ಕಾಸರಗೋಡು: ಜಾಗೃತಿ ಟ್ರಸ್ಟ್ ಬೆಂಗಳೂರು ಸಂಸ್ಥೆಯ ವತಿಯಿಂದ ಶನಿವಾರ (ಏ.15) ಶ್ರೀ ಎಡನೀರು ಮಠದ ವಠಾರದ ಭವ್ಯ ವೇದಿಕೆಯಲ್ಲಿ ಸಾಹಿತ್ಯ ಸಾಂಸ್ಕೃತಿಕ ಕವಿಗೋಷ್ಠಿ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಸಮಾರಂಭವನ್ನು ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸಿದರು.
ಡಾ. ವಾಣಿಶ್ರೀ ಕಾಸರಗೋಡು ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್, ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ) ಕಾಸರಗೋಡು- ಪ್ರಧಾನ ಕಾರ್ಯದರ್ಶಿ ಗುರುರಾಜ್ ಕಾಸರಗೋಡು, ಸಮಾಜ ಸೇವಕಿ ಶ್ರೀಮತಿ ಮಮತಾ ಮುಂತಾದ ಗಣ್ಯರು ಭಾಗವಹಿಸಿದ್ದರು.
ಈ ಸಮಾರಂಭದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ) ಕಾಸರಗೋಡು ಸಂಸ್ಥೆಯ ವತಿಯಿಂದ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮ ಜರುಗಿತು.
ಡಾ. ವಾಣಿಶ್ರೀ ಕಾಸರಗೋಡು, ಗುರುರಾಜ್ ಕಾಸರಗೋಡು, ತನ್ವಿ ಶೆಟ್ಟಿ ಪಾಣಾಜೆ, ಅವನಿ ಎಂ ಎಸ್ ಸುಳ್ಯ, ಉಷಾ ಸುಧಾಕರನ್, ರೇಖಾ ಶಿವರಾಮ್, ಸನುಷಾ ಸುನಿಲ್, ವಿಜಿತಾ ಕೇಶವನ್, ಸನುಷಾ ಸುಧಾಕರನ್, ಕವನಾ ಅಡೂರ್, ಕಾವ್ಯ ಅಡೂರ್, ಧನ್ಯ ಮುಳ್ಳೇರಿಯ, ಜ್ಞಾನ ರೈ ಪುತ್ತೂರು, ಪ್ರಥಮ್ಯ ಯು ವೈ, ಸನುಷಾ ಸುಧಾಕರನ್, ವಿಷ್ಣು ಸುಧಾಕರನ್, ಧನ್ವಿತ್ ಕೃಷ್ಣ, ಕೀರ್ತಿ, ಪೂಜಾಶ್ರೀ, ಸುವಿನ್ಯ, ಚೈತ್ರಾ, ಪ್ರಜನ್ಯ ಪ್ರವೀಣ್ ನೆಕ್ರಾಜೆ, ಕೃಪೇಶ್ ಎಂ ಆರ್, ಇಂದುಮತಿ, ಹರಿಣಿ, ರಮ್ಯ, ಗಾಯತ್ರಿ, ಕವಿತ, ಯದುಶ್ರೀ, ಪೂಜಾಶ್ರೀ ಮುಂತಾದ ಸಂಸ್ಥೆಯ ಕಲಾವಿದರು ಭಾಗವಹಿಸಿದರು.
ಈ ಸಮಾರಂಭದಲ್ಲಿ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.) ಕಾಸರಗೋಡು ಸಂಸ್ಥೆಯ ಅಪ್ರತಿಮ ಕಲಾವಿದರಾದ ತನ್ವಿ ಶೆಟ್ಟಿ ಪಾಣಾಜೆ, ಪ್ರಥಮ್ಯ ಯು ವೈ ನೆಲ್ಯಾಡಿ, ಪೂಜಾ ಶ್ರೀ ಎಡನೀರು, ಕೀರ್ತಿ ಎಡನೀರು, ಧನ್ವಿತ್ ಕೃಷ್ಣ ಎಡನೀರು ಇವರನ್ನು ಕಲಾ ಚೈತನ್ಯ ಗೌರವ ಬಿರುದು ನೀಡಿ ಪುರಸ್ಕರಿಸಲಾಯಿತು. ಬಿ. ನಾಗೇಶ್ ಸಾರಥ್ಯದ ಜಾಗೃತಿ ಟ್ರಸ್ಟ್ (ರಿ.) ಬೆಂಗಳೂರು ಸಂಸ್ಥೆಯ ವತಿಯಿಂದ ಡಾ.ವಾಣಿಶ್ರೀ ಕಾಸರಗೋಡು ಇವರಿಗೆ ಡಾ|| ರಾಜಕುಮಾರ್ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ