ಹವ್ಯಕ ಕವನ: ಹಣ್ಣುಗಳ ರಾಜ

Upayuktha
0

ಪ್ರಾತಿನಿಧಿಕ ಚಿತ್ರ


ಮಾವಿನಾ ಮರದಡಿಲಿ ಹಣ್ಣಿಕ್ಕು ಹರಡಿಂಡು

ನಾವಲ್ಲಿ ಸೇರೆಕ್ಕು ಉದಿಯಪ್ಪಗ

ದೇವರಾ ಬೇಡ್ಯೊಂಡುಯಿದ್ದಲ್ಲಿ ಫಲವೊದಗಿ

ಬೇವೆಲ್ಲ ಬೆಲ್ಲಕ್ಕು ಒಟ್ಟಪ್ಪಗ ..


ತೊಳದಿಕ್ಕಿ ಹಣ್ಣುಗಳ ತೊಟ್ಟುಗಳ ಕೆತ್ತಿಕ್ಕಿ

ತೆಳುಪಿನಾ ಚೋಲಿಗಳ ಬಲುಗಿ ಹಾಕಿ

ಬಲ ಹಾಕಿ ಹಿಂಡಿದರೆ ಗುಳಯೆಲ್ಲ ಹೆರ ಬಕ್ಕು

ಹಲವಾರು ಮಾವುಗಳ ಗೊರಟು ಬಾಕಿ.


ಹಣ್ಣುಗಳ ಎಸರಿಂಡಿ ಹಾಳೆಲ್ಲಿ ಹರಗಿಕ್ಕಿ

ಕಣ್ಣಿಂಗೆ ಕಾಂಗದುವೆ ಚೆಂದ ಉಕ್ಕು ..

ನಿನ್ನೆಯಾ ಪಾಕಕ್ಕೆ ಇಂದಿನಾ ಎಸರೆರದು

ಹಣ್ಣುಗಳ ಮಾಂಬಳವ ಮಾಡಲಕ್ಕು..


ರಾಯನಡ ಹಣ್ಣುಗಳ ಚೂತಫಲ ಮಾತಿದ್ದು

ಕಾಯಿಗಳ ಇಳುಶೆಕ್ಕೊ ಹರುಶಿ ಬೆಗರು

ಬಾಯಿಗೇ ಭಾರಿರುಚಿ ಆಮ್ರ ಫಲ ಚೆಂದದ್ದು

ಚಾಯದಾ ಬಣ್ಣವೇ ಮರದ ಚೆಗುರು.


-ಗುಣಾಜೆ ರಾಮಚಂದ್ರ ಭಟ್

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Tags

Post a Comment

0 Comments
Post a Comment (0)
Advt Slider:
To Top