ಉಜಿರೆ: ಎಸ್.ಡಿ.ಎಂ. ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ವತಿಯಿಂದ ಗುರುವಾರ (ಏ.27) "INNOVATIVE VITAM " ಎಂಬ ಅಂತರ್ ಕಕ್ಷಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ|| ಕುಮಾರ ಹೆಗ್ಡೆ ಬಿ. ಎ. ಇವರು ಉಪಸ್ಥಿತರಿದ್ದರು. ಸ್ಪರ್ಧೆಗೆ ತೀರ್ಪುಗಾರರಾಗಿ ಬಿಬಿಎ ವಿಭಾಗದ ಶರಶ್ಚಂದ್ರ ಕೆ. ಎಸ್., ವಾಣಿಜ್ಯ ವಿಭಾಗದ ಕುಮಾರಿ ಅಪರ್ಣಾ ಹಾಗೂ ಜೈವಿಕ ತಂತ್ರಜ್ಞಾನ ವಿಭಾಗದ ಅಭಿಜಿತ್ ಎಸ್. ಬಡಿಗೇರ್ ಇವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಒಳಗೆ ಇರುವ ಉದ್ಯಮಿಯನ್ನು ಹೊರ ಹಾಕುವ ಪರಿಕಲ್ಪನೆಯೊಂದಿಗೆ ಅವರ ಕ್ರಿಯಾಶೀಲತೆ ಮತ್ತು ಚಿಂತನೆಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು "ಜೀವ ವಿಜ್ಞಾನ" ಎಂಬ ವಿಷಯದ ಮೇಲೆ ಒಂದು ಹೊಸ ಉತ್ಪನ್ನದ ವಿನ್ಯಾಸವನ್ನು ವೇದಿಕೆಯಲ್ಲಿ ಪ್ರಸ್ತುತಪಡಿಸಬೇಕು. ಈ ಸ್ಪರ್ಧೆಯಲ್ಲಿ ಸುಮಾರು 14 ತಂಡಗಳು ತಮ್ಮ ತಮ್ಮ ಉತ್ಪನ್ನಗಳೊಂದಿಗೆ ಹಾಜರಿದ್ದರು. ಸ್ಪರ್ಧೆಯು ಎರಡು ಸುತ್ತುಗಳನ್ನು ಒಳಗೊಂಡಿದ್ದು ಮೊದಲ ಸುತ್ತಿನಲ್ಲಿ ಉತ್ಪನ್ನದ ವಿನ್ಯಾಸ ಹಾಗೂ ಉಪಯೋಗಗಳನ್ನು ವಿವರಿಸಿದರು.
ಈ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಿದ ಮೊದಲ ಐದು ತಂಡಗಳನ್ನು ಎರಡನೆಯ ಸುತ್ತಿಗೆ ಕಳುಹಿಸಲಾಯಿತು. ಈ ಸುತ್ತಿನಲ್ಲಿ ಸ್ಪರ್ಧಿಗಳು ಉತ್ಪನ್ನದ ಬೆಲೆ, ವ್ಯಾಪಾರ, ಮಾರುಕಟ್ಟೆ ಮೊದಲಾದ ವಿಷಯಗಳನ್ನು ವಿವರಿಸಿದರು. ತೀರ್ಪುಗಾರರು ಅತ್ಯುತ್ತಮ ಪ್ರದರ್ಶನ ನೀಡಿದ ಎರಡು ತಂಡಗಳನ್ನು ಆಯ್ಕೆ ಮಾಡಿದರು. ಅದರಂತೆ ಪ್ರಜ್ವಲ್ ಪಿ.ಜೆ. (ತೃತೀಯ ಬಿಕಾಂ) ಹಾಗೂ ಪ್ರವರ್ಧನ್ ಜೈನ್ (ತೃತೀಯ ಬಿಕಾಂ) ಇವರು ಪ್ರಥಮ ಸ್ಥಾನವನ್ನೂ ಚರಣ್ ರಾಜ್ ಎ.ಬಿ. (ತೃತೀಯ ಬಿಕಾಂ) ಹಾಗೂ ಅಕ್ಷಯ್ ಎಸ್. ಪ್ರಸಾದ್ (ತೃತೀಯ ಬಿಬಿಎ) ಇವರು ದ್ವಿತೀಯ ಸ್ಥಾನವನ್ನು ಪಡೆದರು. ಸ್ಪರ್ಧೆಯ ಸಂಯೋಜಕರಾಗಿ ಅಭಿಲಾಷ್ ಕೆ. ಎಸ್. ಇವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ