ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಶೇಷಾದ್ರಿಪುರದ ಪ್ಲಾಟ್ ಫಾರ್ಮ್ ರಸ್ತೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮೇ 30, ಮಂಗಳವಾರ ಸಂಜೆ 6 ಗಂಟೆಗೆ ಪ್ರಶಾಂತನಗರದ ಶ್ರೀ ಲಕ್ಷ್ಮೀ ಹಯಗ್ರೀವ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಶ್ರೀ ಆಯನೂರು ಮಧುಸೂದನಾಚಾರ್ ರಿಂದ ಧಾರ್ಮಿಕ ಉಪನ್ಯಾಸ.
ಮೇ 31, ಬುಧವಾರ ಸಂಜೆ 6 ಗಂಟೆಗೆ ಮಲ್ಲೇಶ್ವರದ ಸ್ತುತಿ ವಾಹಿನಿ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಶ್ರೀ ಆಯನೂರು ಮಧುಸೂದನಾಚಾರ್ ರಿಂದ ಧಾರ್ಮಿಕ ಉಪನ್ಯಾಸ.
ಜೂನ್ 1, ಗುರುವಾರ ಸಂಜೆ 6-30ಕ್ಕೆ "ಹರಿನಾಮ ಸಂಕೀರ್ತನೆ". ಗಾಯನ : ಗೀತಾ ಭತ್ತದ್, ಕೀ-ಬೋರ್ಡ್ : ಬಿ.ಆರ್. ಪ್ರಕಾಶ್, ತಬಲಾ : ಶ್ರೀನಿವಾಸ ಕಾಖಂಡಕಿ.
ಜೂನ್ 2, ಶುಕ್ರವಾರ ಸಂಜೆ 6-00 ಗಂಟೆಗೆ ಶೇಷಾದ್ರಿಪುರದ ಶ್ರೀ ಸುಶಮೀಂದ್ರ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಶ್ರೀ ಆಯನೂರು ಮಧುಸೂದನಾಚಾರ್ ರಿಂದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಟಿ ಟಿ ಡಿ ಹೆಚ್.ಡಿ.ಪಿ.ಪಿ.ಯ ಸಂಚಾಲಕರಾದ ಡಾ|| ಪಿ. ಭುಜಂಗರಾವ್ ಅವರು ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ