ಗೋವಿಂದ ದಾಸ ಕಾಲೇಜು: ವಾರ್ಷಿಕ ಕ್ರೀಡಾಕೂಟ

Upayuktha
0



ಸುರತ್ಕಲ್: ಶಾರೀರಿಕ ಕ್ಷಮತೆಗೆ ಕ್ರೀಡಾ ಚಟುವಟಿಕೆ ಅತೀ ಅಗತ್ಯವಾಗಿದ್ದು, ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ಆಸಕ್ತಿ ತಾಳಬೇಕೆಂದು ಹಿರಿಯ ದೇಹದಾರ್ಢ್ಯ ಪಟು ವೆಂಕಟೇಶ ಪಾವಂಜೆ ನುಡಿದರು. ಅವರು ಗೋವಿಂದ ದಾಸ ಕಾಲೇಜಿನ ವಾರ್ಷಿಕ ಕ್ರೀಡಾ ದಿನಾಚರಣೆ ಉದ್ಘಾಟಿಸಿ ಮಾತನಾಡುತ್ತಿದ್ದರು.

ಕ್ರೀಡಾಕೂಟದ ಅಧ್ಯಕ್ಷತೆವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ಕೃಷ್ಣಮೂರ್ತಿ, ಕ್ರೀಡೆಯು ವಿದ್ಯಾರ್ಥಿ ಜೀವನದ ಅವಿಭಾಜ್ಯ ಅಂಗವಾಗಿದ್ದು ಗೋವಿಂದ ದಾಸ ಕಾಲೇಜು ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ  ಪ್ರೋತಾಹ ನೀಡುತ್ತಿದ್ದು ಅನೇಕ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡೆಗಳಲ್ಲಿ ಭಾಗಹಿಸುತ್ತಿದ್ದಾರೆ ಎಂದರು.

ಕ್ರೀಡಾ ಕಾರ್ಯದರ್ಶಿ ರಾಹುಲ್ ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಿದರು. ರಾಷ್ಟ್ರೀಯ ಯೋಗಪಟು ಮೋಕ್ಷಾ ಎನ್ ಅಮೀನ್ ಅವರು ಕ್ರೀಡಾ ಜ್ಯೋತಿಯನ್ನು ಹಸ್ತಾತರಿಸಿದರು. ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. 

ಮನೀಷ್ ಸ್ವಾಗತಿಸಿ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪ್ರಶಾಂತ್ ಎಂ.ಡಿ ಅತಿಥಿಗಳನ್ನು ಪರಿಚಯಿಸಿದರು.  ಕ್ರೀಡಾ ಕಾರ್ಯದರ್ಶಿ ಪೂಜಾ ಪುತ್ರನ್ ವಂದಿಸಿದರು. ಹಿತಾ ಉಮೇಶ್ ಕಾರ್ಯಕ್ರಮ ನಿರೂಪಿಸಿದರು. ಉಪಪ್ರಾಚಾರ್ಯ ಪ್ರೊ. ರಮೇಶ್ ಭಟ್ ಎಸ್.ಜಿ, ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಪ್ರೊ. ಹರೀಶ ಆಚಾರ್ಯ, ಪ್ರೊ. ನೀಲಪ್ಪ ವಿ ಪ್ರಾಧ್ಯಾಪಕರಾದ ಪ್ರೊ. ಮಾರ್ಸೆಲ್ ಲೂವೀಸ್ ಮಸ್ಕರೇನ್ಹಸ್, ಪ್ರೊ. ವಾಗೀಶ ಎಸ್, ಪ್ರೊ. ವಾಮನ ಕಾಮತ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top