ರಾಷ್ಟ್ರೀಯ ಜೂನಿಯರ್ ಬಾಲ್‍ಬ್ಯಾಡ್ಮಿಂಟನ್: ರಾಜ್ಯ ಬಾಲಕರ ಮತ್ತು ಬಾಲಕಿಯರ ತಂಡ ರನ್ನರ್ಸ್ ಅಪ್

Upayuktha
0

 


ಮೂಡುಬಿದಿರೆ: ಮಹಾರಾಷ್ಟ್ರದ ಮುರ್ತಿಝಾಬಾದ್‍ನಲ್ಲಿ ನಡೆದ 67ನೇ ರಾಷ್ಟ್ರೀಯ ಜೂನಿಯರ್  ಬಾಲ್‍ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಕರ್ನಾಟಕ ಬಾಲಕ ಮತ್ತು ಬಾಲಕಿಯರ ಎರಡೂ ತಂಡ ರನ್ನರ್ಸ್ ಅಪ್ ಆಗಿ ಹೊರಹೊಮ್ಮಿದೆ. ಬಾಲಕರ ವಿಭಾಗದ ಕ್ವಾರ್ಟರ್ ಫೈನಲ್ಸ್‌ನಲ್ಲಿ ಕರ್ನಾಟಕ ಬಾಲಕರ ತಂಡ ತೆಲಂಗಾಣ ತಂಡವನ್ನು 35-25, 35-22 ಅಂಕಗಳಿಂದ ಮಣಿಸಿದ್ದರಲ್ಲದೆ, ಸೆಮಿಫೈನಲ್ಸ್‌ನಲ್ಲಿ ಕರ್ನಾಟಕ ಬಾಲಕರ ತಂಡ ಆಂಧ್ರಪ್ರದೇಶತಂಡವನ್ನು 21-35, 35-31, 35-22 ಅಂಕಗಳಿಂದ ಸೋಲಿಸಿ ಫೈನಲ್ಸ್ ಹಂತಕ್ಕೆ ಅರ್ಹತೆಯನ್ನು ಪಡೆದುಕೊಂಡರು. 


ಫೈನಲ್ಸ್‌ನಲ್ಲಿ ಕರ್ನಾಟಕ ತಂಡ ತಮಿಳುನಾಡು ವಿರುದ್ಧ 26-35, 32-35 ಅಂಕಗಳಿಂದ  ಪರಾಭವಗೊಂಡು ರನ್ನರ್ಸ್ ಅಪ್ ಪ್ರಶಸ್ತಿ ಪಡೆದುಕೊಂಡರು. ಬಾಲಕಿಯರ ವಿಭಾಗದ ಕ್ವಾರ್ಟರ್ ಫೈನಲ್ಸ್‌ನಲ್ಲಿ ಕರ್ನಾಟಕ ಬಾಲಕಿಯರ ತಂಡ ರಾಜಸ್ಥಾನ ತಂಡವನ್ನು 35-16, 35—21 ಅಂಕಗಳಿಂದ, ಮಣಿಸಿದ್ದರಲ್ಲದೆ, ಸೆಮಿ ಫೈನಲ್ಸ್‌ನಲ್ಲಿ ಕರ್ನಾಟಕ ಬಾಲಕಿಯರ ತಂಡ ಬಿಹಾರ ತಂಡವನ್ನು 35-21, 35-18 ಅಂಕಗಳಿಂದ ಸೋಲಿಸಿ ಫೈನಲ್ಸ್ ಹಂತಕ್ಕೆಅರ್ಹತೆಯನ್ನು ಪಡೆದುಕೊಂಡರು. 


ಫೈನಲ್ಸ್‌ನನಲ್ಲಿ ಕರ್ನಾಟಕ ತಂಡ ತಮಿಳುನಾಡು ವಿರುದ್ಧ 18-35, 26-35 ಅಂಕಗಳಿಂದ  ಪರಾಭವಗೊಂಡು ರನ್ನರ್ಸ್‍ ಅಪ್ ಪ್ರಶಸ್ತಿ ಪಡೆದುಕೊಂಡರು. ಬಾಲಕರ ತಂಡದ ಮನೋಜ್ ಹಾಗೂ ಬಾಲಕಿಯರ ತಂಡದ ಲತಾಶ್ರೀ “ಸ್ಟಾರ್ ಆಫ್‍ ಇಂಡಿಯಾ” ಪ್ರಶಸ್ತಿ ಪಡೆದುಕೊಂಡರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Advt Slider:
To Top