ಮಡಿಕೇರಿಯ ಕುಲಾಲ ಯುವವೇದಿಕೆಯಿಂದ ಮಂಗಳೂರಿನಲ್ಲಿ ಶ್ರಮದಾನ

Upayuktha
0

ಕುಲಶೇಖರದ ಶ್ರೀ ವೀರನಾರಾಯಣ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ


ಮಂಗಳೂರು: ಇಲ್ಲಿನ ಕುಲಶೇಖರದಲ್ಲಿರುವ ಶ್ರೀ ವೀರನಾರಾಯಣ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ ನಡೆಯುತ್ತಿದ್ದು, ಬ್ರಹ್ಮಕಲಶೋತ್ಸವಕ್ಕೆ ಸಿದ್ದತೆ ನಡೆಯುತ್ತಿದೆ. ಆ ಪ್ರಯುಕ್ತ ಪ್ರತೀ ಭಾನುವಾರ ಬೇರೆ ಬೇರೆ ಊರಿನ ಸಂಘ ಸಂಸ್ಥೆಯಿಂದ ಶ್ರಮದಾನ ನಡೆಯುತ್ತಿದೆ.


ಹಾಗೆಯೇ ಮಾರ್ಚ್ 26ರಂದು ಮಡಿಕೇರಿಯ ಕುಲಾಲ/ ಕುಂಬಾರ ಯುವ ಘಟಕ, ಅರಸಿನಮಕ್ಕಿ ಕುಲಾಲ ಸಂಘ, ಮಳಲಿ ಕುಲಾಲ ಸಂಘ, ಪೊಳಲಿ ಕುಲಾಲ ಸಂಘ, ಕುತ್ತಾರ್  ಕುಲಾಲ ಸಂಘಗಳಿಂದ ಶ್ರಮದಾನ ನಡೆಯಿತು. ಅಂದು ಶ್ರಮದಾನದ ಬಳಿಕ ಸಭೆ ನಡೆಯಿತು. ಸಭೆಯಲ್ಲಿ ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಮಾತನಾಡಿ, ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ನಮಗೆ ಶ್ರಮದಾನ ಮಾಡುವ ಅವಕಾಶ ನಮ್ಮ ಪೂರ್ವಜರ ಶ್ರಮದ ಫಲವಾಗಿ ಸಿಕ್ಕಿದೆ ಎಂದರು.


ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ನಾವು ಸೇರುವ ಮುಖಾಂತರ ಸಮುದಾಯದ ಕಷ್ಟ ಸುಖಗಳನ್ನು ಹಂಚಿಕೊಂಡು, ಅನಿಷ್ಠ ಪದ್ಧತಿಗಳ ವಿರುದ್ಧ ಜನಜಾಗೃತಿ, ಬಡವರಿಗೆ ಸಾಮೂಹಿಕ ವಿವಾಹದ ಮುಖಾಂತರ ಸಹಾಯ ನೀಡುವುದು, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಮಾರ್ಗದರ್ಶನ, ವಿದ್ಯಾರ್ಥಿ ನಿಲಯ ಸ್ಥಾಪಿಸುವುದು ಇತ್ಯಾದಿ ಸಮಾಜಮುಖಿ ಕಾರ್ಯಕ್ರಮಗಳನ್ನು ಶ್ರೀ ವೀರನಾರಾಯಣ ದೇವಸ್ಥಾನ ಅಣಿಗೊಳ್ಳಲಿದೆ ಎಂದರು. ಪ್ರಪಂಚದ ಮೂಲ್ಯ, ಕುಲಾಲ್‌ರನ್ನು ಒಗ್ಗೂಡಿಸಿ ಶ್ರೀ ವೀರನಾರಾಯಣ ದೇವರ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದರು.


ಸಮಿತಿ ಸದಸ್ಯರಾದ ಸುಂದರ ಕುಲಾಲ್ ಶ್ರಮದಾನಕ್ಕೆ ಬಂದಂತಹ ಸಂಘದ ಸದಸ್ಯರಿಗೆ ಸ್ವಾಗತಿಸಿ ನಮ್ಮ ಹಿರಿಯರನ್ನು ನೆನಪಿಸಿ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ನಡೆದು ಬಂದ ಶ್ರಮದಾನದ ಮಾಹಿತಿ ನೀಡಿದರು.


ಮಡಿಕೇರಿ ಯುವ ಕುಲಾಲ/ಕುಂಬಾರ ಘಟಕದ ಅಧ್ಯಕ್ಷ ಚಂದ್ರಶೇಖರ ಮೂರ್ನಾಡು ಮಾತನಾಡಿ ನಮಗೆ ಮಡಿಕೇರಿಯಿಂದ ಬಂದು ಮಂಗಳೂರಿನ ಶ್ರೀ ವೀರನಾರಾಯಣ ಕ್ಷೇತ್ರದಲ್ಲಿ ಶ್ರಮದಾನ ಮಾಡಿರುವುದು ಜೀವನದ ಸಾರ್ಥಕ ಕ್ಷಣಗಳು ಎಂದರು. ಇನ್ನು ಮುಂದೆಯೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಶ್ರಮದಾನ ನೀಡುವೆವು ಎಂದರು.


ಅರಸಿನಮಕ್ಕಿ ಕುಲಾಲ ಸಂಘದ ಗಂಗಾಧರ ಕೂಡ ಶ್ರಮದಾನ ಅನುಭವ ಹಂಚಿಕೊಂಡರು. ಹಿರಿಯರಾದ ಕೃಷ್ಣ, ಶ್ರೀ ವೀರನಾರಾಯಣ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಗಿರಿಧರ್, ಉಪಸ್ಥಿತರಿದ್ದರು. ಪ್ರವೀಣ್ ಬಸ್ತಿ ಧನ್ಯವಾದ ನೀಡಿದರು. ಅರಸಿನಮಕ್ಕಿಯ ಕೃಷ್ಣಪ್ಪ, ರಮೇಶ್ ಕುಲಾಲ್ ಪೊಳಲಿ, ಕಿಶೋರ್ ಕುಮಾರ್ ಕುತ್ತಾರ್, ಮಡಿಕೇರಿ ಸುರೇಶ್ ಕುಲಾಲ್ ಇನ್ನಿತರ ಸಮಾಜ ಬಾಂಧವರು ಶ್ರಮದಾನದಲ್ಲಿ ಭಾಗವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top