ಗುರುವನ್ನು ಮೀರಿಸುವಂತೆ ಶಿಷ್ಯ ಬೆಳೆದು ನಿಲ್ಲಲಿ

Upayuktha
0

ಡುಪಿ ವಿಧಾನ ಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯ ರೂವಾರಿಯಾದ, ಯೋಜಿಸಿದ ಕೆಲಸವನ್ನು ಸಾಧಿಸದೆ ಬಿಡದ ಛಲದಂಕ ಮಲ್ಲನೆನಿಸಿದ, ಉಡುಪಿಯ ಯುವಕರ ಕಣ್ಮಣಿಯಾಗಿದ್ದ, ರಾಜ್ಯ, ರಾಷ್ಟ, ವಿಶ್ವಮಟ್ಟದ  ಪ್ರಾಮುಖ್ಯತೆಯನ್ನು ಪಡೆದಿದ್ದ ಹತ್ತಾರು ಮಹೋತ್ಸವ, ಸಮ್ಮೇಳನಗಳ ಯಶಸ್ವೀ ಸಂಘಟನೆ ಮಾಡಿದ್ದ, ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕೊಟ್ಟಿದ್ದರೆ ನೂರು ಶೇಕಡಾ ಗೆಲ್ಲುತ್ತಿದ್ದ, ಪ್ರಮುಖ ಖಾತೆಯ ಮಂತ್ರಿಯಾಗಿ ಖಾತೆಯನ್ನು ಸಮರ್ಥವಾಗಿ ನಿಭಾಯಿಸಬಲ್ಲ ತಾಕತ್ತು ಇದ್ದ, ಸನ್ಮಿತ್ರ ಮಾನ್ಯ ಶ್ರೀ ರಘುಪತಿ ಭಟ್ಟರಿಗೆ ಈ ಬಾರಿ ಸ್ಪರ್ಧಿಸುವ ಛಾನ್ಸ್ ಇಲ್ಲವೆಂದು ತಿಳಿದು ಅತೀವ ಖೇದವೂ ದುಃಖವಾಯಿತು.



ಆದರೆ, ಪುಣ್ಯಕ್ಕೆ, ಅವರ ಗರಡಿಯಲ್ಲೇ ತಯಾರಾದ, ರಾಜ್ಯ ರಾಷ್ಟ್ರಮಟ್ಟದ ಹತ್ತಾರು ಸಮಾಜ ಸೇವಾಸಂಸ್ಥೆಗಳ ಪ್ರಧಾನ ಪದಾಧಿಕಾರಿಯಾಗಿ ಆ ಸಂಸ್ಥೆಗಳನ್ನು ಅತಿ ಎತ್ತರಕ್ಕೆ ಬೆಳೆಸುತ್ತಿರುವ, ಭಟ್ಟರಂತೆ ಸಮರ್ಥ ಸಂಘಟಕನಾಗಿ ಹತ್ತು ಹಲವು ರಾಜ್ಯ ರಾಷ್ಟ್ರ, ವಿಶ್ವಮಟ್ಟದ ಪ್ರಾಮುಖ್ಯತೆಯನ್ನು ಪಡೆದ ಮಹೋತ್ಸವ, ಸಮ್ಮೇಳನಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದ, ನೂರಾರು ಸಮಾಜ ಕಲ್ಯಾಣ ಕಾರ್ಯಕ್ರಮಗಳ ಆಯೋಜನೆಯ ಪ್ರಮುಖ ರೂವಾರಿಯಾಗಿ ಕೀರ್ತಿಗಳಿಸಿರುವ, ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಮೊಗವೀರ ಸಮಾಜದ ಪ್ರಶ್ನಾತೀತ ಯುವ ಪ್ರಧಾನ ನಾಯಕನಾಗಿರುವ, ಗುರುವನ್ನೇ ಮೀರಿಸಿದ ಶಿಷ್ಯನಾಗಿ ಬೆಳೆಯುತ್ತಿರುವ, ಸಮರ್ಥ ಅಭ್ಯರ್ಥಿಯಾಗಿದ್ದು ಮತದಾರರ ಮನಗೆದ್ದು 100 ಶೇಕಡಾ ಜಯಿಸುವ ಪೂರ್ಣ  ಸಾಮರ್ಥ್ಯವಿರುವ ಸನ್ಮಿತ್ರ ಮಾನ್ಯ ಶ್ರೀ ಯಶಪಾಲ ಸುವರ್ಣರು ಉಡುಪಿ ವಿಧಾನ ಸಭಾ ಕ್ಷೇತ್ರದ ನಮ್ಮ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾದುದು ಮನಸ್ಸಿಗೆ ಅತ್ಯಂತ ಸಮಾಧಾನ, ಸಂತೋಷವನ್ನೂ ನೀಡಿದೆ.



2024ರ ಉಡುಪಿಯ ಬಿಜೆಪಿಯ ಲೋಕಸಭಾ ಅಭ್ಯರ್ಥಿತನ ನಮ್ಮ ರಘುಪತಿ ಭಟ್ಟರಿಗೇ ದೊರಕುವಂತೆ ಮಾಡಿ ಗೆಲ್ಲಿಸಿ ಮೋದೀಜಿಯವರ ಲೋಕಸಭಾ ಬೆಂಬಲ ಹೆಚ್ಚಿಸುವ ಪಣ ತೊಡೋಣ.  ಈ ವಿಧಾನ ಸಭಾ ಚುನಾವಣೆಯಲ್ಲಿ ಯಶಪಾಲ ಸುವರ್ಣರು ದಾಖಲೆಯ, ಅತಿ ಹೆಚ್ಚು ಮತಗಳನ್ನು ಗಳಿಸಿ ಜಯಭೇರಿ ಬಾರಿಸುವಂತಾಗಲು ಯತ್ನಿಸುವ ಪಣ ತೊಡೋಣ, ಎಂದು ಎಲ್ಲ ಮತದಾರ ಬಂಧುಗಳಲ್ಲಿ ವಿನಮ್ರ ವಿನಂತಿ ಮಾಡುತ್ತೇನೆ.



ಜೈ ಬಿಜೆಪಿ, ಯಶಪಾಲ ಸುವರ್ಣರಿಗೆ ಜಯವಾಗಲಿ, ಈ ವರ್ಷ ರಾಜ್ಯದಲ್ಲಿ, ಬರುವ ವರ್ಷ ಕೇಂದ್ರದಲ್ಲಿ ಪೂರ್ಣ ಬಹುಮತದ ಬಿಜೆಪಿ ಸರಕಾರ ಬರಲಿ. ಮೋದೀಜೀ ಕೀ ಜೈ, ಜೈ ಕರ್ನಾಟಕ ಮಾತೆ. ಭಾರತ ಮಾತಾ ಕೀ ಜೈ.



-ಕಬಿಯಾಡಿ ಜಯರಾಮ ಆಚಾರ್ಯ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top