ಶ್ರೀನಿವಾಸ ವಿಶ್ವವಿದ್ಯಾಲಯ ವಾರ್ಷಿಕ ಕ್ರೀಡಾಕೂಟ

Upayuktha
0

ಮಂಗಳೂರು : ಶ್ರೀನಿವಾಸ ವಿಶ್ವವಿದ್ಯಾಲಯದ ವಾರ್ಷಿಕ ಕ್ರೀಡಾಕೂಟ ಇಂದು (ಮಾ.21) ಮಂಗಳಾ ಸ್ಟೇಡಿಯಂನಲ್ಲಿ ನಡೆಯಿತು.


ಮುಖ್ಯ ಅತಿಥಿ ಮಂಗಳೂರು ನಗರದ ಡಿಸಿಪಿ (ಎಲ್&ಓ) ಅಂಶುಕುಮಾರ್ ಐಪಿಎಸ್‌ ಧ್ವಜಾರೋಹಣ ನೆರವೇರಿಸಿ, ಒಲಿಂಪಿಕ್ ಜ್ಯೋತಿ ಬೆಳಗಿಸುವ ಮೂಲಕ ಕ್ರೀಡಾಕೂಟ ಉದ್ಘಾಟಿಸಿದರು. ಹಲವಾರು ಉತ್ಸಾಹಿ ವಿದ್ಯಾರ್ಥಿಗಳು ಭಾಗವಹಿಸುವುದನ್ನು ನೋಡಲು ನನಗೆ ಹೆಮ್ಮೆಯಾಗುತ್ತದೆ ಎಂದು ಈ ಸಂದರ್ಭದಲ್ಲಿ ಅವರು ಹೇಳಿದರು. ನಂತರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು.


ಶ್ರೀನಿವಾಸ ವಿಶ್ವವಿದ್ಯಾಲಯದ ಸಹ ಕುಲಾಧಿಪತಿಗಳಾದ ಡಾ ಶ್ರೀನಿವಾಸ್‌ರಾವ್‌ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳ ಸಾಧನೆ ನೋಡಲು ಸಂತೋಷವಾಗುತ್ತದೆ.  ಅವಕಾಶ ದೊರೆತಾಗ ಬಳಸಿಕೊಂಡು ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.


ಶ್ರೀನಿವಾಸ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಟ್ರಸ್ಟಿ ಸದಸ್ಯರಾದ ಎ. ವಿಜಯಲಕ್ಷ್ಮಿ ಆರ್. ರಾವ್, ಪ್ರೊ. ಇ ಆರ್. ಎ. ಮಿತ್ರಾ ಎಸ್. ರಾವ್, ಶ್ರೀನಿವಾಸ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಪಿ. ಎಸ್. ಐತಾಳ್, ರಿಜಿಸ್ಟ್ರಾರ್ ಡಾ. ಅನಿಲ್‌ಕುಮಾರ್  ಉಪಸ್ಥಿತರಿದ್ದರು. 


ಶ್ರೀನಿವಾಸ ವಿಶ್ವವಿದ್ಯಾಲಯದ ಮೌಲ್ಯಮಾಪನ ರಿಜಿಸ್ಟ್ರಾರ್ ಡಾ.ಶ್ರೀನಿವಾಸ್‌ ಮಯ್ಯ ಸ್ವಾಗತಿಸಿ, ಅಭಿವೃದ್ಧಿ ರಿಜಿಸ್ಟ್ರಾರ್ ಡಾ. ಅಜಯ್‌ಕುಮಾರ್ ವಂದಿಸಿದರು.


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top