ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೂತನವಾಗಿ ನೋಂದಾಯಿಸಲ್ಪಟ್ಟ ಗೃಹರಕ್ಷಕರಿಗೆ ಕೇಂದ್ರ ಕಚೇರಿಯ ಮಂಜೂರಾತಿಯಂತೆ ದಿನಾಂಕ 10-04-2023 ರಿಂದ 19-04-2023 ರವರೆಗೆ ಶ್ರೀಭಾರತೀ ಕಾಲೇಜು ನಂತೂರು, ಮಂಗಳೂರು ಇಲ್ಲಿ ಮೂಲ ತರಬೇತಿ ಶಿಬಿರವನ್ನು ಏರ್ಪಡಿಸಲಾಗುತ್ತಿದೆ.
10 ದಿನಗಳ ಅವಧಿಯಲ್ಲಿ ನಡೆಯುವ ತರಬೇತಿಯಲ್ಲಿ 90 ಗೃಹರಕ್ಷಕರಿಗೆ ವಿವಿಧ ಇಲಾಖೆಯ ಸಂಪನ್ಮೂಲ ವ್ಯಕ್ತಿಗಳಿಂದ ರೈಫಲ್ತರಬೇತಿ, ಅಗ್ನಿಶಮನ ತರಬೇತಿ, ಪ್ರಥಮ ಚಿಕಿತ್ಸೆ ತರಬೇತಿ, ಲಾಠಿಡ್ರಿಲ್, ನಿಸ್ತಂತುಚಾಲನ ತರಬೇತಿ, ವಿಪತ್ತು ನಿಯಂತ್ರಣ ತರಬೇತಿ, ಸಂಚಾರ ನಿಯಂತ್ರಣ ಮುಂತಾದ ತರಬೇತಿಗಳನ್ನು ನೀಡಲಾಗುವುದು.
ದಿನಾಂಕ 10-04-2023 ರಂದು ತರಬೇತಿ ಶಿಬಿರದ ಉದ್ಘಾಟನೆಯನ್ನು ದ. ಕ ಜಿಲ್ಲಾಪೊಲೀಸ್ಅಧೀಕ್ಷಕರಾದ ಶ್ರೀವಿಕ್ರಮ್ಅಮಟೆ, IPS, ಅವರು ಮಾಡಲಿದ್ದಾರೆ ಈ ತರಬೇತಿಯು ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರದಡಾ|| ಮುರಲೀಮೋಹ ನ್ಚೂಂತಾರು ಇವರ ನೇತೃತ್ವದಲ್ಲಿ ಗೃಹರಕ್ಷಕ ದಳದ ಉಪಸಮಾದೇಷ್ಟರಾದ ಶ್ರೀರಮೇಶ್ ವರ ಮಾರ್ಗದರ್ಶನದಂತೆ ನಡೆಯಲಿದೆ ಎಂದು ಗೃಹರಕ್ಷಕ ದಳದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ