ಪ್ರತಿ ಮತವೂ ನಿರ್ಣಾಯಕ: ಡಾ.ಚೂಂತಾರು

Upayuktha
0

 


ಮಂಗಳೂರು: ಮತದಾನ ಎನ್ನುವುದು ನಮ್ಮ ಹಕ್ಕು ಮಾತ್ರ ಅಲ್ಲ, ಅದು ನಮ್ಮ ಶಕ್ತಿ ಕೂಡಾ ಆಗಿರುತ್ತದೆ. ಪ್ರಜಾ ಪ್ರಭುತ್ವ ರಾಷ್ಟ್ರದಲ್ಲಿ ಮತದಾರರೇ ನಿಜವಾದ ಪ್ರಭುಗಳು. ಇಲ್ಲಿ ಪ್ರತಿಯೊಬ್ಬ ಪ್ರಜೆಗೂ ವಿಶೇಷ ಹೊಣೆಗಾರಿಕೆ ಮತ್ತು ಜವಾಬ್ದಾರಿ ಇರುತ್ತದೆ. ನಾವು ಚಲಾಯಿಸುವ ಪ್ರತಿ ಮತವೂ ನಿರ್ಣಾಯಕ ಸ್ಥಿರ ಸರಕಾರ ಮತ್ತು ಸುಬಧ್ರ ಸರಕಾರ ರಚನೆಯಾಗಬೇಕಿದ್ದಲ್ಲಿ ಎಲ್ಲರೂ ಮತದಾನ ಮಾಡಲೇ ಬೇಕು. ಮತದಾನ ಮಾಡದೇ ಇದ್ದಲ್ಲಿ ಜನ ಪ್ರತಿ ನಿಧಿಗಳನ್ನು ಪ್ರಶ್ನೆ ಮಾಡುವ ಅಧಿಕಾರವನ್ನು ನೈತಿಕತೆಯನ್ನು ನಾವು ಕಳೆದುಕೊಳ್ಳುತ್ತೇವೆ. ಈ ಎಲ್ಲಾ ಕಾರಣದಿಂದ ನಾವೆಲ್ಲಾ ಮುಂಬರುವ ಚುನಾವಣೆಗಳು ಖಡ್ಡಾಯವಾಗಿ ಮತದಾನ  ಮಾಡೋಣ ಮತ್ತು ಆ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯೋಣ ಎಂದು ದ.ಕ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟ ಮತ್ತು ದ.ಕ ಜಿಲ್ಲಾ ಪೌರರಕ್ಷಣಾ ಪಡೆಯ ಮುಖ್ಯ ಪಾಲಕ ಡಾ. ಮುರಲೀ ಮೋಹನ್ ಚೂಂತಾರು ಅಭಿಪ್ರಾಯಪಟ್ಟರು. 


ದಿನಾಂಕ 28-04-2023ನೇ ಶುಕ್ರವಾರದಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಕಛೇರಿಯಲ್ಲಿ ಕೇಂದ್ರ ಕಛೇರಿ ಆದೇಶದಂತೆ ಮತದಾನ ಜಾಗೃತಿ ಅಭಿಯಾನ ಮತ್ತು ಜಾಥಾವನ್ನು ನಡೆಸಲಾಯಿತು. ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಉಚಿತವಾಗಿ ಮತದಾನ ಮಾಡುತ್ತೇನೆ ಎಂಬ ಘೋಷ ವಾಕ್ಯದೊಂದಿಗೆ ರಾಜ್ಯಾದ್ಯಂತ ರಾಜ್ಯ ಸರಕಾರ ಮತದಾನ ಜಾಗೃತಿಯನ್ನು ನಡೆಸುತ್ತಿದ್ದು ಇದರ ಅಂಗವಾಗಿ ಈ ಮತದಾನ ಜಾಗೃತಿ ಅಭಿಯಾನ ನಡೆಯಿತು. 


ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಉಪ ಸಮಾದೇಷ್ಟರಾದ ಶ್ರೀ ರಮೇಶ್, ಸುರತ್ಕಲ್ ಘಟಕದ ಘಟಕಾಧಿಕಾರಿ ರಮೇಶ್, ಹಿರಿಯ ಗೃಹರಕ್ಷಕರಾದ ಸುನಿಲ್, ಜ್ಞಾನೇಶ್, ರೇವತಿ, ದಿವ್ಯಾ, ಮರಿಯ, ದಿವಾಕರ್, ಸಂದೇಶ್ ಮುಂತಾದವರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top