ಬಿಸಿಲ ಬೇಗೆ- ಪ್ರಾಣಿ ಪಕ್ಷಿಗಳ ದಾಹ ನೀಗಿಸಿ: ಸಾಕ್ಷಿ ಕಾಮತ್

Upayuktha
0

 

ಸುರತ್ಕಲ್: ಬೇಸಿಗೆ ಕಾಲದಲ್ಲಿ ಪಕ್ಷಿ ಪ್ರಾಣಿಗಳಿಗೆ ನೀರುಣಿಸು ಸಲುವಾಗಿ ಆಸರೆ ಎನಿಮಲ್ ಶೇರ್ ಸಂಸ್ಥೆಯ ವತಿಯಿಂದ ಗೋವಿಂದದಾಸ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳಿಗೆ ಚಟ್ಟಿಗಳನ್ನು ನೀಡಲಾಯಿತು. ಆಸರೆ ಎನಿಮಲ್‍ಕೇರ್ ಸಂಸ್ಥೆಯ ಸಂಚಾಲಕಿ ಸಾಕ್ಷಿ ಕಾಮತ್ ಮಾತನಾಡಿ ಬೇಸಿಗೆ ಕಾಲದಲ್ಲಿ ಪ್ರಾಣಿ ಪಕ್ಷಿಗಳ ದಾಹ ಹೆಚ್ಚಾಗುತ್ತಿದ್ದು ಸಾರ್ವಜನಿಕರು ನೀರೊದಗಿಸುವ ಮೂಲಕ ನೆರವಾಗಬಹುದೆಂದರು. ವಿದ್ಯಾರ್ಥಿಗಳಲ್ಲಿ ಪ್ರಾಣಿ ಪಕ್ಷಿಗಳ ಕುರಿತು ಕಾಳಜಿ ಹೆಚ್ಚಾಗುತ್ತಿರುವುದು ಸ್ವಾಗತಾರ್ಹ ಎಂದರು. ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ.ರಮೇಶ್ ಕುಳಾಯಿ ವಿನೂತನ ಯೋಜನೆಗೆ ಶುಭ ಹಾರೈಸಿದರು. 


ಕಾಲೇಜಿನ ಪ್ರಾಚಾರ್ಯ ಪ್ರೊ. ಕೃಷ್ಣಮೂರ್ತಿ ಮಾತನಾಡಿ ಹಕ್ಕಿಯಾಸರೆ ಯೋಜನೆಯ ಮೂಲಕ ಪಕ್ಷಿಗಳಿಗೆ ಆಶ್ರಯತಾಣವನ್ನು ಒದಗಿಸುವ ಯೋಜನೆ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು ರೂಪಿಸಿದ್ದು ಇದೀಗ ಚಟ್ಟಿಗಳಲ್ಲಿ ನೀರಿಡುವ ಮೂಲಕ ಸ್ಪಂದಿಸುತ್ತಿದ್ದಾರೆ ಎಂದರು. ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಅಕ್ಷತಾ ಸ್ವಾಗತಿಸಿದರು.


ಆಂತರಿಕ ಗುಣಮಟ್ಟದ ಖಾತರಿ ಕೋಶದ ಸಂಯೋಜಕ ಪ್ರೊ. ಹರೀಶ್‍ ಆಚಾರ್ಯ, ಪ್ರೊ. ನೀಲಪ್ಪ ವಿ, ಪ್ರಾಧ್ಯಾಪಕ ಪ್ರೊ.ವಾಮನ್‍ ಕಾಮತ್, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ದಯಾ ಸುವರ್ಣ, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯದರ್ಶಿಗಳಾದ ಸ್ವಾತಿ, ಪ್ರಯಾಗ್, ಪ್ರೀತೇಶ್, ಅನಿಶಾಶ್ರೀ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top