ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಮೈಸೂರಿನ ಪ್ರಣವಾಚಾರ್ಯಗೆ ಸ್ವರ್ಣ

Upayuktha
0

ಬನಾರಸ್ ಹಿಂದು ವಿವಿಯಲ್ಲಿ ಶಾಸ್ತ್ರೀಯ ಭಾಷಣ ಸ್ಪರ್ಧೆ


ಮೈಸೂರು: ವಾರಾಣಸಿಯ ಬನಾರಸ್ ಹಿಂದು ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಸಂಸ್ಕೃತ ವಿವಿಗಳ ರಾಷ್ಟ್ರಮಟ್ಟದ 60ನೇ ಅಖಿಲ ಭಾರತ ಶಾಸ್ತ್ರೀಯ ಭಾಷಣ ಸ್ಪರ್ಧೆಯಲ್ಲಿ ಮೈಸೂರಿನ ಪ್ರಣವ ಆಚಾರ್ಯಗೆ ಪ್ರಥಮ ಬಹುಮಾನ ಸಹಿತ ಸ್ವರ್ಣ ಪದಕ ಲಭಿಸಿದೆ.

ನಗರದ ಶ್ರೀ ವ್ಯಾಸತೀರ್ಥ ವಿದ್ಯಾಪೀಠದ ವಿದ್ಯಾರ್ಥಿಯಾದ ಪ್ರಣವ ಆಚಾರ್ಯ ನ್ಯಾಯಶಾಸ್ತ್ರ ಭಾಷಣ ಸ್ಪರ್ಧೆಯಲ್ಲಿ  ಪಂಚಲಕ್ಷಣಿ ಎಂಬ ಗ್ರಂಥದ ಆಧಾರದ ಮೇಲೆ ವಿಷಯ ಮಂಡಿಸಿದ್ದರು. ಕರ್ನಾಟಕವನ್ನು ಪ್ರತಿನಿಧಿಸಿದ್ದ ಪ್ರಣವ ಆಚಾರ್ಯ 15 ರಾಜ್ಯಗಳ ಸ್ಪರ್ಧಾಳುಗಳ ಪ್ರಬಲ ಪೈಪೋಟಿ ಎದುರಿಸಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಈತ ಸೋಸಲೆ ಶ್ರೀ ವಿದ್ಯಾಶ್ರೀಶ ತೀರ್ಥರ ಬಳಿ ನ್ಯಾಯಶಾಸ್ತ್ರ ಗ್ರಂಥಗಳ ಅಧ್ಯಯನ ಮಾಡಿ, ಸದ್ಯ ಶ್ರೀ ಮನ್ ನ್ಯಾಯಸುಧಾ ಮತ್ತು ಚಂದ್ರಿಕಾ ಗ್ರಂಥಗಳ ಅಧ್ಯಯನ ಮುಂದುವರಿಸಿದ್ದಾರೆ. ಚಿನ್ನದ ಪದಕ ಪಡೆಯುವ ಮೂಲಕ ಕರ್ನಾಟಕಕ್ಕೆ ಮತ್ತು ಸೋಸಲೆ ಶ್ರೀ ವ್ಯಾಸತೀರ್ಥ  ಸಂಸ್ಥಾನಕ್ಕೆ ಪ್ರಣವ ಆಚಾರ್ಯ ಗೌರವ ತಂದುಕೊಟ್ಟಿದ್ದಾರೆ ಎಂದು ವಿದ್ಯಾಪೀಠದ ಪ್ರಾಚಾರ್ಯ ಡಾ. ಶ್ರೀನಿಧಿ ಪ್ಯಾಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top