'ಸ್ಮಾರ್ಟ್ ವೀಲ್ ಚೇರ್' ಆವಿಷ್ಕಾರಕ್ಕೆ ಪ್ರಶಸ್ತಿ
ನಿಟ್ಟೆ: ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಟ್ ಇನ್ನೋವೇಶನ್ ಕೌನ್ಸಿಲ್ ಹಾಗೂ ಅಟಲ್ ಇನ್ಕ್ಯೂಬೇಶನ್ ಸೆಂಟರ್ ನಿಟ್ಟೆ ಇದರ ಸಂಯುಕ್ತ ಆಶಯದಲ್ಲಿ ನಡೆದ ಮೂರು ದಿನಗಳ 'ನಿಟ್ಟೆ ಹೆಲ್ತ್ ಕೇರ್ ಇನ್ನೋವೇಶನ್ ಹ್ಯಾಕಥಾನ- 2023' ರಾಷ್ಟ್ರಮಟ್ಟದ ಸ್ಪರ್ಧೆಯ ಸಮಾರೋಪ ದಿನಾಂಕ ಮೇ.7 ರಂದು ನಿಟ್ಟೆಯ ಜಸ್ಟಿಸ್ ಕೆ. ಎಸ್. ಹೆಗ್ಡೆ ಸಭಾಂಗಣದಲ್ಲಿ ಜರುಗಿತು.ಈ ಹ್ಯಾಕಥಾನಲ್ಲಿ ಒಟ್ಟು 58 ತಂಡಗಳು ನೊಂದಾಯಿಸಿಕೊಂಡಿದ್ದು, 36 ತಂಡಗಳು ತಮ್ಮ ಆವಿಷ್ಕಾರಗಳನ್ನು ಪ್ರದರ್ಶಿಸಿದಿದ್ದು 116 ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದರು.
ಇದು ಬಹು ಶಿಸ್ತಿಯ ವೈದ್ಯಕೀಯ ಇಂಜಿನಿಯರಿಂಗ್ ಆವಿಷ್ಕಾರಗಳಾಗಿದ್ದು ತಜ್ಞರು ಮೆಂಟರುಗಳು ವಿವಿಧ ಹಂತಗಳಲ್ಲಿ ಆವಿಷ್ಕಾರಗಳನ್ನು ಪರಿಶೀಲಿಸಿದರು. ಅವುಗಳ ಪ್ರಾಯೋಗಿಕ ಅಳವಡಿಸುವಿಕೆಯ ಕುರಿತು ಚರ್ಚಿಸಲಾಯಿತು.
ವಿವಿಧ ಪರೀಕ್ಷೆಗಳಲ್ಲಿ ಯಶಸ್ವಿಯಾಗಿ ಮೂಡಿ ಬಂದ ತಂಡಗಳಿಗೆ ಚೆಕ್ ವಿತರಿಸಲಾಯಿತು. ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿ ಡಾ| ಸತೀಶ್ ಕುಮಾರ್ ಭಂಡಾರಿ ಅವರು ಸಮಾರೋಪ ಭಾಷಣ ಗೈದರು. ಅವರು ಮಾತನಾಡುತ್ತಾ ಉದ್ದಿಮೆಶಾಯಿತ್ವವನ್ನು ಪ್ರತಿಯೊಬ್ಬರಿಗೂ ಬೆಳೆಸಲು ಸಾಧ್ಯವಿದೆ, ಅದು ಕೇವಲ ಡಿಎನ್ಎ ವಿಷಯವಲ್ಲ ಎಂದರು.
ವಿಜೇತ ತಂಡಗಳು :
1. ಪ್ರಥಮ ಪ್ರಶಸ್ತಿ ವಿಜೇತರು
ಟೀಮ್ ಸ್ಮಾರ್ಟ್ ವಿಲ್ ಚೇರ್ ಫಾರ್ ಲೋಕೋ ಮೋಟರ್ ರೋಗಿಗಳಿಗೆ:-
ಆದಿತ್ಯ ಬಿಜು, ಅನುಶೂಲ್ ಶೆಟ್ಟಿ, ಡೈರೇನ್ ಡೇಸಾ, ಶ್ರೇಯಸ್ ಕದ್ರಿ.
2. 1st ರನ್ನರ್ ಆಫ್
ತಂಡ : ಫಾರ್ ಸೈಟ್
ಪರಾಗ್ ರೈ, ಅಲಲ್ ರಾಜೇ ಮಣಿ, ಪ್ರಕೃತಿ ಸುಜೀರ್
3. 2nd ರನ್ನರ್ ಆಫ್
ತಂಡ : ವರ್ಚುವಲ್ ರಿಯಾಲಿಟಿ ಬೈ ಸೈಕ್ಲಿಂಗ್ ಫಾರ್ ಗಂಟು ನೋವಿನ ರೋಗಿಗಳಿಗೆ
ವಿಜೇತ ವಿ, ರಮಾ ಕೆ .ಎಂ, ಶರತ್ ಪೂಜಾರಿ, ಶಶಿರ್ ಹೆಬ್ಬಾರ್
ಮತ್ತು
ತಂಡ: ಇನ್ ಸ್ಟ್ಯಂಟ್ಟ್ ಟೀ ಕ್ಯೂಬ್ಸೊ
ರಾಹುಲ್ ಆರ್ ಪಾಟೀಲ್.
ವಿಜೇತರಿಗೆ 50,000/-, 25000/-, 15000/, 15000/, ಚೆಕ್ಕುಗಳನ್ನು ಕುಲಪತಿಗಳು ವಿತರಿಸಿದರು. ಆವಿಷ್ಕಾರ ಪರೀಕ್ಷಕರಿಗೆ ಕುಲಪತಿ ಸ್ಮರಣಿಕೆ ನೀಡಿ ಗೌರವಿಸಿದರು.
ಎಐಸಿ ನಿಟ್ಟೆಯ ಸಿಇಒ ಡಾ| ಎ.ಪಿ. ಆಚಾರ್ ಸ್ವಾಗತಿಸಿದರು. ನಿಟ್ಟೆ ವಿವಿಯ ಸಂಶೋಧನೆ ಮತ್ತು ಪೇಟೆಂಟ್ ಸಲಹೆಗಾರದ ಡಾ| ಇಡ್ಯಾ ಕರುಣಾಸಾಗರ್ ಹ್ಯಾಕಥಾನ ಯೋಜನೆ ಕುರಿತು ಮಾಹಿತಿ ನೀಡಿದರು. ನಿಟ್ಟೆ ವಿವಿ ಐಐಸಿ ಅಧ್ಯಕ್ಷ ಡಾ| ಶ್ರೀನಿಕೇತನ್ ವಂದಿಸಿದರು. ಎಐಸಿ ನಿಟ್ಟೆಯ ಇಂಕ್ಯುಬೇಷನ್ ಮ್ಯಾನೇಜರ್ ಶ್ರೀ ಪುನೀತ್ ರೈ, ಬಿಜಿನೆಸ್ ಡೆವಲಪ್ಮೆಂಟ್ ಎಕ್ಸಿಕ್ಯೂಟಿವ್ ಶ್ರೀ ಮನೋಹರ್ ರೆಡ್ಡಿ, ಫಿನಾನ್ಸ್ ವಿಭಾಗದ ಮ್ಯಾನೇಜ್ಮೆಂಟ್ ಎಕ್ಸಿಕ್ಯೂಟಿವ್ ದೀಕ್ಷಾ ರೈ ಹಾಗೂ ಆಫೀಸ್ ಎಸಿಸ್ಟೆಂಟ್ ಹರೀಶ್ ಕಾಮತ್ ಸಹಕರಿಸಿದರು. ನಿಟ್ಟೆಯ ಜೆ ಕೆ ಎಸ್. ಎಚ್. ಐ. ಎಂ. ನ ಪ್ರಾಧ್ಯಾಪಕ ಡಾ|.ಸುಧೀರ್ ರಾಜ್ ಕೆ ಕಾರ್ಯಕ್ರಮ ನಿರೂಪಿಸಿದರು. ಎಂ.ಬಿ.ಎ ವಿದ್ಯಾರ್ಥಿ ಕಾರ್ತಿಕ್ ಶೆಟ್ಟಿ ತಾಂತ್ರಿಕ ಸಹಕಾರ ನೀಡಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ