ಹಾಸನ: ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ ಹಾಗೂ ಹಾಸನ ಜಿಲ್ಲಾ ಘಟಕದ ಸಹಯೋಗದೊಂದಿಗೆ ಏಪ್ರಿಲ್ ಫೂಲ್ ಡೇ ಅಂಗವಾಗಿ ರಾಜ್ಯಮಟ್ಟದ ಹಾಸ್ಯ ಹನಿಗವನ ವಾಚನ ಕಾರ್ಯಕ್ರಮ ಏರ್ಪಡಿಸಿದೆ.
ಏಪ್ರಿಲ್ 1ರಂದು ಸಂಜೆ ಐದೂವರೆಗೆ ಗೂಗಲ್ ಮೀಟ್‍ನಲ್ಲಿ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಸ್ಯ ಸಾಹಿತಿ ಗೊರೂರು ಅನಂತರಾಜು ವಹಿಸುವರು. ಹಾಸ್ಯ ಸಾಹಿತಿಗಳಾದ ಕೋ.ಲ. ರಂಗನಾಥ ರಾವ್, ಎಸ್.ಎಸ್.ಪಡಶೆಟ್ಟಿ ಹಾಗೂ ಚಲನಚಿತ್ರ ಹಾಸ್ಯನಟ ಮೈಸೂರು ರಮಾನಂದ್ ಹಾಸ್ಯ ರಸಾಯನದಿಂದ ರಂಜಿಸುವರು. ಮುಖ್ಯ ಅತಿಥಿಗಳಾಗಿ ರಾಜ್ಯ ಉಪಾದ್ಯಕ್ಷರುಗಳಾದ ಕೆ.ಬಾರಾವಲಿ ಬಾವಿಹಳ್ಳಿ, ಬಂಡು ಬಂಜಾರ, ಹೆಚ್.ವಾಯ್ ರಾಠೋಡ್, ಪ್ರಧಾನ ಕಾರ್ಯದರ್ಶಿ ಮಹೇಶ್ ಹೆಚ್.ಎಸ್. ಭಾಗವಹಿಸುವರು.
ಹಾಸ್ಯ ಹನಿಗವನ ವಾಚಿಸುವ ಕವಿಗಳು: ಪ್ರವೀಣ ಕುಮಾರ್ ಟಿ. ಅಂಬಿಕಾ ಎಸ್. ಕಲಬುರಗಿ, ಡಾ. ಸೋಮಶೇಖರಯ್ಯ ಈ ಹಿರೇಮಠ, ಎ.ಬಿ.ರುದ್ರಮ್ಮ, ಪವನ್ ಕೆ.ವಿ ಬಳ್ಳಾರಿ, ರಾಜೇಶ್ವರಿ ಹುಲ್ಲೇನಹಳ್ಳಿ, ಕುಮಾರ ಚಲವಾದಿ, ಹೆಚ್.ಎಸ್.ಪ್ರತಿಮಾ ಹಾಸನ, ನಾಗರಾಜ ಹ.ಬೆಂಗಳೂರು, ಸುರೇಖಎಂ.ಜೀವರ್ಗಿ, ರಮೇಶ ಹೆಗಡೆ ಕೆರೆಕೋಣ, ಡಿ.ಕೆ.ಹೂಗಾರ, ಶೋಭಾ ಮಲ್ಕಿ ಒಡೆಯರ್, ಮೋಹನ್ ಕಳಸಾಪುರ, ಯಶೋಧ ಎಂ.ಎಸ್, ಶಿವಲೀಲಾ ದನ್ನಾ, ಮಧುಮತಿ ಸಣಕಲ್, ಅಶೋಕ ಹೆಚ್. ಚಿಂತಾಮಣಿ, ವೀರಭದ್ರಯ್ಯ ಟಿ.ಎಂ. ಹಾ.ತಿ. ಜಯಪ್ರಕಾಶ್, ಶೈಲಜ ಪಿ.ಶಿಂಪಿ, ಉಷಾ ಗಂಗಾಧರ ದೈವಜ್ಞ, ನಿಂಗನಗೌಡ ಬ.ಪಾಟೀಲ್, ಸೌಭಾಗ್ಯ ಅರೇರಾ, ಬ್ಯಾಡನೂರು ವೀರಭದ್ರಪ್ಪ, ವಿ.ಟಿ. ಶ್ರೀನಿವಾಸ, ರಾಜಣ್ಣ ರಾಶಿ. ಸುಂದರೇಶ್ ಡಿ.ಉಡುವೇರೆ, ವೆಂಕಟೇಶ ಬಡಿಗೇರ, ಪರಮೇಶ ಅರಸೀಕೆರೆ, ಶಾಂತಾ ಸತ್ಯಂ, ಎಸ್.ಎಲ್. ಕ್ರಾಸ್ತಾ, ಬಸವರಾಜ ವಿ. ಘೋಡಗೇರ, ದ್ರಾಕ್ಷಾಯಿಣಿ ಮುರುಗನ್ ಮತ್ತು ಎನ್. ಬಸವರಾಜ ವಿಜಯನಗರ ಇವರು ಸ್ವರಚಿತ ಹಾಸ್ಯ ಹನಿಗವನ ವಾಚಿಸುವರೆಂದು ರಾಜ್ಯಾಧ್ಯಕ್ಷರು ಮಧು ನಾಯ್ಕ್ ಲಂಬಾಣಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ