ಏಕಾಗ್ರಚಿತ್ತ ಮನಸ್ಸಿನಿಂದ ಉತ್ತಮ ಕಾವ್ಯದ ಹುಟ್ಟು

Upayuktha
0


ಕಾರ್ಕಳ: ಋಷಿಯಲ್ಲದವ ಕವಿಯಾಗಲಾರ ಅನ್ನುವ ಮಾತಿದೆ. ಹೊರ ಜಗತ್ತನ್ನು ನೋಡುತ್ತಾ, ಅನುಭವಿಸುತ್ತಾ ಯಾರೂ ಕಾಣದೇ ಇರುವುದನ್ನು ಕವಿ ಕಾಣಬಲ್ಲ. ಅಂದರೆ ಬಹಿರ್ಮುಖವಾಗಿ ಕಾಣುವ ಸಂಗತಿಗಳೆಲ್ಲವನ್ನೂ ಅಂತರ್ಮುಖಿಯಾಗಿಸಿಕೊಂಡಾಗ ಅದು ಆತನಿಗೆ ಭಿನ್ನವಾಗಿ ಗೋಚರಿಸುತ್ತದೆ. ಅದನ್ನು ಋಷಿಯಂತೆ ಏಕ ಚಿತ್ತದ ಮನಸ್ಸಿನಿಂದ ಕಲೆಗಾರಿಕೆಯೊಂದಿಗೆ ಮಂಥನಕ್ಕೊಳಪಡಿಸಿದಾಗ ಉತ್ತಮ ಕಾವ್ಯ ಹುಟ್ಟಿಕೊಳ್ಳುತ್ತದೆ ಎಂಬುದಾಗಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ. ಯೋಗೀಶ್ ಕೈರೋಡಿಯವರು ಹೇಳಿದರು.


ಕನ್ನಡ ಸಂಘ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಇವುಗಳ ಜಂಟಿ ಸಹಯೋಗ ಹಾಗೂ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ನಡೆದ ತಿಂಗಳ ಅರಿವು ತಿಳಿವು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು “ಹೊಸಗನ್ನಡ ಕಾವ್ಯ - ಶಕ್ತಿ ಮತ್ತು ಸೌಂದರ್ಯ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.


ದಾರ್ಶನಿಕರು ಕಾವ್ಯದ ಬಗ್ಗೆ ಕಾವ್ಯ ಮೀಮಾಂಸೆಯಂತಹ ಹಲವು ಮಾರ್ಗದರ್ಶಿ ಕೃತಿಗಳನ್ನು ನೀಡಿದ್ದು ಅದರ ಅಧ್ಯಯನವಿಲ್ಲದೆ ಕಾವ್ಯವನ್ನು ಲಘುವಾಗಿ ಪರಿಗಣಿಸಿ ರಚಿಸಿದ ಕವನಗಳೆಲ್ಲವೂ ಅವಸರದ ಉತ್ಪನ್ನಗಳಾಗಿ ದೀರ್ಘಕಾಲ ಬಾಳಲಾರದು. ಪಾಶ್ಚಿಮಾತ್ಯ ವಿದ್ವಾಂಸರು ಕೂಡಾ ಕಾವ್ಯದ ಬಗ್ಗೆ ಗಂಭೀರವಾಗಿ ಚರ್ಚೆ, ವಾದ, ಪ್ರತಿಪಾದನೆಗಳನ್ನು ಮಾಡಿರುವುದನ್ನು ಗಮಿಸಿದರೆ ಕಾವ್ಯಕ್ಕೆ ಅವರು ಕೂಡಾ ಹೆಚ್ಚಿನ ಮಹತ್ವ ನೀಡುತ್ತಿದ್ದರು ಎಂಬುದನ್ನು ಮನಗಾಣಬಹುದಾಗಿದೆ. ಕವಿಗಳು ಕಾವ್ಯವನ್ನು ಲಘುವಾಗಿ ಪರಿಗಣಿಸದೆ ಗಂಭೀರವಾಗಿ ಚಿಂತಿಸಿದಲ್ಲಿ ಉತ್ತಮ ಕಾವ್ಯ ಕೃತಿಗಳನ್ನು ನೀಡಬಹುದಾಗಿದೆ ಎಂದರು.


ಅತಿಥಿಗಳನ್ನು ಇದೇ ಸಂದರ್ಭದಲ್ಲಿ  ಸ್ಮರಣಿಕೆಯೊಂದಿಗೆ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಕನ್ನಡ ಸಂಘದ ಕಾರ್ಯಾಧ್ಯಕ್ಷರಾದ ಡಾ.ನಾ.ಮೊಗಸಾಲೆ, ಅ.ಭಾ.ಸಾ.ಪ.ದ ಕಾರ್ಕಳ ತಾಲೂಕಿನ ಗೌರವಾಧ್ಯಕ್ಷರಾದ ಶ್ರೀ ನಿತ್ಯಾನಂದ ಪೈ, ಅಧ್ಯಕ್ಷರಾದ ಶ್ರೀಮತಿ ಮಿತ್ರ್ರಪ್ರಭಾ ಹೆಗ್ಡೆ, ಏರ್ ಮಾರ್ಷಲ್ ರಮೇಶ್ ಕಾರ್ಣಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಮಾಲತಿ ವಸಂತರಾಜ್  ಕಾರ್ಯಕ್ರಮ ನಿರೂಪಿಸಿದರು. ಜಯಶ್ರೀ ಆದಿರಾಜ್ ಪ್ರಾರ್ಥಿಸಿದರು. ಸದಾನಂದ ನಾರಾವಿ ಸ್ವಾಗತಿಸಿದರು. ಮಿತ್ರಾಪ್ರಭಾ ಹೆಗ್ಡೆ ವಂದಿಸಿದರು.


-ಸದಾನಂದ ನಾರಾವಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top