ಅಭಿವೃದ್ಧಿ ನಿಧಿ ಯೋಜನೆ ಎರಡು ವರ್ಷಗಳವರೆಗೆ ವಿಸ್ತರಿಸಲು ಮನವಿ

Upayuktha
0


ಮಂಗಳೂರು: ಕರ್ನಾಟಕ ಪೌಲ್ಟ್ರಿ ಫಾರ್ಮರ್ ಆ್ಯಂಡ್ ಬ್ರೀಡರ್ಸ್ ಅಸೋಸಿಯೇಶನ್ (ಕೆಪಿಎಫ್‍ಬಿಎ), ಮಹಾರಾಷ್ಟ್ರದ ಪೌಲ್ಟ್ರಿ ಫಾರ್ಮರ್ ಆ್ಯಂಡ್ ಬ್ರೀಡರ್ಸ್  ಅಸೋಸಿಯೇಶನ್, ಪಶ್ಚಿಮ ಬಂಗಾಳ ಪೌಲ್ಟ್ರಿ ಫೆಡರೇಶನ್ ಮತ್ತು ವೆಂಟ್ರಲ್ ಇಂಡಿಯಾ ವೆಂಕೋಬ್ ಬ್ರಾಯ್ಲರ್ ಬ್ರೀಡರ್ಸ್ ಹ್ಯಾಚರೀಸ್ ಅಸೋಸಿಯೇಷನ್ ಅವರು ಭಾರತ ಸರ್ಕಾರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯ ಕಾರ್ಯದರ್ಶಿ ಡಾ.ರಾಜೇಶ್ ಕುಮಾರ್ ಸಿಂಗ್ ಅವರಿಗೆ ಪತ್ರ ಬರೆದು, ಪಶುಸಂಗೋಪನಾ ಮೂಲಸೌಕರ್ಯ ಅಭಿವೃದ್ಧಿ ನಿಧಿ ಯೋಜನೆಯನ್ನು ಇನ್ನೂ ಎರಡು ವರ್ಷಗಳವರೆಗೆ ವಿಸ್ತರಿಸುವಂತೆ ಮನವಿ ಮಾಡಿದೆ.


ಕೆಪಿಎಫ್‍ಬಿಎ ಅಧ್ಯಕ್ಷ ಡಾ.ಬಿ.ಸುಶಾಂತ್ ರೈ ಅವರು ಮಾತನಾಡಿ, ಆತ್ಮನಿರ್ಭರ ಭಾರತ ಅಭಿಯಾನ ಉತ್ತೇಜನ ಪ್ಯಾಕೇಜ್‍ನ ಭಾಗವಾಗಿ ಪ್ರಾರಂಭಿಸಲಾದ ಈ ಯೋಜನೆಯು ಫೀಡ್ ಮಿಲ್‍ಗಳು, ಹ್ಯಾಚರಿಗಳು ಮತ್ತು ಸಂಸ್ಕರಣಾ ಘಟಕಗಳು ಸೇರಿದಂತೆ ಪಶುಸಂಗೋಪನಾ ಮೂಲಸೌಕರ್ಯಗಳಲ್ಲಿ ಹೂಡಿಕೆಗೆ ಪ್ರೋತ್ಸಾಹ ನೀಡುವ ಮೂಲಕ ರೈತರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಈ ಯೋಜನೆಯ ಮೂಲಕ ನೀಡಲಾಗುವ ಮೂರು ಪ್ರತಿಶತದಷ್ಟು ಬಡ್ಡಿ ಸಹಾಯಧನ ರೈತರಿಗೆ ಗಮನಾರ್ಹ ಉತ್ತೇಜನವನ್ನು ನೀಡಿದೆ. ಮಾ.31, 2023ರಂದು ಕೊನೆಗೊಂಡ ಯೋಜನೆಯ ವಿಸ್ತರಣೆಯು ಮೂಲಸೌಕರ್ಯ ಯೋಜನೆಗಳನ್ನು ಸ್ಥಾಪಿಸುವುದರಿಂದ ಇನ್ನೂ ಅನೇಕ ರೈತರಿಗೆ ಪ್ರಯೋಜನ ಪಡೆಯಲು ಸಹಾಯ ಮಾಡುತ್ತದೆ ಎಂದರು.


ಈ ಉಪಕ್ರಮವು ರೈತರು ಮತ್ತು ಗ್ರಾಹಕರಿಗೆ ಅತ್ಯಗತ್ಯವಾದ ಗುಣಮಟ್ಟದ ಪ್ರಾಣಿ ಪ್ರೋಟಿನ್‍ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಸಹಾಯ ಮಾಡುತ್ತದೆ. ಈ ಯೋಜನೆಯನ್ನು ವಿಸ್ತರಿಸುವ ಮೂಲಕ, ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವುದರ ಜತೆಗೆ ಉದ್ಯೋಗವನ್ನು ಸೃಷ್ಟಿಸುವ ಮೂಲಸೌಕರ್ಯ ಯೋಜನೆಗಳನ್ನು ಸ್ಥಾಪಿಸಲು ಸರ್ಕಾರವು ಉದ್ಯಮಿಗಳಿಗೆ ಸಹಾಯ ಮಾಡುತ್ತದೆ ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top