ ನೀಡಿ ಸಂಮಾನಿಸಲಾಯಿತು.


ಬೆಂಗಳೂರಿನ ಡಾ. ಬಿ. ನಿಶಾಕಾಂತ ಶೆಟ್ಟಿ ಅವರ ಶ್ರೀ ಕಟೀಲು ಮೇಳ ದ ಸೇವೆ ಆಟದ ಸಂದರ್ಭದಲ್ಲಿ, ಹಿರಿಯ ಹವ್ಯಾಸಿ ತಾಳಮದ್ದಳೆ ಕಲಾವಿದ ಕೀರ್ತಿ ಶೇಷ ಕದ್ರಿ ಕಂಬಳ ಗುತ್ತು ಬಾಲಕೃಷ್ಣ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರಗಿತು.


ಡಾ. ಸುಧಾಕರ ಮಾರ್ಲ ಪಂಜಾಜೆ ಅವರನ್ನು ಅಭಿನಂದಿಸಿದರು. ಹಿರಿಯ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ, ಪ್ರದೀಪ ಕುಮಾರ ಕಲ್ಕೂರ, ಆಸ್ಪ ಲ್ಯಾಂಪ್ ನ ಸುರೇಶ ಬಿ. ಶೆಟ್ಟಿ,ಬಿ. ವಿ. ಹೆಗ್ಡೆ ಶಿರಸಿ, ಸುರೇಶ ವಿ ಹೆಗ್ಡೆ, ಇಂದ್ರಾಳಿ ಶಿವರಾಮ್ ಶೆಟ್ಟಿ,ಬಾಳ ತಿಮ್ಮಪ್ಪ ಶೆಟ್ಟಿ, ಶಿರ್ವ ಕೋಡು ದಿನೇಶ್ ಹೆಗ್ಡೆ, ಸುಧಾಕರ ರಾವ್ ಪೇಜಾವರ, ಎಲ್ಲೂರು ರಾಮಚಂದ್ರ ಭಟ್, ಚೈತ್ರ ಸಾಕೇತ್ ಶೆಟ್ಟಿ ಉಪಸ್ಥಿತರಿದ್ದರು.

ಕದ್ರಿ ಕಂಬಳ ಗುತ್ತು ನವನೀತ ಶೆಟ್ಟಿ ಅವರು ನಿರೂಪಿಸಿದರು. ಕಟೀಲು ಮೇಳದವರಿಂದ "ತ್ರಿಮೂರ್ತಿ ಕಲ್ಯಾಣ " ಯಕ್ಷಗಾನ ಬಯಲಾಟ ನಡೆಯಿತು.


ಬೆಂಗಳೂರು ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಉಪೇಂದ್ರ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದು ವೈದ್ಯಕೀಯ ಸೇವೆಯೊಂದಿಗೆ ಕಲಾ ಪೋಷಣೆ ಮಾಡುತ್ತಿರುವ ನಿಶಾಕಾಂತ ಶೆಟ್ಟಿ ಅವರ ಯಕ್ಷಗಾನ ಅಭಿರುಚಿ ಯನ್ನು ಶ್ಲಾಘಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top