ಬೆಂಗಳೂರು: ಕನ್ನಡ ಸಾಹಿತ್ಯದ ಮಟ್ಟಿಗೆ ಇದು ಮೊತ್ತ ಮೊದಲ ಅಥೆಂಟಿಕ್ ಕಾದಂಬರಿ ಆಗಲಿದೆ. ಕಾರಣ ಪ್ರತಿ ಪುಟದಲ್ಲೂ ಅಡಿ ಟಿಪ್ಪಣಿ ಸಮೇತ ಹಾಗೂ ಶಾಸನ ಮತ್ತು ಇತರೆ ಐತಿಹಾಸಿಕ ದಾಖಲೆ ಆಧಾರಿತ “ ವೈಜಯಂತಿಪುರ “ ಈ ಮೊದಲು ಕನ್ನಡ ಲಭ್ಯವಿಲ್ಲದ ಕಾರಣ ಕನ್ನಡ ಸಾಹಿತ್ಯದಲ್ಲಿನ ಆ ಕೊರತೆ ನೀವಾರಿಸಲಿದೆ, ಇದನ್ನು ನೀಡಿದ ಮೆಹೆಂದಳೆ ಗುರುತರವಾದ ಕಾರ್ಯ ಎಸಗಿದ್ದಾರೆ ಎಂದು ಮುಖಪುಟ ಬಿಡುಗಡೆ ಮಾಡಿ ಕಾದಂಬರಿಕಾರ ಮತ್ತು ನಿವೃತ್ತ ಡಿ.ಜಿ.ಪಿ. ಡಾ. ಡಿ.ವಿ. ಗುರುಪ್ರಸಾದ ನುಡಿದರು.
ಬೆಂಗಳೂರಿನ ವಿಜಯ ಕರ್ನಾಟಕ ಪತ್ರಿಕಾ ವೇದಿಕೆಯಲ್ಲಿ ಮುಖಪುಟ ಅನಾವರಣ ಮಾಡಿ ಮಾತಾಡಿದ ಅವರು ಈವರೆಗೂ ಕನ್ನಡದ ಮೊದಲ ಸಾಮ್ರಾಟ ಮಯೂರವರ್ಮನ ಕುರಿತಾಗಿ ಲಭ್ಯವಿಲ್ಲದ ಸಾಹಿತ್ಯಿಕ ಕೊರತೆಯನ್ನು ಮೆಹೆಂದಳೆ ನೀಗಿಸಿದ್ದಾರೆ ಎಂದು ನುಡಿದರು.
ವಿಜಯ ಕರ್ನಾಟಕ ಪ್ರಧಾನ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ, ಕನ್ನಡದ ಕದಂಬರ ಕಾದಂಬರಿಯ ಮುಖ ಪುಟ ತುಂಬ ವಿಭಿನ್ನ ಮತ್ತು ಆಕರ್ಷಕವಾಗಿ ಮೂಡಿ ಬಂದಿದ್ದು, ಕೃತಿಯ ಬಗ್ಗೆ ಯಾವುದೇ ಸಂಶಯವಿಲ್ಲದೇ ಓದುಗರು ಖರೀದಿಸಬಹುದು. ಕಾರಣ ತಮ ಕೃತಿಗಳ ಕುರಿತಾಗಿ ಗ್ಯಾರಂಟಿ ನೀಡಿ ಬರೆಯಲು ಕುಳಿತುಕೊಳ್ಳುವ ಎಕೈಕ ಲೇಖಕ ಮೆಹೆಂದಳೆ. ಇದನ್ನು ನಮ್ಮ ಸಂಸ್ಥೆ ಮೂಲಕ ಅನಾವರಣ ಗೊಳಿಸಿದ್ದು ಹೆಮ್ಮೆಯಾಗಿದೆ" ಎಂದು ಶುಭ ಹಾರೈಸಿದರು.
ಅಂಕಿತ ಪ್ರಕಾಶನದ ಹಿರಿಯ ಪ್ರಕಾಶಕ ಪ್ರಕಾಶ ಕಂಬತ್ತಳ್ಳಿ " ಕನ್ನಡದಲ್ಲಿ ಇಂತಹದ್ದೊಂದು ಪ್ರಯೋಗಗಳನ್ನು ಮಾಡುತ್ತಿರುವ ಸಾಹಿತಿ ಎಂದರೆ ಮೆಹೆಂದಳೆ ಮಾತ್ರ. ಹಾಗಾಗಿ ಅವರ ಕೃತಿಗಳು ಬಿಡುಗಡೆಯ ಪೂರ್ವದಲ್ಲೆ ಓದುಗರನ್ನು ಆಕರ್ಷಿಸುತ್ತವೆ. ವೈಜಯಂತಿಪುರ ಆ ನಿಟ್ಟಿನಲ್ಲಿ ಪ್ರಮುಖ ಕಾದಂಬರಿ ಆಗಲಿದೆ" ಎಂದು ನುಡಿದರು.
ಕಾದಂಬರಿಕಾರ ಸಂತೋಷಕುಮಾರ ಮೆಹೆಂದಳೆ, ಎಂದಿನಂತೆ ಈ ಕಾದಂಬರಿಯೂ ಓದುಗರನ್ನು ಹಿಡಿದಿರಿಸಿಕೊಳ್ಳುವಲ್ಲಿ ಯಶಸ್ವಿಯಾಗುವ ಭರವಸೆ ನನಗಿದೆ, ಓದುಗರು ಮತ್ತು ಮಾಧ್ಯಮಗಳೆ ಇವತ್ತು ಸಾಹಿತ್ಯಕ್ಕೆ ಬೆನ್ನೆಲುಬಾಗಿ ನಿಲ್ಲುತ್ತಿವೆ ಜೊತೆಗೆ ಗುಣಮಟ್ಟದ ಸಾಹಿತ್ಯವನ್ನು ಕೊಡಬೇಕಾದ ಜವಾಬ್ದಾರಿ ಎಲ್ಲ ಲೇಖಕ ವರ್ಗದ ಮೇಲಿದೆ ಎಂದು ನುಡಿದರು. ಪ್ರಕಾಶಕ ರಘುವಿರ ಸಮರ್ಥ, ರಾಜೀವ್ ಮಹೇಶ್ ಹೆಗಡೆ ಹಿರಿಯ ಉಪ ಸಂಪಾದಕಿ ವಿದ್ಯಾರಶ್ಮಿ ಹಾಜರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ