* 20 ವಿದ್ಯಾರ್ಥಿಗಳು 585ಕ್ಕಿಂತ ಹೆಚ್ಚು ಅಂಕಗಳಿಸಿ ಐತಿಹಾಸಿಕ ಸಾಧನೆ.
* ಕಲಾ ವಿಭಾಗದಲ್ಲಿ ಮಂಜುಶ್ರೀ ರಾಜ್ಯಕ್ಕೆ 3ನೇ ರ‍್ಯಾಂಕ್
* ವಾಣಿಜ್ಯ ವಿಭಾಗದಲ್ಲಿ ಅದಿತ್ಯ ನಾರಾಯಣ ಪಿಎಸ್ ರಾಜ್ಯಕ್ಕೆ 3ನೇ ರ‍್ಯಾಂಕ್, 5 ವಿಷಯಗಳಲ್ಲಿ 100ಕ್ಕೆ 100 ಅಂಕಗಳು.
* ವಿಜ್ಞಾನ ವಿಭಾಗದಲ್ಲಿ ಆಶ್ರಯ ಪಿ ಹಾಗೂ ದೀಪ್ತಿಲಕ್ಷ್ಮಿ ರಾಜ್ಯಕ್ಕೆ 5ನೇ ರ‍್ಯಾಂಕ್.
ಪುತ್ತೂರು: ಕರ್ನಾಟಕ ಪ್ರೌಢ ಶಿಕ್ಷಣ ಇಲಾಖೆಯಿಂದ ನಡೆದ ದ್ವಿತೀಯ ಪಿಯುಸಿ ವಾಷಿಕ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ತುö್ಯತ್ತಮ ಸಾಧನೆ ಮಾಡಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ 592 ಅಂಕಗಳನ್ನು ಗಳಿಸುವುದರ ಮೂಲಕ ಆಶ್ರಯ ಪಿ (ಪುತ್ತೂರಿನ ಉರ್ಲಾಂಡಿಯ ಅಶೋಕ್ ಕುಂಬ್ಲೆ ಹಾಗೂ ಶೋಭ ಇವರ ಪುತ್ರಿ), ದೀಪ್ತಿಲಕ್ಷ್ಮಿ ಕೆ 592 (ಪುತ್ತೂರಿನ ಬುಳ್ಳೇರಿಕಟ್ಟೆಯ ಶಂಕರಪ್ರಸಾದ್ ಹಾಗೂ ಉಷಾ ದಂಪತಿಗಳ ಪುತ್ರಿ), ಮತ್ತು ವಾಣಿಜ್ಯ ವಿಭಾಗದಲ್ಲಿ ಅದಿತ್ಯನಾರಾಯಣ ಪಿ ಎಸ್ 595 ಅಂಕಗಳನ್ನು ಪಡೆಯುವುದರ ಮೂಲಕ ರಾಜ್ಯಕ್ಕೆ 3ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. (ಪುತ್ತೂರಿನ ಬನ್ನೂರಿನ ಶಂಕರ್ ಭಟ್ ಹಾಗೂ ದೇವಕಿ ಇವರ ಪುತ್ರ), ಕಲಾ ವಿಭಾಗದಲ್ಲಿ ಮಂಜುಶ್ರೀ 591 ಅಂಕಗಳನ್ನು ಪಡೆಯುವುದರ ಮೂಲಕ ರಾಜ್ಯಕ್ಕೆ 3ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. (ಸುಳ್ಯ ಉಬರಡ್ಕದ ತೀರ್ಥರಾಮ ಹಾಗೂ ಸಂಧ್ಯಾ ಇವರ ಪುತ್ರಿ) ಅಂಕಗಳನ್ನು ಪಡೆದು ಉತ್ತಮ ಫಲಿತಾಂಶ ನೀಡಿರುತ್ತಾರೆ. ಕಲಾ ವಿಭಾಗದಲ್ಲಿ 1, ವಾಣಿಜ್ಯ ವಿಭಾಗದಲ್ಲಿ 11, ವಿಜ್ಞಾನ ವಿಭಾಗದಲ್ಲಿ 8 ವಿದ್ಯಾರ್ಥಿಗಳು 585 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರುತ್ತಾರೆ.
ವಿಜ್ಞಾನ ವಿಭಾಗದ ಒಟ್ಟು 420 ಮಂದಿ ವಿದ್ಯಾರ್ಥಿಗಳಲ್ಲಿ 224 ಮಂದಿ ಡಿಸ್ಟಿಂಕ್ಷನ್, 179 ಮಂದಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿ ಶೇ 99.28 ಫಲಿತಾಂಶ, ವಾಣಿಜ್ಯ ವಿಭಾಗದ ಒಟ್ಟು 218 ವಿದ್ಯಾರ್ಥಿಗಳಲ್ಲಿ 107 ಮಂದಿ ಡಿಸ್ಟಿಂಕ್ಷನ್ ಹಾಗೂ 95 ಮಂದಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿ ಶೇ 99.54 ಫಲಿತಾಂಶ, ಕಲಾ ವಿಭಾಗದ ಒಟ್ಟು 35 ವಿದ್ಯಾರ್ಥಿಗಳಲ್ಲಿ 10 ಮಂದಿ ಡಿಸ್ಟಿಂಕ್ಷನ್, 15 ಮಂದಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿ ಶೇ 97.14 ಫಲಿತಾಂಶ ಪಡೆದಿದ್ದಾರೆ. ಕಾಲೇಜಿನ ಸರಾಸರಿ ಫಲಿತಾಂಶವು 99.25 ಶೇಕಡ ಆಗಿರುತ್ತದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ