24ನೇ ಅಂತರ್ ಕಾಲೇಜು ಅತ್ಲೆಟಿಕ್ ಸ್ಪರ್ಧೆಯಲ್ಲಿ ಪುತ್ತೂರಿನ ವಿಸಿಇಟಿ ದಾಖಲೆ

Upayuktha
0

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಿದ್ಯಾರ್ಥಿಗಳ ತಂಡವು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ 24 ನೇ ಅಂತರ್ ಕಾಲೇಜು ಅತ್ಲೆಟಿಕ್ ಸ್ಪರ್ಧೆಯಲ್ಲಿ 4 ನೂತನ ಕೂಟ ದಾಖಲೆಗಳ ಸಹಿತ 16 ಚಿನ್ನದ ಪದಕ, 11 ಬೆಳ್ಳಿಯ ಪದಕ ಮತ್ತು 11 ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ಮಹಿಳೆಯರ ವಿಭಾಗದ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿ, ಮಹಿಳೆಯರ ವಿಭಾಗದ ಚಾಂಪಿಯನ್‍ಶಿಪ್ ಟ್ರೋಫಿ, ಪುರುಷರ ವಿಭಾಗದ ಚಾಂಪಿಯನ್‍ನಲ್ಲಿ ಪ್ರಥಮ ರನ್ನರ್ ಅಪ್ ಟ್ರೋಫಿ ಹಾಗೂ ಕೂಟದ ಸಮಗ್ರ ಪ್ರಶಸ್ತಿಯನ್ನು ಪಡೆದು ದಾಖಲೆ ನಿರ್ಮಿಸಿದ್ದಾರೆ.


ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆದ ಈ ಕ್ರೀಡಾಕೂಟದಲ್ಲಿ ವಿಶ್ವೇಶ್ವರಯ್ಯ ತಾಂತಿಕ ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟ 200ಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳ ಕ್ರೀಡಾಪಟುಗಳು ಭಾಗವಹಿಸಿದ್ದರು. 136 ಅಂಕಗಳೊಂದಿಗೆ ತಂಡವೊಂದು ಸಮಗ್ರ ಪ್ರಶಸ್ತಿಯನ್ನು ಪಡೆದದ್ದು ವಿಶ್ವವಿದ್ಯಾನಿಲಯದ ಚರಿತ್ರೆಯಲ್ಲಿಯೇ ಪ್ರಥಮವಾಗಿದೆ. 


ಮಹಿಳೆಯರ ವಿಭಾಗದಲ್ಲಿ 

ಟ್ರಿಪಲ್‍ಜಂಪ್, 4x400ಮೀ ಮಿಕ್ಸೆಡ್‍ರಿಲೇ ಸ್ಪರ್ಧೆಗಳಲ್ಲಿ ನೂತನ ಕೂಟ ದಾಖಲೆಗಳನ್ನು ನಿರ್ಮಿಸಿ ಲಾಂಗ್‍ಜಂಪ್ ಹಾಗೂ 4x100ಮೀ ರಿಲೇ ಸ್ಪರ್ಧೆಗಳಲ್ಲಿ ಚಿನ್ನದ ಪಡೆದ ದ್ವಿತೀಯ ವರ್ಷದ ಎಂಬಿಎ ವಿಭಾಗದ ವಿದ್ಯಾರ್ಥಿನಿ ಪವಿತ್ರ ಜಿ ಕೂಟದ ಅತ್ಯುತ್ತಮ ಮಹಿಳಾ ಕ್ರೀಡಾ ಪಟುವಾಗಿ ಹೊರಹೊಮ್ಮಿದ್ದಾರೆ. 


ದ್ವಿತೀಯ ವರ್ಷದ ಎಂಬಿಎ ವಿಭಾಗದ ವಿದ್ಯಾರ್ಥಿನಿ ರಕ್ಷಿತ ಐ 20ಕಿಮೀ ನಡಿಗೆ ಸ್ಪರ್ಧೆಯಲ್ಲಿ ಹಾಗೂ 4x400ಮೀ ಮಿಕ್ಸೆಡ್ ರಿಲೇ ಸ್ಪರ್ಧೆಗಳಲ್ಲಿ  ನೂತನ ಕೂಟ ದಾಖಲೆಯನ್ನು ನಿರ್ಮಿಸಿದ್ದು, 5000ಮೀ ಓಟದಲ್ಲಿ ಚಿನ್ನ ಹಾಗೂ 4x400ಮೀ ರಿಲೇಯಲ್ಲಿ ಬೆಳ್ಳಿಯಪದಕಗಳನ್ನು ಗಳಿಸಿಕೊಂಡಿದ್ದಾರೆ.


ಪೋಲ್‍ವಾಲ್ಟ್ ಸ್ಪರ್ಧೆಯಲ್ಲಿ ಪ್ರಥಮ ವರ್ಷದ ಎಂಬಿಎ ವಿದ್ಯಾರ್ಥಿನಿ ಜಯಶ್ರೀ ಬಿ ನೂತನ ಕೂಟ ದಾಖಲೆ ಮಾಡಿದ್ದು, ಹೆಫ್ಟತ್ಲಾನ್ ಹಾಗೂ 4x100ಮೀ ರಿಲೇಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

ಪ್ರಥಮ ವರ್ಷದ ಎಂಬಿಎ ವಿಭಾಗದ ವಿಧ್ಯಾರ್ಥಿನಿ ಹೈಜಂಪ್, 100ಮೀ ಹರ್ಡಲ್ಸ್ ಹಾಗೂ 4x100ಮೀ ರಿಲೇ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದಾರೆ.

ದ್ವಿತೀಯ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗದ ವಿದ್ಯಾರ್ಥಿನಿ ವಿದ್ಯಾ ಸಿ ಎಸ್ 10ಕಿಮೀ ಓಟದಲ್ಲಿ ಚಿನ್ನ, 21ಕಿಮೀ ಹಾಫ್ ಮ್ಯಾರಥಾನ್‍ನಲ್ಲಿ ಚಿನ್ನ ಹಾಗೂ 20ಕಿಮೀ ನಡಿಗೆಯಲ್ಲಿ ಬೆಳ್ಳಿಯ ಪದಕ ಗೆದ್ದುಕೊಂಡಿದ್ದಾರೆ.


ಅಂತಿಮ ವರ್ಷದ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗದ ವಿದ್ಯಾರ್ಥಿನಿ ಮೇಘನಾ.ಪಿ.ಇ 400ಮೀ ಹರ್ಡಲ್ಸ್‍ನಲ್ಲಿ ಚಿನ್ನ, ಹೈಜಂಪ್‍ನಲ್ಲಿ ಬೆಳ್ಳಿ ಹಾಗೂ 4x400ಮೀ ರಿಲೇಯಲ್ಲಿ ಬೆಳ್ಳಿಯ ಪದಕಗಳನ್ನು ಗಳಿಸಿಕೊಂಡಿದ್ದಾರೆ.

ಪ್ರಥಮ ಕಂಪ್ಯೂಟರ್ ಸೈನ್ಸ್ ವಿಭಾಗದ ಹರ್ಷಲತಾ ಟಿ 4x100ಮೀ ರಿಲೇಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

ಪ್ರಥಮ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದ ಜೀಕ್ಷಿತಾ.ಕೆ 4x400ಮೀ ರಿಲೇಯಲ್ಲಿ ಬೆಳ್ಳಿ, 800ಮೀ ಹಾಗೂ 1500 ಮೀಟರ್ ಓಟದಲ್ಲಿ ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ.

ಪ್ರಥಮ ವರ್ಷದ ಡಾಟಾ ಸೈನ್ಸ್ ವಿಭಾಗದ ಅಶ್ವಿನಿ 4x400ಮೀ ರಿಲೇಯಲ್ಲಿ ಬೆಳ್ಳಿ ಹಾಗೂ 400ಮೀ ಓಟದಲ್ಲಿ ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ.

ದ್ವಿತೀಯ ಕಂಪ್ಯೂಟರ್ ಸೈನ್ಸ್ ವಿಭಾಗದ ಮಂಜುಶ್ರೀ.ಎ 10ಕಿಮೀ ಓಟದಲ್ಲಿ ಹಾಗೂ 21ಕಿಮೀ ಹಾಫ್ ಮ್ಯಾರಥಾನ್‍ನಲ್ಲಿ ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ.


ಅಂತಿಮ ವರ್ಷದ ಮೆಕ್ಯಾನಿಕಲ್ ವಿಭಾಗದ ಪ್ರೇರಣಾ ಕೆಮ್ಮಿಂಜೆ ಹ್ಯಾಮರ್ ಥ್ರೋನಲ್ಲಿ ಬೆಳ್ಳಿ ಪದಕ, ಪ್ರಥಮ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದ ಸಿಂಚನಾ.ವಿ.ಎಸ್ ಪೋಲ್‍ವಾಲ್ಟ್‍ನಲ್ಲಿ ಬೆಳ್ಳಿಯ ಪದಕ, ಪ್ರಥಮ ಆರ್ಟಿಫೀಷಿಯಲ್ ಇಂಟೆಲಿಜೆನ್ಸ್ ವಿಭಾಗದ ಚೈತನ್ಯ ಎ ಎನ್ 100ಮೀ ಹರ್ಡಲ್ಸ್‍ನಲ್ಲಿ ಬೆಳ್ಳಿಯ ಪದಕ ಗೆದ್ದುಕೊಂಡಿದ್ದಾರೆ.


ಫುರುಷರ ವಿಭಾಗದಲ್ಲಿ

ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿ ಲೋಹಿತ್ 4x400ಮೀ ಮಿಕ್ಸೆಡ್ ರಿಲೇಯಲ್ಲಿ  ನೂತನ ಕೂಟ ದಾಖಲೆಯೊಂದಿಗೆ ಚಿನ್ನ, 4x100ಮೀ ರಿಲೇಯಲ್ಲಿ ಚಿನ್ನ, 100ಮೀ ಓಟದಲ್ಲಿ ಬೆಳ್ಳಿ ಹಾಗೂ 200ಮೀ ಓಟದಲ್ಲಿ ಬೆಳ್ಳಿ ಪದಕದ ಸಾಧನೆಯನ್ನು ಮಾಡಿದ್ದಾರೆ.


ತೃತೀಯ ಮೆಕ್ಯಾನಿಕಲ್ ವಿಭಾಗದ ಶರತ್.ಕೆ.ಎಸ್ 4x400ಮೀ ಮಿಕ್ಸೆಡ್ ರಿಲೇಯಲ್ಲಿ  ನೂತನ ಕೂಟ ದಾಖಲೆಯೊಂದಿಗೆ ಚಿನ್ನ, 4x400ಮೀ ರಿಲೇಯಲ್ಲಿ ಬೆಳ್ಳಿ, 400ಮೀ ಓಟದಲ್ಲಿ ಕಂಚು ಹಾಗೂ 800ಮೀ ಓಟದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

ತೃತೀಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಅಭಿರಂಜನ್.ಎಚ್ 100ಮೀ ಓಟದಲ್ಲಿ ಚಿನ್ನ ಹಾಗೂ 4x100ಮೀ ರಿಲೇಯಲ್ಲಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.

ಅಂತಿಮ ವರ್ಷದ ಮೆಕ್ಯಾನಿಕಲ್ ವಿಭಾಗದ ಕಿಶನ್.ಎ ಹ್ಯಾಮರ್ ಥ್ರೋನಲ್ಲಿ ಚಿನ್ನ, ತೃತೀಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಭರತ್‍ರಾಜ್.ಕೆ 4x100ಮೀ ರಿಲೇಯಲ್ಲಿ ಚಿನ್ನ, ದ್ವಿತೀಯ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ವಿಭಾಗದ ಜಗದೀಶ.ಕೆ 4x100ಮೀ ರಿಲೇಯಲ್ಲಿ ಚಿನ್ನದ  ಪದಕ ಗೆದ್ದುಕೊಂಡಿದ್ದಾರೆ


ತೃತೀಯ ಕಂಪ್ಯೂಟರ್ ಸೈನ್ಸ್ ವಿಭಾಗದ ರಂಜಿತ್.ಪಿವಿ ಜಾವೆಲಿನ್ ಎಸೆತದಲ್ಲಿ ಬೆಳ್ಳಿ, ತೃತೀಯ ಎಲೆಕ್ಟ್ರಾನಿಕ್ಸ್ ವಿಭಾಗದ ಸೋಮಣ್ಣ ಎಂ ಡಿ 4x400ಮೀ ರಿಲೇಯಲ್ಲಿ ಬೆಳ್ಳಿ, ತೃತೀಯ ಎಲೆಕ್ಟ್ರಾನಿಕ್ಸ್ ವಿಭಾಗದ ವೈಭವ್ ನಾಣಯ್ಯ 4x400ಮೀ ರಿಲೇಯಲ್ಲಿ ಬೆಳ್ಳಿ, ಅಂತಿಮ ಎಲೆಕ್ಟ್ರಾನಿಕ್ಸ್ ವಿಭಾಗದ ಸನತ್ ಶೆಟ್ಟಿ.ಪಿ 4x400ಮೀ ರಿಲೇಯಲ್ಲಿ ಬೆಳ್ಳಿಯ ಪದಕ ಗೆದ್ದುಕೊಂಡಿದ್ದಾರೆ.

ಪ್ರಥಮ ಎಂಬಿಎ ವಿಭಾಗದ ವಿಲಸ್ ಚೌಟ ಪೆÇೀಲ್‍ವಾಲ್ಟ್‍ನಲ್ಲಿ ಕಂಚು, ದ್ವಿತೀಯ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ವಿಭಾಗದ ಅನ್ವಿತ್.ಬಿ 20ಕಿಮೀ ನಡಿಗೆಯಲ್ಲಿ ಕಂಚು, ಪ್ರಥಮ ಡಾಟಾಸೈನ್ಸ್ ವಿಭಾಗದ ಹರ್ಶಿತ್.ಎಂ ಹ್ಯಾಮರ್‍ಥ್ರೋನಲ್ಲಿ ಕಂಚು, ಪ್ರಥಮ ವರ್ಷದ ಕಂಪ್ಯೂಟರ್ ವಿಭಾಗದ ವರ್ಷಿತ್.ಪಿ.ಆಳ್ವ ಜಾವೆಲಿನ್ ಎಸೆತದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.


ಇದಲ್ಲದೆ ಕೀರ್ತಿರಾಜ್ ಕೆ.ಎಸ್, ಪ್ರಫುಲ್.ಯು.ಎಸ್, ಅಜಿತ್ ಕುಮಾರ್.ಎಂ, ಚಿರಾಗ್, ಅಭಿನಂದನ್, ಅವಿನಾಶ್.ಸಿ.ಎಚ್, ಸುಶಾಂತ್.ಎಚ್.ಪಿ, ಸನ್ಮಿತ್, ಸಂಭ್ರಮ್.ಜಿ, ಮಣಿಸ್ಕಂದ.ಡಿ.ಕೆ, ನೀಕ್ಷಿತಾ ಶೆಟ್ಟಿ, ಹಿತಾ.ಪಿ.ಸಿ ಹಾಗೂ ವೈಶಾಲಿ ವಿಜೇತ ತಂಡದ ಇತರ ಸದಸ್ಯರಾಗಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.

ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ.ಬಾಲಚಂದ್ರ ಗೌಡ  ಭಾರ್ತಿಕುಮೇರು ಅವರ ಮಾರ್ಗದರ್ಶನದಲ್ಲಿ ಭಾರತೀಯ ಸೇನಾಪಡೆಗಳ ವಿಶ್ರಾಂತ ಅತ್ಲೆಟಿಕ್ ತರಬೇತುದಾರ ರವಿಶಂಕರ್ ಮುಕುಂದ ತರಬೇತಿಯನ್ನು ನೀಡಿದ್ದರು ಎಂದು ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ತಿಳಿಸಿದ್ದಾರೆ.

 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top