ಶ್ರೀಧರ ಪಂಜಾಜೆ ಅವರಿಗೆ ಕದ್ರಿ ಬಾಲಕೃಷ್ಣ ಶೆಟ್ಟಿ ಪ್ರಶಸ್ತಿ

Upayuktha
0

 

ಕದ್ರಿ: ಶ್ರೀ ಕಟೀಲು ಮೇಳ ದಲ್ಲಿ ಕಳೆದ 42 ವರ್ಷ ಗಳಿಂದ ನಿರಂತರ ಯಕ್ಷಗಾನ ಕಲಾ ಸೇವೆ ಮಾಡುತ್ತಿರುವ ಅನುಭವಿ ಕಲಾವಿದ, ಮೇಳದ ಪ್ರಬಂಧಕ  ಶ್ರೀಧರ ಪಂಜಾಜೆ ಅವರಿಗೆ 13,ಮೇ ಶನಿವಾರ ಕದ್ರಿ ಕಂಬಳ ಗುತ್ತು ನಲ್ಲಿ, ಡಾ.ಬಿ.ನಿಶಾಕಾಂತ ಶೆಟ್ಟಿ ಅವರ ಕಟೀಲು ಮೇಳದ  ಸೇವೆ ಆಟದ ಸಂದರ್ಭದಲ್ಲಿ, ಕದ್ರಿ ಕಂಬಳ ಗುತ್ತು ಬಾಲಕೃಷ್ಣ ಶೆಟ್ಟಿ ಸ್ಮೃತಿ ಪ್ರಶಸ್ತಿ ನೀಡಲಾಗುವುದು ಎಂದು  ಸಂಯೋಜಕ ಕದ್ರಿ ನವನೀತ ಶೆಟ್ಟಿ ತಿಳಿಸಿದ್ದಾರೆ.


ಪುಂಡು ವೇಷಧಾರಿ ಯಾಗಿ ಪೌರಾಣಿಕ ಪಾತ್ರ ಗಳ ನಿರ್ವಹಣೆ ಯಲ್ಲಿ ಸಿದ್ದಿ ಪ್ರಸಿದ್ದಿ ಪಡೆದ ಸರಳ ಸಜ್ಜನಿಕೆಯ ವ್ಯಕ್ತಿತ್ವದ ಶ್ರೀಧರ್ ಅವರು ಕಲ್ಲಾಡಿ ವಿಠ್ಠಲ ಶೆಟ್ಟಿ ಅವರ  ಪ್ರೇರಣೆ, ಮಾರ್ಗದರ್ಶನ ದಲ್ಲಿ ಯಕ್ಷಗಾನ ಕಲಿತು, ಮೇಳ ಸೇರಿದವರು.15 ವರ್ಷ ಗಳಿಂದ ಕಟೀಲು ಮೇಳದ ಪ್ರಭಂದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.


ಕದ್ರಿ ಶ್ರೀ ಮಂಜುನಾಥ ಯಕ್ಷಗಾನ ಸಂಘ ದಲ್ಲಿ ತಾಳಮದ್ದಳೆ ಅರ್ಥಧಾರಿಯಾಗಿ, ಸಂಘಟಕ ನಾಗಿ, ಮಂಗಳೂರು ನಗರದ ಹವ್ಯಾಸಿ ವಲಯದ ಹಿರಿಯ ಅರ್ಥಧಾರಿ ಗಳಾಗಿದ್ದ ಕೀರ್ತಿಶೇಷ ಕದ್ರಿ ಕಂಬಳ ಗುತ್ತು ಬಾಲಕೃಷ್ಣ ಶೆಟ್ಟಿ ಅವರ  ಸ್ಮರಣಾರ್ಥ ಪ್ರಶಸ್ತಿ ಪ್ರದಾನ ಮಾಡಲಾಗುವುದು.


ಸಂಜೆ  6 ರಿಂದ ಶ್ರೀ ಕಟೀಲು ಮೇಳದವರಿಂದ "ತ್ರಿಮೂರ್ತಿ ಕಲ್ಯಾಣ " ಯಕ್ಷಗಾನ ಸೇವೆ ಬಯಲಾಟ ಜರಗಲಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top