ಸಂಸದರ ಕ್ಷೇತ್ರ ವ್ಯಾಪ್ತಿಯಲ್ಲಿ 38,226.68 ಕೋಟಿ ರೂ.ಗಳ ಯೋಜನೆ ಅನುಷ್ಠಾನ

Upayuktha
0

ಅಭಿವೃದ್ಧಿಯ ರಥ ಮುನ್ನಡೆಯಲು ಬಿಜೆಪಿ ಗೆಲುವು ಅನಿವಾರ್ಯ: ಕೃಷ್ಣಪ್ಪ ಪೂಜಾರಿ



ಮಂಗಳೂರು: ಭಾರತೀಯ ಜನತಾ ಪಕ್ಷದ ರಾಜ್ಯಾಧ್ಕಕ್ಷರು ಹಾಗೂ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಕ್ಷೇತ್ರದ ವ್ಯಾಪ್ತಿಯಲ್ಲಿ ಇದುವರೆಗೆ ಒಟ್ಟಾರೆ 38,226.68 ಕೋಟಿ ರೂ.ಗಳ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಕೇಂದ್ರ ಸರಕಾರದ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ದಕ್ಷಿಣ ಕನ್ನಡ ಸದಸ್ಯರಾದ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಮಾಹಿತಿ ನೀಡಿದರು.


ರಾಜ್ಯದ ಜನತೆಗೆ ಬಿಜೆಪಿಯೇ ಭರವಸೆಯಾಗಿದ್ದು, ತಾರತಮ್ಯವಿಲ್ಲದೆ ಅಭಿವೃದ್ಧಿ ಯೋಜನೆಗಳ ಲಾಭವನ್ನು ಜನತೆಗೆ ತಲುಪಿಸುವಲ್ಲಿ ಪಕ್ಷ ನಿರಂತರವಾಗಿ ಕೆಲಸ ಮಾಡುತ್ತಿದೆ. ಭಾರತವನ್ನು ಜಗತ್ತಿನಲ್ಲೇ ಅಗ್ರಗಣ್ಯ ಅರ್ಥಿಕತೆಯಾಗಿ, 5 ಟ್ರಿಲಿಯನ್ ಗಾತ್ರದ ಅರ್ಥ ವ್ಯವಸ್ಥೆಯಾಗಿ ಬೆಳೆಸುವ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಗೆ ರಾಜ್ಯ ಸರಕಾರವೂ ಒತ್ತಾಸೆಯಾಗಿ ನಿಲ್ಲಬೇಕಾದರೆ ರಾಜ್ಯದಲ್ಲಿ ಪೂರ್ಣ ಬಹುಮತದ ಬಿಜೆಪಿ ಸರಕಾರ ಬರಬೇಕು ಎಂದು ಅವರು ನುಡಿದರು.


ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಲೋಕಸಭಾ ಸದಸ್ಯರ ಅನುದಾನದಿಂದ ಪ್ರತಿ ವಿಧಾನಸಭಾ ಕ್ಷೇತ್ರವಾರು ಆಗಿರುವ ಅಭಿವೃದ್ಧಿ ಯೋಜನೆಗಳ ವಿವರ ನೀಡಿದರು.


ಆದರ್ಶ ಗ್ರಾಮ ಯೋಜನೆಯಡಿ ಸುಳ್ಯದ ಬಳ್ಪ ಎಂಬ ಕುಗ್ರಾಮದಲ್ಲಿ 33 ಕೋಟಿ ರೂ.ಗಳ ಅನುದಾನದಲ್ಲಿ ಸಮಗ್ರ ಅಭಿವೃದ್ಧಿ ಮಾಡಲಾಗಿದೆ. ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಚತುಷ್ಫಥ ನಿರ್ಮಾಣಕ್ಕೆ ಅನುದದಾನ ದೊರಕಿಸಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಬಿಜೆಪಿಯ ಯುವ ನಾಯಕರಾದ ಪ್ರವೀಣ್ ನೆಟ್ಟಾರು ಮತಾಂಧರಿಂದ ಹತ್ಯೆಗೊಳಗಾದಾಗ ತಕ್ಷಣ ಧಾವಿಸಿ ಬಂದು ಸರಕಾರದಿಂದ 25 ಲಕ್ಷ ರೂ, ಸಂಘ ಪರಿವಾರದಿಂದ 25 ಲಕ್ಷ ರೂ ಸಹಾಯ ಮತ್ತು ಅಗಲಿದ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ನೂತನ ಮನೆಯನ್ನು ಸ್ವಂತ ಖರ್ಚಿನಿಂದ ನಿರ್ಮಿಸಿಕೊಟ್ಟಿದ್ದಾರೆ ಎಂದು ಕೃಷ್ಣಪ್ಪ ಪೂಜಾರಿ ಹೇಳಿದರು.


ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 6 ಗ್ರಾಮರಸ್ತೆಗಳು, ಪರಿಶೀಷ್ಟ ಜಾತಿ/ಪಂಗಡಗಳ ಕಾಲೋನಿಗಳಿಗೆ ರಸ್ತೆ ನಿರ್ಮಿಸಲಾಗಿದೆ. ಬಂಟ್ವಾಳ, ಬೆಳ್ತಂಗಡಿ, ಸುಳ್ಯ ಸೇರಿದಂತೆ ಹಲವು ಕಡೆ ಗ್ರಾಮ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಧರ್ಮಸ್ಥಳದಲ್ಲಿ ಮಿನಿ ವಿಮಾನ ನಿಲ್ದಾಣಕ್ಕೆ ಶಾಸಕರ ಒತ್ತಾಸೆಯೊಂದಿಗೆ ಕೇಂದ್ರ ಸರಕಾರದ ಅನುಮೋದನೆ ಪಡೆಯಲು ಶ್ರಮಿಸಲಾಗುತ್ತಿದೆ. ಉಜಿರೆಯ ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನಕ್ಕೆ ಸಂಸದರು 25 ಲಕ್ಷ ರೂ  ಅನುದಾನ ಒದಗಿಸಿದ್ದಾರೆ.


ನವಮಂಗಳೂರು ಬಂದರಿನಲ್ಲಿ ಕಂಟೈನರ್ ಮತ್ತು ಕಾರ್ಗೊ ನಿರ್ವಹಣೆಗೆ ಗ್ಯಾಸ್ ಟರ್ಮಿನಲ್, ತೈಲ ಸಂಗ್ರಹ ಟ್ಯಾಂಕ್ ನಿರ್ಮಾಣ, ಕುಳಾಯಿಯಲ್ಲಿ ಮೀನುಗಾರಿಕಾ ಹಾರ್ಬರ್ ನಿರ್ಮಾಣ, ಎಂಆರ್ಪಿಎಲ್ನ ಉಪ್ಪು ನೀರು ಶುದ್ಧೀಕರಣ ಘಟಕ, ಕೆಐಓಸಿಎಲ್ನ ಪೆಲ್ಲೆಟ್ ಪ್ಲಾಂಟ್ನಲ್ಲಿ ವರ್ಟಿಕಲ್ ಪ್ರೆಸ್ಸರ್ ಫಿಲ್ಟರ್ ಯುನಿಟ್ ಮತ್ತು ಗ್ಯಾಸ್ ಕನ್ವರ್ಷನ್ ಪ್ಲಾಂಟ್, ಬ್ಲಾಸ್ಟ್ ಫರ್ನೇಸ್ ಯುನಿಟ್ ನವೀಕರಣ ಮತ್ತು ಇನ್ನಿತರ ಅಭಿವೃದ್ಧಿ ಕಾಮಗಾರಿಗಳಿಗೆ ಸಾವಿರಾರು ಕೋಟಿ ರೂ,.ಗಳ ಅನುದಾನವನ್ನು ಕೇಂದ್ರ ಸರಕಾರ ನೀಡುವಲ್ಲಿ ಸಂಸದರು ಶ್ರಮಿಸಿರುತ್ತಾರೆ.


ಕೇಂದ್ರ ಸರಕಾರದ ಸ್ಮಾರ್ಟ್ ಸಿಟಿ ಯೋಜನೆಯ ಮೂಲಕ ಮಂಗಳೂರು ನಗರಕ್ಕೆ ಸಾವಿರಾರು ಕೋಟಿ ರೂ.ಗಳ ಅನುದಾನವನ್ನು ತಂದು ಎಲ್ಲಾ ರಸ್ತೆಗಳ ಕಾಂಕ್ರಿಟೀಕರಣ, ಕದ್ರಿ ಪಾರ್ಕ್ ಅಭಿವೃದ್ಧಿ, ಲೇಡಿಗೋಶನ್ ಆಸ್ಪತ್ರೆಯಲ್ಲಿ ಆಮ್ಲಜನಕ ಉತ್ಪಾದನಾ ಘಟಕ, ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ 40 ವೆಂಟಿಲೇಟರ್ಸ್, ಸಂಸದರ ಶಿಫಾರಸಿನ ಮೇರೆಗೆ ಕೆಐಓಸಿಎಲ್ ವತಿಯಿಂದ ಜಿಲ್ಲಾಡಳಿತಕ್ಕೆ 16 ಲಕ್ಷ ರೂ ವೆಚ್ಚದ ಆಂಬ್ಯುಲೆನ್ಸ್ ಕೊಡುಗೆ, ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ  ಗಾಳಿಯಿಂದ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆ,- ಇನ್ನಿತರ ಅಭಿವೃದ್ಧಿ ಯೋಜನೆಗಳಿಗೆ ಸಂಸದರು ಸಹಕರಿಸಿರುತ್ತಾರೆ.

2023-24ನೇ ಸಾಲಿನ ಬಜೆಟ್ನಲ್ಲಿ ದ.ಕ ಜಿಲ್ಲೆಯ ಒಟ್ಟು 4 ರೈಲು ನಿಲ್ದಾಣಗಳನ್ನು ಅಮೃತ ಭಾರತ್ ಸ್ಟೇಶನ್ ಯೋಜನೆ ಅಡಿಯಲ್ಲಿ ಅಭಿವೃದ್ಧಿಪಡಿಸಲು ಅನುಮೋದನೆ ನೀಡಲಾಗಿದೆ.


ಮುದ್ರಾ ಲೋನ್:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುದ್ರಾ ಲೋನ್ ಸಾಲ ಯೋಜನೆಯಲ್ಲಿ ಒಟ್ಟು 1,24,035 ವಿವಿಧ ಖಾತೆಗಳಿಗೆ ಒಟ್ಟು ರೂ 1,558 ಕೋಟಿ ಸಾಲ ನೀಡಲಾಗಿದೆ.

ಪಿಎಂ ಉಜ್ವಲಾ ಗ್ರಾಸ್ ಸಂಪರ್ಕ ಯೋಜನೆಯಲ್ಲಿ ಒಟ್ಟು 52,096 ಕುಟುಂಬಗಳಿಗೆ ಉಚಿತ ಗ್ಯಾಸ್ ಸಂಪರ್ಕ ನೀಡಲಾಗಿದೆ.

ಪ್ರಧಾನ ಮಂತ್ರಿ ಆತ್ಮ ನಿರ್ಭರ ಅನ್ವಯ ಸಣ್ಣ ಹಾಗೂ ಅತಿ ಸಣ್ಣ ಆಹಾರ ಸಂಸ್ಕರಣಾ ಘಟಕಗಳನ್ನು ಸ್ತಾಪಿಸಲು 75 ಘಟಕಗಳಿಗೆ ಒಟ್ಟು 9.17 ಕೋಟಿ ರೂ ಸಾಲ ನೀಡಲಾಗಿದೆ.

ಕೃಷಿ ಬೆಳೆ ವಿಮಾ ಯೋಜನೆಯಲ್ಲಿ ದ.ಕ ಜಿಲ್ಲೆಯ ಒಟ್ಟು 92,857 ಪ್ರಕರಣಗಳಿಗೆ ರೂ 374.50 ಕೋಟಿ ವಿಮೆ ನೀಡಲಾಗಿದೆ.

ಸ್ವಸಹಾಯ ಸಂಘಕ್ಕೆ 2022ರ ಡಿಸೆಂಬರ್ ವರೆಗೆ 1,19,428 ಗುಂಪುಗಳಿಗೆ 3,062.23 ಕೊಟಿ ಸಾಲ ನೀಡಲಾಗಿದೆ.

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಅಡಿಯಲ್ಲಿ 2021ರಿಂದ 23ರ ವರೆಗೆ ಕಾರ್ಡ್ದಾರರಿಗೆ ಒಟ್ಟು 5,106 ಕೋಟಿ ರೂ ಸಾಲ ನೀಡಲಾಗಿದೆ.

ಪ್ರಧಾನ ಮಂತ್ರಿ ಜನ್ಧನ್ ಯೋಜನೆ ಮೂಲಕ ನಮ್ಮ ಜಿಲ್ಲೆಯಲ್ಲಿ ಓವರ್ ಡ್ರಾಫ್ಟ್  ಪಡೆದವರು 11,566 ಮಂದಿ.

ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯಲ್ಲಿ ಪರಿಶಿಷ್ಟ ಜಾತಿ/ ಪಂಗಡದ ಮಹಿಳೆಯರಿಗೆ ಒಟ್ಟು ರೂ 29.11 ಕೋಟಿ ರೂ ಸಾಲ ನೀಡಲಾಗಿದೆ.


ಕೇಂದ್ರ ಸರಕಾರದ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ದಕ್ಷಿಣ ಕನ್ನಡ ಸದಸ್ಯರಾದ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ರಘುರಾಮ ಮೊಗೇರ ಪುನರೂರು,  ಜಯಶ್ರೀ ಕುಲಾಲ್ ಕೋಟೆಕಾರ್,  ರಾಮದಾಸ್ ಹಾರಾಡಿ ಪುತ್ತೂರು ಮತ್ತು ಬಿಜೆಪಿ ಮುಖಂಡರಾದ ಸಂಜಯ್ ಪ್ರಭು ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top