ಉಡುಪಿ: ಹಿರಿಯ ಪತ್ರಕರ್ತ ಬಿ. ರವೀಂದ್ರ ಶೆಟ್ಟಿಯವರು ಬರೆದಿರುವ ಆಕೃತಿ ಆಶಯ ಪಬ್ಲಿಕೇಶನ್‌ನಿಂದ ಪ್ರಕಟಿಸಲಾದ ಉಡುಪಿ ಜಿಲ್ಲೆಯ ಸಮಗ್ರ ಮಾಹಿತಿಯನ್ನು ಒಳಗೊಂಡಿರುವ "ನಮ್ಮ ಉಡುಪಿ" ಕೃತಿ ಮಾರ್ಚ್ 19ರಂದು ಬಿಡುಗಡೆಗೊಳ್ಳಲಿದೆ.
ಉಡುಪಿ ಎಂಜಿಂ ಕಾಲೇಜಿನ ಆವರಣದಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವ ಸಮಾರಂಭದಲ್ಲಿ ಜಸ್ಟಿಸ್ ಸಂತೋಷ್ ಹೆಗ್ಡೆ ಅವರು ಕೃತಿ ಬಿಡುಗಡೆಗೊಳಿಸಲಿದ್ದಾರೆ.
ನಮ್ಮ ಉಡುಪಿ ಕೃತಿಯಲ್ಲಿ ಉಡುಪಿ ಜಿಲ್ಲೆಯ ಭೌಗೋಳಿಕ ವಿವರಗಳು, ಭಾಷೆ, ಧಾರ್ಮಿಕ ಆಚರಣೆ, ಬ್ಯಾಂಕಿಂಗ್, ಉಡುಪಿ ಲೋಕಸಭೆ, ವಿಧಾನ ಸಭೆ ಸದಸ್ಯರ ವಿವರಗಳು, ಸ್ಥಳೀಯಾಡಳಿತ ಸಂಸ್ಥೆಗಳ ಮಾಹಿತಿ, ಪ್ರವಾಸೋದ್ಯಮ, ಪ್ರಮುಖ ತಾಣಗಳ ಚಿತ್ರಣ, ಪ್ರಾಥಮಿಕ, ಪ್ರೌಢ, ಕಾಲೇಜು, ವೃತ್ತಿಪರ ಕಾಲೇಜುಗಳು, ಪೊಲೀಸ್ ಠಾಣೆ, ಮಾಧ್ಯಮ ಸಂಸ್ಥೆಗಳು, ತುಳು ಸಿನಿಮಾಗಳ ಮಾಹಿತಿ, ರಾಜಕೀಯ ವಿವರಗಳು, ಆಡಳಿತ ಮಾಹಿತಿ, ಪ್ರವಾಸೋದ್ಯಮ, ಶಿಕ್ಷಣ ಸಂಸ್ಥೆಗಳು, ವೃತ್ತಿಪರ ಕಾಲೇಜುಗಳು, ಗ್ರಂಥಾಲಯಗಳು, ಪ್ರಮುಖ ದೇವಸ್ಥಾನ, ಚರ್ಚ್, ಮಸೀದಿಗಳು, ಹೊಟೇಲ್, ಲಾಡ್ಜ್ ಗಳು, ರೆಸಾರ್ಟ್‌ಗಳು, ಕಲ್ಯಾಣ ಮಂಟಪಗಳು, ಪ್ರಮುಖ ಕೆರೆ, ಮದಗಗಳು, ಸಾರಿಗೆ ಸೌಲಭ್ಯ, ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳು, ಬ್ಲಾಡ್ ಬ್ಯಾಂಕ್‌ಗಳು ಹೀಗೆ ಸಮಗ್ರ ಮಾಹಿತಿಗಳನ್ನು ಈ ಕೃತಿ ಒಳಗೊಂಡಿದೆ. ಕೃತಿಗೆ ಮಂಗಳೂರು ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ ಮುನ್ನುಡಿ ಬರೆದಿದ್ದು, ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನೀಲ್ ಕುಮಾರ್ ಬೆನ್ನುಡಿ ಬರೆದಿದ್ದಾರೆ. ಕೃತಿಗೆ ಡಿಜಿಟಲ್ ಸ್ಪರ್ಶ ಕೂಡ ನೀಡಲಾಗಿದ್ದು, ಉಡುಪಿ ಜಿಲ್ಲೆಯ ಸಮಗ್ರ ಚಿತ್ರಣದ ದ್ರಶ್ಯವನ್ನು ಕೂಡ ಪುಸ್ತಕದಲ್ಲಿರುವ ಕ್ಯೂ ಆರ್ ಕೋಡ್ ಬಳಸಿಕೊಂಡು ವೀಕ್ಷಿಸಬಹುದಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ