ಎಸ್.ಡಿ.ಎಂ ನಿವೃತ್ತ ಪ್ರಾಂಶುಪಾಲರಿಗೆ ಗೌರವಾಭಿನಂದನೆ

Upayuktha
0

 ಉಜಿರೆ: "ಸಾಧನೆ ಮಾಡಬೇಕೆಂದರೆ ಸಾಮರ್ಥ್ಯ ಮುಖ್ಯ. ಎನ್.ಸಿ.ಸಿ ಕೆಡೇಟ್ ಗಳು ನಿಜಕ್ಕೂ ಭಾಗ್ಯಶಾಲಿಗಳು. ನಿಮ್ಮ ಸಾಧನೆ ನಮ್ಮ ಕಾಲೇಜಿಗೆ ಗೌರವವನ್ನು ತಂದುಕೊಟ್ಟಿದೆ" ಎಂದು ಎಸ್.ಡಿ.ಎಂ ನಿವೃತ್ತ ಪ್ರಾಂಶುಪಾಲರಾದ ಡಾ ಎ. ಜಯಕುಮಾರ್ ಶೆಟ್ಟಿ ಹೇಳಿದರು.


ಕಾಲೇಜಿನ 2/18 ಕರ್ನಾಟಕ ಬೆಟಾಲಿಯನ್ ಆರ್ಮಿ ವಿಂಗ್ ಹಾಗು 5 ಕಾರ್ ನೇವಲ್ ಸಬ್ ಯುನಿಟ್ ನೇವಿ ವಿಂಗ್ ಕೆಡೇಟ್ ಗಳು ಶುಕ್ರವಾರ ಪೂರ್ವಾಹ್ನ ನಿವೃತ್ತ ಜೀವನಕ್ಕೆ ಕಾಲಿಡುತ್ತಿರುವ ಪ್ರಾಂಶುಪಾಲರಿಗೆ ಗಾರ್ಡ್ ಆಫ್ ಆನರ್ ನೀಡುವ ಮೂಲಕ ಅಭಿನಂದಿಸಿದರು.

ಪ್ರಾಚಾರ್ಯರ ಜೊತೆಗಿದ್ದ ಕ್ಷಣದ ಭಾವಚಿತ್ರವನ್ನು ನೆನಪಿನ ಕಾಣಿಕೆಯಾಗಿ ನೀಡಲಾಯಿತು.

ಲೆಫ್ಟಿನೆಂಟ್ ಕಮಾಂಡರ್ ಶ್ರೀಧರ್ ಭಟ್, ಲೆಫ್ಟಿನೆಂಟ್ ಭಾನುಪ್ರಕಾಶ್ ಬಿ.ಇ, ಲೆಫ್ಟಿನೆಂಟ್ ಶುಭರಾಣಿ ಪಿ.ಎಸ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಏಳು ಆರ್.ಡಿ.ಸಿ, ನಾಲ್ಕು ಎ.ಐ.ಎನ್.ಎಸ್.ಸಿ ಮುಂತಾದ ರಾಷ್ಟ್ರೀಯ ಕ್ಯಾಂಪ್ ಪೂರ್ಣಗೊಳಿಸಿದ ಕೆಡೇಟ್ ಗಳು ಹಾಗು ಉಳಿದ ಎನ್.ಸಿ.ಸಿ. ಆರ್ಮಿ ಹಾಗು ನೇವಿ ಕೆಡೆಟ್ ಗಳು ಭಾಗಿಯಾಗಿದ್ದರು. ಕೆಡೆಟ್ ಶಿಶಿರ್ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top