ಭಗವಂತನಿರುವುದು ಗುಡಿಯಲ್ಲಲ್ಲ, ಸಮಾಜದ ಸರ್ವರ ಹೃದಯದಲ್ಲಿ: ಪೇಜಾವರ ಶ್ರೀ

Upayuktha
0

ಕುಕ್ಕಿಕಟ್ಟೆಯ ಶ್ರೀಕೃಷ್ಣ ಬಾಲನಿಕೇತನದ ವಾರ್ಷಿಕೋತ್ಸವ 


ಬ್ರಹ್ಮಾವರ: ಕುಕ್ಕಿಕಟ್ಟೆಯ ಶ್ರೀ ಕೃಷ್ಣ ಬಾಲನಿಕೇತನದಲ್ಲಿ ವಾರ್ಷಿಕೋತ್ಸವದಲ್ಲಿ ಅಧ್ಯಕ್ಷತೆ ವಹಿಸಿದ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮಾತಾಡುತ್ತಾ ಭಗವಂತ ಗುಡಿಯಲ್ಲಿ ಮಾತ್ರವಲ್ಲ ಎಲ್ಲರ ಹೃದಯದಲ್ಲಿಯು ನೆಲೆಸಿದ್ದು ಅವಕಾಶ ವಂಚಿತ ಮಕ್ಕಳ ಸೇವೆಯು ದೇವರ ಪೂಜೆಯೆ ಆಗಿದೆ ಎಂದು ತಿಳಿಸಿ ಶ್ರೀ ಕೃಷ್ಣ ಬಾಲನಿಕೇತನವು ಕಳೆದ ಮೂವತ್ತಮೂರು ವರ್ಷಗಳಲ್ಲಿ ಸಮಾಜದ ಎಲ್ಲರ ಸಹಕಾರದಿಂದ ಅನೇಕ ಮಕ್ಕಳ ಬಾಳಿಗೆ ಬೆಳಕಾಗಿರುವುದು ಸ್ತುತ್ಯ ಎಂದು ಹೇಳಿದರು.


ಪ್ರಾರಂಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಪ್ರೊ.ಕಮಲಾಕ್ಷರು ಸ್ವಾಗತಿಸಿದ ಬಳಿಕ ಕಾರ್ಯದರ್ಶಿ ರಾಮಚಂದ್ತ ಉಪಾಧ್ಯಾಯರು ವಾರ್ಷಿಕ ವರದಿ ಮಂಡಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.


ಇದೇ ಸಂದರ್ಭದಲ್ಲಿ ಕೊಡಮಾಡುವ ಈ ವರ್ಷದ ಬಾಲವಾತ್ಸಲ್ಯ ಸಿಂಧು ಪ್ರಶಸ್ತಿಗಯನ್ನು ಕುಂದಾಪುರದ ಕೋಣಿಯ ಮಾನಸ ವಿಶೇಷ ಮಕ್ಕಳ ಶಾಲೆಯನ್ನು ನೆದರ್ಲ್ಯಾಂಡಿನ ಮಾರ್ಜ್ ವಾನ್ ಡೆನ್ ಬ್ರಾಂಡ್ ರೊಡನೆ ಸೇವಾಭಾವದಿಂದ ವಿಕಲ ಚೇತನ ಮಕ್ಕಳ ಸೇವಾ ಸಂಸ್ಥೆ `ಮಾನಸ ಜ್ಯೋತಿ'ಯನ್ನು ಸೇರಿಕೊಂಡು ಅದನ್ನು ಒಂದು ಪರಿಪೂರ್ಣ ವಿಶೇಷ ಮಕ್ಕಳ ಅಭಿವೃದ್ಧಿ ಸಂಸ್ಥೆಯಾಗಿ ಮಾಡುವಲ್ಲಿ ಪರಿಶ್ರಮಿಸಿದ ಕುಮಾರಿ ಶೋಭಾ ಮಧ್ಯಸ್ಥರಿಗೆ ನೀಡಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿ ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ಗೌರವಾನ್ವಿತ ಪ್ರಧಾನ ನ್ಯಾಯಾಧೀಶರಾದ ರವೀಂದ್ರ ಅರಿಯವರು, ತಮ್ಮ ಅನುಭವವನ್ನು ಹಂಚಿಕೊಂಡು ಇಂತಹ ಕಾರ್ಯಕ್ರಮದಲ್ಲಿ ಬಾಗವಹಿಸುದದಕ್ಕೆ ಹರ್ಷ ವ್ಯಕ್ತಪಡಿಸಿದರು.


ಕರ್ಣಾಟಕ ಬ್ಯಾಂಕ್‌ ನಿರ್ದೇಶಕ ಮತ್ತು ಪಂಜಾಬ್ ನೇಶನಲ್ ಬ್ಯಾಂಕ್ ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕ ಬಾಲಕೃಷ್ಣ ಅಲ್ಸೆಯವರು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ನಡೆಸುತ್ತಿರುವ ಈ ಸಂಸ್ಥೆಯ ಕಾರ್ಯಕ್ರಮಗಳನ್ನು ಕೊಂಡಾಡಿ ತಮ್ಮ ಮತ್ತು ಸಂಸ್ಥೆಯ ಸಂಬಂಧಗಳು ಮುಂದುವರಿಯಲೆಂದು ಆಶಿಸಿದರು.


ಮೈಸೂರು ಮರ್ಕಂಟೈಲ್ ಕಂಪನಿಯ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಅಲ್ಲದೆ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟಬಲ್ ಸೊಸೈಟಿಯ ಅಧ್ಯಕ್ಷರಾದ ಎಚ್.ಎಸ್ ಶೆಟ್ಟಿ ಯವರು ತಮ್ಮ ಜೀವನಾನುಭವವನ್ನು ಹಂಚಿಕೊಂಡು ಮಕ್ಕಳಿಗೆ ಕಿವಿಮಾತು ಹೇಳಿದ್ದಲ್ಲದೆ ಸಂಸ್ಥೆಗೆ ಒಂದು ಉತ್ತಮ ದೇಣಿಗೆ ನೀಡಿ ಶುಭ ಹಾರೈಸಿದರು.


ಈ ಬಾಲನಿಕೇತನದ ಆಡಳಿತ ಮಂಡಳಿ ಸದಸ್ಯ ರಾಘವೇಂದ್ರ ರಾಯರು ದನ್ಯವಾದ ಸಮರ್ಪಿಸಿದರು. ಗುರುರಾಜ ಭಟ್ ರು ಕಾರ್ಯಕ್ರಮ ನಿರ್ವಹಣೆ ಮಾಡಿದರು.ನಂತರ  ಹೇಮಂತ ಶೆಟ್ಟಿಗಾರರ ನೇತೃತ್ವದಲ್ಲಿ ಮಕ್ಕಳಿಂದ ಜಾನಪ ನೃತ್ಯ ಪ್ರದರ್ಶನ ನೀಡಲಾಯಿತು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top