ಮಂಗಳೂರು: ಶ್ರೀನಿವಾಸ್ ವಿಶ್ವವಿದ್ಯಾಲಯ, ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್, ಮುಕ್ಕದಲ್ಲಿ ಅಲೈಡ್ ಹೆಲ್ತ್ ಸೈನ್ಸಸ್ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ 'ಬೇಸಿಕ್ ಲೈಫ್ ಸಪೋರ್ಟ್ – ಇನ್‌ಹೆರಿಟಿಂಗ್ ದಿ ಸ್ಕಿಲ್ಸ್' ಕುರಿತು ಅಧಿವೇಶನ ನಡೆಯುತ್ತಿದೆ.
ಕಾರ್ಯಕ್ರಮವನ್ನು ಏಪ್ರಿಲ್ 3ರಿಂದ 6ರ ವರೆಗೆ 04 ದಿನಗಳ ವರೆಗೆ ನಿಗದಿಪಡಿಸಲಾಗಿದೆ. ಅಧಿವೇಶನವನ್ನು ಥಿಯರಿ ಮತ್ತು ಪ್ರಾಯೋಗಿಕ ತರಬೇತಿ ಒಳಗೊಂಡಂತೆ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ದಿನದ ಗೌರವ ಅತಿಥಿಗಳಾಗಿ ಶ್ರೀನಿವಾಸ್ ಆಸ್ಪತ್ರೆಯ ಹೃದ್ರೋಗ ವಿಭಾಗದ ಎಚ್‌ಒಡಿ ಡಾ.ಕೆ. ಸುಬ್ರಮಣ್ಯಂ ಮತ್ತು ಶ್ರೀನಿವಾಸ್ ವಿಶ್ವವಿದ್ಯಾಲಯದ ಸಹಾಯಕ ರಿಜಿಸ್ಟ್ರಾರ್ ಡಾ. ಜಯಶ್ರೀ ಬೋಳಾರ್, ಐಎಎಚ್‌ಎಸ್ ಡೀನ್ ಡಾ. ಬೀನಾ ಎಚ್.ಬಿ ಮತ್ತು ಐಎಎಚ್‌ಎಸ್ ಡೀನ್ ಪ್ರೊ. ಪಾವನ ಕೃಷ್ಣಮೂರ್ತಿ ಉಪಸ್ಥಿತರಿದ್ದರು.
ಅಧಿವೇಶನದ ಸಂಪನ್ಮೂಲ ವ್ಯಕ್ತಿಯಾಗಿ AOTT, SU-IAHS ನ ಸಹಾಯಕ ಪ್ರಾಧ್ಯಾಪಕ ಸಾಗರ್ ಅನಿಲ್ ಪಾಟೀಲ್ ಭಾಗವಹಿಸಿದ್ದರು.
ಪ್ರಾರ್ಥನಾ ಗೀತೆ ಮತ್ತು ದೀಪ ಬೆಳಗುವುದರೊಂದಿಗೆ ಉದ್ಘಾಟನೆ ಬಳಿಕ ಅಧಿವೇಶನ ಪ್ರಾರಂಭವಾಯಿತು. ಹೃದ್ರೋಗ ವಿಭಾಗದ ಎಚ್‌ಒಡಿ ಡಾ.ಕೆ.ಸುಬ್ರಮಣ್ಯಂ ಮತ್ತು ಡಾ. ಜಯಶ್ರೀ ಬೋಳಾರ್ ಅವರು ವೈದ್ಯಕೀಯ ಮತ್ತು ವೈದ್ಯಕೀಯೇತರ ಕ್ಷೇತ್ರಕ್ಕೆ ಬಿಎಲ್‌ಎಸ್‌ನ ಮಹತ್ವ ಮತ್ತು ತೀವ್ರತೆಯನ್ನು ತಿಳಿಸಿದರು. ಪ್ರಸ್ತುತಿ, CPR ಮಾರ್ಗಸೂಚಿಗಳು ಮತ್ತು CPR ಆಧಾರಿತ ವೀಡಿಯೊಗಳು, ಪಿಪಿಟಿ ಒಳಗೊಂಡಂತೆ ಸಂವಾದಾತ್ಮಕ ರೀತಿಯಲ್ಲಿ ಅಧಿವೇಶನವನ್ನು ನೀಡಲಾಯಿತು. ಅಧಿವೇಶನದಲ್ಲಿ ಸ್ಪೀಕರ್ ಜೊತೆ ಸಭಿಕರ ಸಂವಾದ ನಡೆಸಲಾಯಿತು. ಕಾರ್ಯಕ್ರಮ ರಾಷ್ಟ್ರಗೀತೆಯೊಂದಿಗೆ ಕೊನೆಗೊಂಡಿತು.
CPR, ಉಸಿರುಗಟ್ಟುವಿಕೆ, ಹೆಮ್ಲಿಕ್‌ಸ್ಮ್ಯಾನ್ಯುವರ್ ಮತ್ತು BLS ನ ಪ್ರಾಯೋಗಿಕ ಪ್ರದರ್ಶನದಂತಹ ವಿಷಯಗಳು ಚರ್ಚೆಗೆ ಬಂದವು. BSc ಉಸಿರಾಟದ ಚಿಕಿತ್ಸೆ, BSc ವೈದ್ಯಕೀಯ ಲ್ಯಾಬ್ ತಂತ್ರಜ್ಞ, BSc ವೈದ್ಯಕೀಯ ಇಮೇಜಿಂಗ್ ತಂತ್ರಜ್ಞಾನ, BSc ಪರ್ಫ್ಯೂಷನ್ ಟೆಕ್ನಾಲಜಿ ಮತ್ತು BSc ಕ್ಲಿನಿಕಲ್ ಸೈಕಾಲಜಿಯ 182 ಮಂದಿ ಭಾಗವಹಿಸಿದ್ದರು. ಅಧಿವೇಶನದ ನಂತರ, ಎಲ್ಲರಿಂದ ಪ್ರತಿಕ್ರಿಯೆಯನ್ನು ತೆಗೆದುಕೊಳ್ಳಲಾಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ