ಕೆಆರ್‍ಎಂಎಸ್ಎಸ್ ರಾಷ್ಟ್ರೀಯ ವಿಚಾರಸಂಕಿರಣ-ಸಂಶೋಧನಾ ಪ್ರಬಂಧಗಳಿಗೆ ಅವಕಾಶ

Upayuktha
0

 

ಮಂಗಳೂರು: ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ಮಂಗಳೂರು ವಿಶ್ವವಿದ್ಯಾನಿಲಯ ವಿಭಾಗವು, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್, ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜುಗಳ ಸಹಯೋಗದಲ್ಲಿ ‘ರಾಷ್ಟ್ರೀಯ ಶಿಕ್ಷಣ ಪದ್ಧತಿ 2020 ರ ಅನುಷ್ಠಾನ: ಸವಾಲುಗಳು ಮತ್ತು ಭವಿಷ್ಯ- ಪಠ್ಯಕ್ರಮ, ಮೌಲ್ಯಮಾಪನ, ಫಲಿತಾಂಶʼ ಎಂಬ ರಾಷ್ಟ್ರೀಯ ವಿಚಾರಸಂಕಿರಣವೊಂದನ್ನು ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಮೇ 26 ರಂದು ಆಯೋಜಿಸಿದೆ. 


ರಾಷ್ಟ್ರೀಯ ವಿಚಾರ ಸಂಕಿರಣದ ಅಂಗವಾಗಿ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಂಶೋಧನಾರ್ಥಿಗಳಿಂದ ವಿಷಯಕ್ಕೆ ಸಂಬಂಧಿಸಿದ ಸಂಶೋಧನಾ ಪ್ರಬಂಧಗಳನ್ನು(ಕನ್ನಡ/ಇಂಗ್ಲಿಷ್/ಹಿಂದಿ) ಆಹ್ವಾನಿಸಲಾಗಿದೆ. ಆಸಕ್ತರು ತಮ್ಮ ಸಂಶೋಧನಾ ಪ್ರಬಂಧದ ಸಾರಾಂಶ (500 ಪದಗಳಿಗೆ ಮೀರದಂತೆ) ವನ್ನುಮೇ 21 ರೊಳಗೆ krmssmuv@gmail.comಗೆ ಕಳುಹಿಸಬಹುದು. ಪೂರ್ಣ ಪ್ರಬಂಧವನ್ನು ಮೇ 23ರೊಳಗೆ ಕಳುಹಿಸಬಹುದು. 


ಹೆಚ್ಚಿನ ಮಾಹಿತಿಗಾಗಿ ಡಾ. ಗಾಯತ್ರಿ ಎನ್ (9945990963) ಇವರನ್ನು ಸಂಪರ್ಕಿಸಬಹುದು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top