ಶೌರ್ಯ: ಆಳ್ವಾಸ್ ಚಾಂಪಿಯನ್

Upayuktha
0

ವಿದ್ಯಾಗಿರಿ: ಕಾರ್ಕಳದ ನಿಟ್ಟೆ ಡಿಆರ್ ಎನ್‍ಎಸ್‍ಎಎಂ ಪ್ರಥಮ ದರ್ಜೆ  ಕಾಲೇಜು ಏಪ್ರಿಲ್ 3 ಹಾಗೂ 4ರಂದು ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಅಂತರ ಕಾಲೇಜು ಸಾಂಸ್ಕೃತಿಕ ಮತ್ತು ಆಡಳಿತ ನಿರ್ವಹಣಾ ಉತ್ಸವ ‘ಶೌರ್ಯ’ದಲ್ಲಿ ಆಳ್ವಾಸ್ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.


ರಾಜ್ಯದ ವಿವಿಧ ಕಾಲೇಜುಗಳಿಂದ 51 ತಂಡಗಳು ಬಂದಿದ್ದು, 1400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 


ಆಳ್ವಾಸ್ ಕಾಲೇಜಿನ 40 ವಿದ್ಯಾರ್ಥಿಗಳು ಪ್ರತಿನಿಧಿಸಿದ್ದು, ಸ್ವರಾಂಕ(ತಂಡ ಗಾಯನ)ದಲ್ಲಿ ಅಮಿಷ್ ಹಾಗೂ ತಂಡ ಪ್ರಥಮ ಸ್ಥಾನ, ವಲ್ಕನ್ದುಕಮ್ (ಗಲ್ಲಿ ಕ್ರಿಕೆಟ್)ನಲ್ಲಿ ಸೌಜನ್ ಹಾಗೂ ತಂಡ ಪ್ರಥಮ ಸ್ಥಾನ, ಅಚಿಂತ್ಯಾ(ಬೆಸ್ಟ್ ಮ್ಯಾನೇಜರ್)ದಲ್ಲಿ ಸೌಜನ್ಯ ಆರ್. ಭಟ್ ಪ್ರಥಮ ಸ್ಥಾನ, ಚತುರ್ವೇದಿ( ರಸಪ್ರಶ್ನೆ)ಯಲ್ಲಿ ಹೇಮಂತ್ ಹಾಗೂ ರಾಘವೇಂದ್ರ ಕಾಮತ್ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಿಜೇತ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಕಾಲೇಜಿನ ಪ್ರಾಚಾರ್ಯ ಡಾ ಕುರಿಯನ್ ಅಭಿನಂದಿಸಿದ್ದಾರೆ. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Advt Slider:
To Top