ಮಂಗಳೂರು ದಕ್ಷಿಣ: ಬಿರುಸು ಪಡೆದ ಪ್ರಚಾರದ ಕಣ

Upayuktha
0


ಮಂಗಳೂರು:  ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ. ವೇದವ್ಯಾಸ್ ಕಾಮತ್ ಅವರು ಡೊಂಗರಕೇರಿ ವಾರ್ಡಿನ ಮಹಮ್ಮಾಯಿ ದೇವಸ್ಥಾನ ರಸ್ತೆ ಹಾಗೂ ಅಳಕೆ ಪರಿಸರದಲ್ಲಿ ಮನೆ ಮನೆಗೆ ಭೇಟಿ ನೀಡಿ ಚುನಾವಣಾ ಪ್ರಚಾರ ನಡೆಸಿ ಮತಯಾಚಿಸಿದರು. 

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸುಜನ್ ದಾಸ್ ಕುಡುಪು, ರಮೇಶ್ ಹೆಗ್ಡೆ, ಜಯಶ್ರೀ ಕುಡ್ವ, ಶ್ರೀನಿವಾಸ್ ಶೇಟ್, ಕೃಷ್ಣಪ್ರಸಾದ್ ಶೆಟ್ಟಿ, ರಮಣ್ ಮೋಹನ್, ದೇವಾನಂದ ಶೆಣೈ, ಅರುಣ್ ಜಿ. ಶೇಟ್, ರೂಪೇಶ್ ಶೇಟ್, ಪುಷ್ಪಾ ಶೆಟ್ಟಿ, ನಾಗೇಶ್ ದೇವಾಡಿಗ, ಗೋಪಾಲ್ ಶೇಟ್, ಜನಾರ್ದನ್ ಕುಡ್ವ, ಶ್ರೀಕಾಂತ್ ಶೆಣೈ, ಅಕ್ಷತ್ ಕಾಮತ್, ಲಕ್ಷ್ಮಿ ಪ್ರಕಾಶ್ ಶೆಟ್ಟಿ, ವಿನಾಯಕ್ ಶೇಟ್ ಮುಂತಾದವರು ಉಪಸ್ಥಿತರಿದ್ದರು.


ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸೆಂಟ್ರಲ್ ವಾರ್ಡಿನ ಬೂತ್ ಸಂಖ್ಯೆ 123 ಟ್ಯಾಂಕ್ ಕಾಲೋನಿಯಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಡಿ. ವೇದವ್ಯಾಸ್ ಕಾಮತ್ ಅವರು ಮನೆ ಮನೆಗೆ ತೆರಳಿ ಮತಯಾಚಿಸಿದರು.


ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸುಜನ್ ದಾಸ್‌ ಕುಡುಪು, ಪೂರ್ಣಿಮಾ ಎಂ, ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ರಮೇಶ್ ಹೆಗ್ಡೆ, ಶಕ್ತಿಕೇಂದ್ರ ಅಧ್ಯಕ್ಷರಾದ ಮುರಳಿಧರ್ ನಾಯಕ್, ಮಹಿಳಾ ಮೋರ್ಚಾ ಮಂಡಲ‌ ಅಧ್ಯಕ್ಷರಾದ ಪೂರ್ಣಿಮಾ, ಬೂತ್ ಅಧ್ಯಕ್ಷರಾದ ಸೌಮ್ಯ ಶೆಟ್ಟಿ, ನಮ್ರತಾ ನಾಗರ್ ಮಟ್, ದೇವದಾಸ್ ನಾಗರ್ ಮಟ್, ಮುಖಂಡರಾದ ರಾಧಾಕೃಷ್ಣ, ಶ್ರೀನಿವಾಸ್ ಶೇಟ್, ಮಾಧವ ಕಾಮತ್, ಚಂದ್ರಕಾಂತ್ ನಾಯಕ್, ಗಿರೀಶ್, ಸೂರಜ್ ಬಜಿಲಕೇರಿ, ಅಮಿತ್ ನಾಗರಮಟ್, ಅವಿನಾಶ್ ಸುವರ್ಣ, ಪ್ರಮೋದ್ ಆಚಾರ್ಯ, ಗಣೇಶ್ ನಾಯಕ್, ಮೋಹಿತ್ ಶೆಟ್ಟಿ, ರಾಘು, ರಾಜಲಕ್ಷ್ಮಿ, ಗಣಪತಿ ಮುಂತಾದವರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top