ಶಿರಸಿ: ಅರಿವು ವಾಣಿಜ್ಯ ಮತ್ತು ಕಂಪ್ಯೂಟರ್ ಶಿಕ್ಷಣ ಸಂಸ್ಥೆಯು ಕಳೆದ ಜನವರಿ ತಿಂಗಳಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯವರು ನಡೆಸಿರುವ ಕನ್ನಡ ಮತ್ತು ಇಂಗ್ಲೀಷ್ ಬೆರಳಚ್ಚು ಜ್ಯೂನಿಯರ್ ಮತ್ತು ಸೀನಿಯರ್ ಪರೀಕ್ಷೆಗಳನ್ನು ನಡೆಸಿರುತ್ತದೆ. ಅದರಲ್ಲಿ ಅರಿವು ವಾಣಿಜ್ಯ ಮತ್ತು ಕಂಪ್ಯೂಟರ್ ಸಂಸ್ಥೆಯಿಂದ ಒಟ್ಟೂ 69 ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಂಡಿರುತ್ತಾರೆ. ಅದರಲ್ಲಿ 46 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.
ಕನ್ನಡ ಬೆರಳಚ್ಚು ಸೀನಿಯರ್ ಪರೀಕ್ಷೆಯಲ್ಲಿ ಸೌಮ್ಯ ನಾಯ್ಕ 81% ಪ್ರಥಮ, ಜಾಕ್ಸನ್ ಮಿರಾಂಡಾ ದ್ವಿತೀಯ 79% ಇಂಗ್ಲೀಷ್ ಬೆರಳಚ್ಚು ಸೀನಿಯರ್ ನಲ್ಲಿ ಸೌಮ್ಯ ನಾಯ್ಕ ಪ್ರಥಮ ದ್ವಿತೀಯ ಸ್ಥಾನವನ್ನು ಅಕ್ಷತಾ ಮಹಾಲೆ ಯೋಗಿತಾ ಶೆಟ್ಟಿ ಹಂಚಿಕೊಂಡಿರುತ್ತಾರೆ. ಇಂಗ್ಲೀಷ್ ಜ್ಯೂನಿಯರ್ ನಲ್ಲಿ ಚೈತ್ರಾ ಚಂದವರ್ಕರ್ ಪ್ರಥಮ ಸ್ಥಾನ, ಎಂ ಅನುಷಾ ಅವರು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.
ಇಂಗ್ಲೀಷ್ ಸೀನಿಯರ್ ಶೀಘ್ರಲಿಪಿಯಲ್ಲಿ ಸಂಜನಾ ನಾಯ್ಕ ಪ್ರಥಮ, ಕನ್ನಡ ಜ್ಯೂನಿಯರ್ ಶೀಘ್ರಲಿಪಿಯಲ್ಲಿ ಜಾಕ್ಸ್‍ನ್ ಮಿರಾಂಡಾ ಪ್ರಥಮ, ದ್ವಿತಿಯ ಸ್ಥಾನವನ್ನು ಶ್ರೀಪಾದ ರೇವಣ್ಕರ್ ಪಡೆದರೆ, ಇಂಗ್ಲೀಷ್ ಶೀಘ್ರಲಿಪಿಯಲ್ಲಿ ಪ್ರಥಮ ಅನುಷಾ ನಾಯ್ಕ, ದ್ವಿತಿಯ ಸ್ಥಾನವನ್ನು ತನ್ಜಿಲಾ ಶೇಕ್, ಸುಪ್ರಜಾ ನಾಯ್ಕ, ಅನುಷಾ ಇವರು ಉತ್ತಮ ಅಂಕಗಳನ್ನು ಗಳಿಸಿರುತ್ತಾರೆ.
ಅರಿವು ವಾಣಿಜ್ಯ ಮತ್ತು ಗಣಕ ಯಂತ್ರ ಸಂಸ್ಥೆಯಿಂದ ಕಂಪ್ಯೂಟರ್ ಆಫೀಸ್ ಅಟೋಮೇಶನ್ ಪರೀಕ್ಷೆಗೆ ಒಟ್ಟೂ 10 ವಿದ್ಯಾರ್ಥಿಗಳು ಹಾಜರಾಗಿದ್ದು ಎಲ್ಲ ಮಕ್ಕಳು ಉತ್ತಮವಾದ ಅಂಕಗಳನ್ನು ಪಡೆದು ಪಾಸಾಗಿ 100% ಮಾಡಿ ಸಂಸ್ಥೆಗೆ ಕೀರ್ತಿಯನ್ನು ತಂದಿರುತ್ತಾರೆ. ಈ ಪರಿಕ್ಷೆಯನ್ನು ಕೂಡ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯವರು ನಡೆಸುತ್ತಾರೆ. ವಿದ್ಯಾರ್ಥಿಗಳ ಉತ್ತಮ ಸಾಧನೆಯಿಂದ ಸಂಸ್ಥೆಗೆ ಕೀರ್ತಿಯನ್ನು ತಂದಿರುತ್ತಾರೆಂದು ಸಂಸ್ಥೆಯ ಸಂಸ್ಥಾಪಕಿಯವರಾದ ವಕೀಲರೂ ಆಗಿರುವ ಶ್ರೀಮತಿ ಸರಸ್ವತಿ ಹೆಗಡೆಯವರು ತಿಳಿಸಿರುತ್ತಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ