ಜೆಇಇ ಮೈನ್ಸ್ ಫಲಿತಾಂಶ: ಆಳ್ವಾಸ್ 22 ವಿದ್ಯಾರ್ಥಿಗಳಿಗೆ 99 ಕ್ಕೂ ಅಧಿಕ ಪರ್ಸಂಟೈಲ್

Upayuktha
0

 

ಮೂಡುಬಿದಿರೆ: ಜೆಇಇ ಫಲಿತಾಂಶ ಪ್ರಕಟಗೊಂಡಿದ್ದು, ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಈ ಬಾರಿಯೂ ಸಾಧನೆ ಮೆರೆದಿದ್ದಾರೆ.  22 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ 99 ಪರ್ಸಂಟೈಲ್‌ಗಿಂತ ಅಧಿಕ ಅಂಕ ಪಡೆದ ಶ್ರೇಯಕ್ಕೆ ಪಾತ್ರರಾಗಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು.  


ಭೌತಶಾಸ್ತ್ರದಲ್ಲಿ 11, ರಸಾಯನಶಾಸ್ತ್ರದಲ್ಲಿ 10 ಹಾಗೂ ಗಣಿತದಲ್ಲಿ ಒರ್ವ ವಿದ್ಯಾರ್ಥಿ ಈ ಸಾಧನೆ ಮೆರೆದಿದ್ದಾರೆ. 


ಮೂರು ವಿಷಯಗಳಲ್ಲಿ 99  ಪರ್ಸಂಟೈಲ್‌ಗಿಂತ ಅಧಿಕ ಇಬ್ಬರು ವಿದ್ಯಾರ್ಥಿಗಳು, 98 ಪರ್ಸಂಟೈಲ್‌ಗಿಂತ ಅಧಿಕ 10 ವಿದ್ಯಾರ್ಥಿಗಳು, 95 ಪರ್ಸಂಟೈಲ್‌ಗಿಂತ ಅಧಿಕ 45 ವಿದ್ಯಾರ್ಥಿಗಳು ಹಾಗೂ 90 ಪರ್ಸಂಟೈಲ್‌ಗಿಂತ ಅಧಿಕ 169 ವಿದ್ಯಾರ್ಥಿಗಳು ಪಡೆದಿದ್ದಾರೆ. 


ಶರತ್ ಸಂಗಮೇಶ್ ಬಿರಾದಾರ್ 99.3452732 ಪರ್ಸಂಟೈಲ್  ಗಳಿಸಿದರೆ, ಪ್ರದ್ಯುಮ್ನ ಭಟ್ 99.0713695, ಸಂಭವ್ ಪೊವಾರ್ 98.8748184, ವಿಶ್ವದೀಪ್ ಕೆ.ವಿ 98.787519, ಅದಿತಿ 98.7850161, ಯಶಸ್ ಎನ್.ವಿ 98.6075399, ಕಿಶೋರ್ ಆರ್. 98.5353856, ಮುಕಂದ್ ಅಶೋಕ್ 98.0751542, ಸಮನ್ಯು 98.3534329, ವಿನಯ್ ಎಚ್ ಆರ್. 98.3204697 ಪರ್ಸಂಟೈಲ್‌ ಪಡೆದಿದ್ದಾರೆ. 


ಅಖಿಲ ಭಾರತ ಮಟ್ಟದಲ್ಲಿ ಕ್ಯಾಟಗರಿ ವಿಭಾಗದಲ್ಲಿ  ಸ್ಪೂರ್ತಿ ಕೊಟಗಿ 195, ನಂದಿನಿ  279, ಭಗವತ್ ರಾಯ್ ಎಚ್.ಕಟ್ಲೂರ್ 799,ಶರತ್ ಸಂಗಮೇಶ್ 1046, ಪ್ರದ್ಯುಮ್ನ 1506, ಸಂಭವ್ ಪವಾರ್ 1888  ರ್‍ಯಾಂಕ್‌ ಪಡೆದಿದ್ದಾರೆ. 


ಒಟ್ಟು 334 ವಿದ್ಯಾರ್ಥಿಗಳು ಐಐಟಿ ಪರೀಕ್ಷೆಯಾದ ಜೆಇಇ- ಅಡ್ವಾನ್ಸ್‍ಗೆ ಅರ್ಹತೆ ಪಡೆದಿದ್ದಾರೆ.  ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೋ ಸದಾಕತ್ ಇದ್ದರು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top