ಚೈತ್ರ ಮಾಸದ ವಸಂತ ಕಾಲದ ಶುಭದಿನ.
ಹಚ್ಚ ಹಸಿರಾಗಿ ಕಾಣುತಿಹ ಇಳೆಗಿಂದು ಹೊಸತನ.
ಚಿಗುರೆಲೆಯ ಮರದ ಮರೆಯಿಂದ ಇಂಪಾದ ಕೋಗಿಲೆಗಾನ.
ಎಲ್ಲೆಲ್ಲೂ ಯುಗಾದಿ ಹಬ್ಬದ ಗುಣಗಾನ.
ನವ ಚೈತನ್ಯವು ತಂದಿಹುದು ಹೊಸದೊಂದು ಹುರುಪು.
ಭೂಮಿತಾಯಾ ಮಡಿಲಲ್ಲಿ ನವಯುಗದ ಹೊಳಪು.
ಬೇವು ಬೆಲ್ಲದ ಸಿಹಿ -ಕಹಿಯೊಂದಿಗೆ ನೋವು- ನಲಿವುಗಳ ಸ್ವೀಕಾರ.
ವಸಂತ ಋತುವಿಗೆ ಸಾಕ್ಷಿಯಾಗಿ ನವೀನವಾಗಿ ಕಂಡಿತು ಪರಿಸರ.
ಮಾವಿನ ತೋರಣದೊಂದಿಗೆ ಹಬ್ಬದ ಅಲಂಕಾರ
ಮನೆ-ಮನಗಳಲ್ಲಿ ಸಂಭ್ರಮ ಸಡಗರ.
ಹಿಂದೆ ಸರಿದ ದಿನಗಳಿಗೆ ತೆರೆಎಳೆದು ಹೊಸಯುಗ ಮರಳಿ ಬಂದಿದೆ.
ಹೊಸವರುಷದೊಂದಿಗೆ ಹರುಷವನ್ನು ಹೊತ್ತು ತಂದಿದೆ.
ನಿನ್ನೆಯ ನೋವುಗಳು ಮರೆಯಾಗಿ
ಇಂದಿನ ಸಂತೋಷವು ಅರಳಲಿ.
ನಾಳಿನ ಭರವಸೆಗಳಿಗೆ ಮುನ್ನುಡಿಯಾಗಿ.
ಯುಗಾದಿ ಹಬ್ಬವು ಆಚರಣೆಯಾಗಲಿ.
-ವಿಜಯಲಕ್ಷ್ಮಿ. ಬಿ ಕೆಯ್ಯೂರು.
ಪತ್ರಿಕೋದ್ಯಮ ವಿದ್ಯಾರ್ಥಿನಿ.
ವಿವೇಕಾನಂದ ಮಹಾವಿದ್ಯಾಲಯ ನಗರ ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ