ಮುಡಿಪು: ನಿವೃತ್ತ ಶಿಕ್ಷಕ, ಮುಡಿಪು ಕಾಯರಗೋಳಿ ನಿವಾಸಿ ಎಸ್.ಶಂಕರ ಭಟ್ (88) ವಯೋಸಹಜ ಕಾರಣದಿಂದ ಏ. 27ರಂದು ಗುರುವಾರ ಮುಂಜಾನೆ ಸ್ವಗೃಹದಲ್ಲಿ ನಿಧನರಾದರು.
ಅವರು 37 ವರ್ಷಗಳ ಕಾಲ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದರು. ಏಳು ವರ್ಷ ಕೈರಂಗಳ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹಾಗೂ 30 ವರ್ಷಗಳ ಕಾಲ ಪಾಣೆಮಂಗಳೂರು ಶಾರದಾ ಹೈಸ್ಕೂಲಿನಲ್ಲಿ ಹಿಂದಿ ಶಿಕ್ಷಕರಾಗಿದ್ದು, ನಿವೃತ್ತಿ ಬಳಿಕ ಮುಡಿಪುವಿನಲ್ಲಿ ನೆಲೆಸಿದ್ದರು. ಅವರು ಮುಡಿಪು ಶ್ರೀ ಭಾರತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕ ದಿ.ತಿಮ್ಮಪ್ಪ ಮಾಸ್ಟರ್ ಅವರ ಕಿರಿಯ ಸಹೋದರರು. ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ