ಶ್ರೀ ವೀರನಾರಾಯಣ ದೇವಸ್ಥಾನ ಬ್ರಹ್ಮಕಲಶದ ಆಮಂತ್ರಣ ಪತ್ರಿಕೆ, ಜಾಲತಾಣ ಬಿಡುಗಡೆ

Upayuktha
0

ಕುಲಾಲ ಸಮಾಜದ ಅಭಿವೃದ್ಧಿಗೆ ಕಳಸ ಪ್ರಾಯವಾಗಲಿ: ಮಾಣಿಲ ಶ್ರೀ 


ಮಂಗಳೂರು: ಕುಲಶೇಖರದ ಶ್ರೀ ವೀರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಪತ್ರಿಕೆಯನ್ನು ಕ್ಷೇತ್ರದ ಸಭಾಂಗಣದಲ್ಲಿ ಶ್ರೀಧಾಮ ಮಾಣಿಲದ ಪರಮಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಲೋಕರ್ಪಣೆಗೊಳಿಸಿದರು.


ಆ ಬಳಿಕ ಸ್ವಾಮೀಜಿಯವರು ಆಶೀರ್ವಚನ ನೀಡುತ್ತಾ, ಕಡಿಮೆ ಸಮಯದಲ್ಲಿ ಸುಂದರವಾಗಿ ರೂಪಗೊಂಡಿರುವ ಶ್ರೀ ಕ್ಷೇತ್ರ ಹಿಂದೂ ಧರ್ಮದ ರಕ್ಷಣೆಯ ಕೇಂದ್ರವಾಗಲಿ, ಬ್ರಹ್ಮಕಲಶೋತ್ಸವದ ಧರ್ಮ ಕಾರ್ಯದಲ್ಲಿ ಲಕ್ಷಾಂತರ ಭಕ್ತರು ಸೇರುವಂತಾಗಲಿ ಸಮಾಜಕ್ಕೆ ಆದರ್ಶವಾಗಲಿ, ಕುಲಾಲ ಸಮಾಜದ ಅಭಿವೃದ್ಧಿಗೆ ಕಳಸ ಪ್ರಾಯವಾಗಲಿ ಎಂದು ನುಡಿದರು. ಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ಬ್ರಹ್ಮಶ್ರೀ ಅನಂತ ಉಪಾಧ್ಯಾಯರು ಬ್ರಹ್ಮಕಲಶೋತ್ಸವದ ಧಾರ್ಮಿಕ ವಿಧಿವಿಧಾನಗಳ ಮಾಹಿತಿ ನೀಡಿದರು.


ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಬಿ. ಪ್ರೇಮಾನಂದ ಕುಲಾಲ್ ಕೋಡಿಕಲ್ ರವರು ಮಾತನಾಡಿ ಭಕ್ತರಲ್ಲರ ಸಹಕಾರದಿಂದ ಕ್ಷೇತ್ರ ನವ ನಿರ್ಮಾಣಗೊಂಡಿದೆ ದೇಶ ವಿದೇಶಗಳಿಂದ ಲಕ್ಷಾಂತರ ಭಕ್ತರು ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಆಗಮಿಸಲಿದ್ದಾರೆ ಅದಕ್ಕೆ ಸರ್ವಸಿದ್ಧತೆಯನ್ನು ಮಾಡಲಾಗಿದೆ ಎಂದು ನುಡಿದರು.


ದಕ್ಷಿಣ ಕನ್ನಡ ಜಿಲ್ಲಾ ಕುಲಾಲರ ಯಾನೆ ಮಾತೃ ಸಂಘದ ಅಧ್ಯಕ್ಷ,ಬ್ರಹ್ಮಕಲಶೋತ್ಸವ ಸಮಿತಿಯ ಗೌರವ ಅಧ್ಯಕ್ಷರಾದ ಮಯೂರ್ ಉಳ್ಳಾಲ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವದ ಮೂಲಕ ಸರ್ವ ರೀತಿಯಲ್ಲಿ ಸಮಾಜ ಅಭಿವೃದ್ಧಿಗೊಳ್ಳಲಿ, ಹಿಂದೂ ಧರ್ಮದ ಪುಣ್ಯ ದೇಗುಲವಾಗಿ ಮೆರೆಯಲಿ ಎಂದು ನುಡಿದರು. ಈ ಸಂದರ್ಭದಲ್ಲಿ ಧನುಷ್.ಎಸ್. ಶಕ್ತಿನಗರ ರವರ ನೇತೃತ್ವದಲ್ಲಿ ರಚಿಸಿದ ಶ್ರೀ ಕ್ಷೇತ್ರದ ಸಮಗ್ರ ಮಾಹಿತಿಯ ವೆಬ್ಸೈಟ್, ಜಾಲತಾಣವನ್ನು ಸ್ವಾಮೀಜಿಯವರು ಲೋಕಾರ್ಪಣೆಗೊಳಿಸಿದರು.

    

ವೇದಿಕೆಯಲ್ಲಿ ವಿದ್ವಾನ್ ಶ್ರೀಹರಿ ಉಪಾಧ್ಯಾಯರು, ಬ್ರಹ್ಮಕಲಶೋತ್ಸವ ಸಮಿತಿಯ ಗೌರವ ಸಲಹೆಗಾರರಾದ ಪುರುಷೋತ್ತಮ ಕುಲಾಲ್ ಕಲ್ಬಾವಿ, ದಾಮೋದರ್.ಎ, ಎಂ.ಪಿ. ಬಂಗೇರ, ಗೌರವ ಅಧ್ಯಕ್ಷರಾದ ಸುನಿಲ್ ಸಾಲ್ಯಾನ್ ಮುಂಬೈ, ಸ್ವಾಗತ ಸಮಿತಿಯ ಸಂಚಾಲಕರಾದ ಬಿ. ಸುರೇಶ್ ಕುಲಾಲ್, ಹಸಿರು ಹೊರೆಕಾಣಿಕೆ ಸಮಿತಿಯ ಸಂಚಾಲಕರಾದ ಕೆ. ಸುಂದರ್ ಕುಲಾಲ್, ಶ್ರೀ ವೀರನಾರಾಯಣ ಮಾತೃ ಮಂಡಳಿಯ ಅಧ್ಯಕ್ಷರಾದ ಗೀತಾ ಮನೋಜ್ ಉಪಸ್ಥಿತರಿದ್ದರು.


ಸೌಮ್ಯ ಕಿಶೋರ್ ಪ್ರಾರ್ಥನೆ ಮಾಡಿದರು. ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಿರಿಧರ್.ಜೆ. ಮೂಲ್ಯ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಅಳಪೆ ವಂದಿಸಿದರು. ಸಮಿತಿಯ ಕಾರ್ಯಾಧ್ಯಕ್ಷ,  ನ್ಯಾಯವಾದಿ ರವೀಂದ್ರ ಮುನ್ನಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top