ಸುರತ್ಕಲ್: ಯಕ್ಷಗಾನ ಲೋಕದಲ್ಲಿ 'ಅಗರಿ ಶೈಲಿ'ಯ ಮೂಲಕ ವಿರಾಜಮಾನರಾಗಿರುವ ಅಗರಿ ಶ್ರೀನಿವಾಸ ಭಾಗವತರು ಪರಂಪರೆಯ ಉಳಿಸುವಿಕೆಗೆ ಶ್ರಮಿಸಿದವರು. ಅಗರಿ ರಘುರಾಮ ಭಾಗವತರು ಯಕ್ಷಗಾನ ಲೋಕದಲ್ಲಿ ಸ್ವಾಭಿಮಾನದ ಪ್ರತೀಕವಾಗಿ ವಿಜ್ರಂಭಿಸಿದವರು ಎಂದು ಹಿರಿಯ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಷಿ ಹೆಳಿದರು.
ಅವರು ಅಗರಿ ಶ್ರೀನಿವಾಸ ಭಾಗವತ ಸಂಸ್ಮರಣಾ ವೇದಿಕೆ ಹಾಗೂ ಗೋವಿಂದ ದಾಸ ಕಾಲೇಜಿನ ಸಹಭಾಗಿತ್ವದಲ್ಲಿ ನಡೆದ ಅಗರಿ ಸಂಸ್ಮರಣೆ ಮತ್ತು ಅಗರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಅಗರಿ ಪ್ರಶಸ್ತಿ ಸ್ವೀಕರಿಸಿದ ಧರ್ಮಸ್ಥಳ ಡಿ. ಹರ್ಷೇಂದ್ರ ಕುಮಾರ್ ಅವರು, ಆಧುನಿಕ ಕಾಲಘಟ್ಟದಲ್ಲಿ ವರ್ತಮಾನದ ಅವಶ್ಯಕತೆಗಳಿಗೆ ಪೂರಕವಾಗಿ ಯಕ್ಷಗಾನದಲ್ಲಿ ಪರಿವರ್ತನೆಗಳು ಅನಿವಾರ್ಯ. ಕಾಲಮಿತಿ ಯಕ್ಷಗಾನವು ಪ್ರೇಕ್ಷಕ ಸಮುದಾಯವನ್ನು ಆಕರ್ಷಿಸುವಲ್ಲಿ ಸಫಲವಾಗಿದೆ ಎಂದರು.
ಅಗರಿ ಶೈಲಿ ಪ್ರಶಸ್ತಿಯನ್ನು ಶ್ರೀ ಗೆಜ್ಜೆಗಿರಿ ಮೇಳದ ಭಾಗವತರಾದ ಗಿರೀಶ್ ರೈ ಕಕ್ಕೆಪದವು ಹಾಗೂ ಅಗರಿ ವಿಶೇಷ ಸನ್ಮಾನವನ್ನು ಶ್ರೀ ಕಟೀಲು ಮೇಳದ ಕಲಾವಿದ ಡಾ. ವಾದಿರಾಜ ಕಲ್ಲೂರಾಯರಿಗೆ ಪ್ರಧಾನ ಮಾಡಲಾಯಿತು.
ಯಕ್ಷಗಾನ ಕಲಾರಂಗ ಉಡುಪಿಯ ಕಾರ್ಯದರ್ಶಿ ಮುರಳಿ ಕಡೇಕಾರ್ ಮಾತನಾಡಿ, ಯುವ ಸಮಯದಾಯ ಯಕ್ಷಗಾನ ಕಲೆಯತ್ತ ಆಕರ್ಷಿತವಾಗುತ್ತಿದೆ ಎಂದರು.
ಉದ್ಯಮಿ ಶ್ರೀಪತಿ ಭಟ್ ಶುಭ ಹಾರೈಸಿ ಯಕ್ಷಗಾನ ಕಲೆಯ ಬೆಳವಣಿಗೆಗೆ ಗೋವಿಂದ ದಾಸ ಕಾಲೇಜು ವಿಶೇಷ ಪ್ರೋತ್ಸಾಹ ನೀಡುತ್ತಿದೆಂದರು. ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ಕೃಷ್ಣಮೂರ್ತಿ ಮಾತನಾಡಿ, ಯಕ್ಷಗಾನ ಪರಂಪರೆಯ ಶ್ರೇಷ್ಠತೆಯನ್ನು ವಿದ್ಯಾರ್ಥಿ ಸಮುದಾಯ ಅಭ್ಯಸಿಸುತ್ತಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಮುಕ್ತೇಸರ ಲಕ್ಷ್ಮೀನಾರಾಯಣ ಅಸ್ರಣ್ಣ ವಹಿಸಿದ್ದರು.
ಅಗರಿ ಶ್ರೀನಿವಾಸ ಭಾಗವತ ಸಂಸ್ಮರಣ ವೇದಿಕೆ ಸುರತ್ಕಲ್ ಅಧ್ಯಕ್ಷ ಅಗರಿ ರಾಘವೇಂದ್ರ ರಾವ್ ಸ್ವಾಗತಿಸಿದರು. ಶೇಷಶಯನ ವಂದಿಸಿದರು. ಕೃಷ್ಣಪ್ರಕಾಶ್ ಉಳಿತ್ತಾಯ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀಮತಿ ಪೂರ್ಣಿಮಾ ಯತೀಶ್ ರೈ ಸಂಯೋಜನೆಯಲ್ಲಿ “ಶ್ರೀದೇವಿ ಮಹಿಷ ಮರ್ಧಿನಿ” ಯಕ್ಷಗಾನ ಬಯಲಾಟ ನಡೆಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ