ನಾಳೆ (ಏ.10) ಅಮೃತೇಶ್ವರ ನಾಟ್ಯಾಲಯದ ದಶೋತ್ಸವ ಕಾರ್ಯಕ್ರಮ

Upayuktha
0



ಮಂಗಳೂರು: ಅಮೃತೇಶ್ವರ ನಾಟ್ಯಾಲಯ (ರಿ) ವಾಮಂಜೂರು, ಮಂಗಳೂರು ಇದರ ದಶೋತ್ಸವ ಕಾರ್ಯಕ್ರಮ ಎಪ್ರಿಲ್ 10 ರಂದು ಸೋಮವಾರ ಸಂಜೆ 4.30ಕ್ಕೆ ಕುದ್ಮಲ್ ರಂಗರಾವ್ ಪುರಭವನ ಮಂಗಳೂರು ಇಲ್ಲಿ ನೆರವೇರಲಿದೆ.


ಸಂಜೆ 4.30 ಕ್ಕೆ ಭರತ ನಾಟ್ಯ ಹಾಗೂ ಶಕ್ತಿಪೀಠ ನೃತ್ಯ ರೂಪಕ ನಡೆಯಲಿದೆ.  ಸಂಜೆ 7ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಕಲಾಶ್ರೀ ವಿದ್ವಾನ್ ಪಿ ಕಮಲಾಕ್ಷ ಆಚಾರ್ ನೃತ್ಯನಿಕೇತನ ಬೆಳ್ತಂಗಡಿ ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಕುಡುಪು ಕೃಷ್ಣರಾಜ ತಂತ್ರಿ ಆಶೀರ್ವಚನ ನೀಡಲಿದ್ದಾರೆ. ಮಾಮಂಜೂರು ಶ್ರೀ ದುರ್ಗಾ ಕನ್ಸ್ ಟ್ರಕ್ಷನ್ ಮಾಲಕ ಸತೀಶ್ ಶೆಟ್ಟಿ ಮೂಡು ಜಪ್ಪುಗುತ್ತು ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ಸನಾತನ ನಾಟ್ಯಾಲಯದ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾ ಮಣಿಶೇಖರ್ ಶುಭನುಡಿಗೈಯಲಿದ್ದಾರೆ.

ಕುಳಾಯಿ-ಹೊಸಬೆಟ್ಟು ಶ್ರೀ ಶಾರದಾ ನಾಟ್ಯಾಲಯದ ವಿದುಷಿ ಭಾರತಿ ಸುರೇಶ್ ಉಪಸ್ಥಿತಿಯಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾದ ಬಾಳ ಜಗನ್ನಾಥ ಶೆಟ್ಟಿ, ಮಾಮಂಜೂರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಉಮೇಶ್ ಕೋಟ್ಯಾನ್ ಭಾಗವಹಿಸಲಿದ್ದಾರೆ ಎಂದು ಅಮೃತೇಶ್ವರ ನಾಟ್ಯಾಲಯ (ರಿ) ಕುಳಾಯಿ ಇದರ ನಿರ್ದೇಶಕಿ ಚಿತ್ರಾಕ್ಷಿ ಅಜಿತ್ ಕುಮಾರ್ ತಿಳಿಸಿದ್ದಾರೆ.


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top