ಕರುನಾಡ ಕದನ: ಉಡುಪಿ ಕಾರ್ಕಳದ ಮಟ್ಟಿಗೆ ಕಾಂಗ್ರೆಸ್ ಲೆಕ್ಕಾಚಾರ ಭಾರಿ ಇಂಟ್ರೆಸ್ಟಿಂಗ್

Upayuktha
0

ರಾಜಕೀಯ ರಣರಂಗದಲ್ಲಿ ಸೇೂಲು ಗೆಲುವಿನ ಲೆಕ್ಕಾಚಾರವೆಂದರೆ ಪಗಡೆ ಆಟ ಅರ್ಥಾತ್ ಇಂದಿನ ಚೆಸ್ ಆಟದ ತರಹ. ಯಾವ ಕಾಯಿನ್ ಯಾವಾಗ ಮುಂದಿಡಬೇಕು, ಯಾವಾಗ ಹಿಂದಿಡಬೇಕು, ಯಾವುದನ್ನು ಕಳೆದು ಕೊಂಡರೆ ಮುಂದೆಷ್ಟು ಲಾಭ ಸಿಗಬಹುದು, ಯಾವುದನ್ನು ಉಳಿಸಿಕೊಳ್ಳಲೇ ಬೇಕು. ತುಂಬಾ ರಕ್ಷಣಾತ್ಮಕವಾಗಿ ಮುನ್ನುಗಬೇಕು. ಈ ಎಲ್ಲಾ ಭವಿಷ್ಯದ ಲೆಕ್ಕಾಚಾರವನ್ನು ಮುಂದಾಗಿ ಯೇೂಚಿಸಿ ಜಾಗೃತಿಯಿಂದ ಹೆಜ್ಜೆ  ಮುಂದಿಟ್ಥಾಗಲೇ ಪಗಡೆಯಾಟ/ ಚೆಸ್ ಆಟ ಗೆಲ್ಲಬಹುದು.


ಇಂದು ಉಡುಪಿ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಆಯ್ಕೆಯಲ್ಲಿ ಅತ್ಯಂತ ಚಾಣಾಕ್ಷತನದಿಂದ ಹೆಜ್ಜೆ ಇಡುತ್ತಿರುವುದಂತೂ ಸತ್ಯ.


ಈ ಐದು ಕ್ಷೇತ್ರಗಳನ್ನು ಒಮ್ಮೆ ಸುತ್ತಿ ಬರೇೂಣ:

ಬೈಂದೂರು ಕಾಪು ಕ್ಷೇತ್ರದ ಮಟ್ಟಿಗೆ ಕಾಂಗ್ರೆಸ್‌ಗೆ ಇನ್ನೊಬ್ಬ ಅಭ್ಯರ್ಥಿಯನ್ನು ಹುಡುಕುವ ಅವಶ್ಯಕತೆಯೇ ಇಲ್ಲ. ಇದಾಲೇ ಕಾಂಗ್ರೆಸ್  ಘೇೂಷಿಸಿರುವ ಇಬ್ಬರು ಅಭ್ಯರ್ಥಿಗಳು ಬೈಂದೂರು ಮತ್ತು ಕಾಪು ಮಟ್ಟಿಗೆ ಬಿಜೆಪಿಗೆ ಸವಾಲಾಗಿ ನಿಲ್ಲಬಲ್ಲ ಸಮಥ೯ ಅಭ್ಯರ್ಥಿಗಳು ಅನ್ನುವುದು ಕಾಂಗ್ರೆಸ್‌ಗೂ ಗೊತ್ತಿದೆ, ಅದನ್ನು ಎದುರಿಸುವ ಬಿಜೆಪಿಗೂ ತಿಳಿದಿದೆ. ಹಾಗಾಗಿ ಬಿಜೆಪಿಯಿಂದ ಯಾರು ಅಭ್ಯರ್ಥಿಗಳಾಗ ಬಹುದು ಅನ್ನುವುದನ್ನು ಕಾಯುವ ಅಗತ್ಯ ಕಾಂಗ್ರೆಸ್‌ಗೆ ಖಂಡಿತವಾಗಿಯೂ ಇಲ್ಲ. ಹಾಗಾಗಿಯೇ ಚುನಾವಣಾ ದಿನಾಂಕದ ಮೆಾದಲೇ ಹೆಸರು ಘೇೂಷಣೆ ಮಾಡಿ ಬಿಟ್ಟಿದ್ದಾರೆ. ಇದು ಚುನಾವಣಾ ಪೂವ೯ ತಯಾರಿಗೆ ಹೆಚ್ಚು ಅನುಕೂಲವೂ ಹೌದು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಬಿಜೆಪಿಗ್ಗಿಂತ ಕಾಂಗ್ರೆಸ್ ಒಂದು ಹೆಜ್ಜೆ ಮುಂದಿದೆ ಅನ್ನುವುದು ಮೇಲ್ನೋಟಕ್ಕೆ ಸಾಬೀತಾಗಿದೆ.


ಇನ್ನೂ ಕುಂದಾಪುರ ಕ್ಷೇತ್ರಕ್ಕೆ ಹೆಸರು ಘೇೂಷಣೆ ಮಾಡಿ ಕಾಕ೯ಳ ಮತ್ತು ಉಡುಪಿ ಕ್ಷೇತ್ರಗಳಲ್ಲಿಗೆ ಯಾಕೆ ಅಭ್ಯರ್ಥಿಗಳ ಹೆಸರು ಘೇೂಷಿಸಲಿಲ್ಲ ಅನ್ನುವುದು ಕೆಲವರಿಗೆ ಅತ್ಯಂತ ಕುತೂಹಲ ಪ್ರಶ್ನೆ? ಇಲ್ಲಿಯೇ ಅಡಗಿದೆ ಕಾಂಗ್ರೆಸ್ಸಿನ ಪಗಡೆಯಾಟ. ಕುಂದಾಪುರದಲ್ಲಿ ಯಾವ ಅಭ್ಯರ್ಥಿಯನ್ನು ಸದ್ಯದ ಪರಿಸ್ಥಿತಿಯಲ್ಲಿ ನಿಲ್ಲಿಸಿದರೂ ಗೆಲುವುದು ಸುಲಭದ ಮಾತಲ್ಲ. ಒಂದು ವೇಳೆ ಕೊನೆಯ ಕ್ಷಣದಲ್ಲಿ ಕುಂದಾಪುರದ ವಾಜಪೇಯಿ ಹಾಲಾಡಿ ಚುನಾವಣೆ ಸಾಕಪ್ಪ ಎಂದು ಬದಿಗೆ ಸರಿದರೆ ಸದ್ಯದ ಪರಿಸ್ಥಿತಿಯಲ್ಲಿ ಕುಂದಾಪುರದಲ್ಲಿ ಬಿಜೆಪಿಯನ್ನು ಸುಲಭವಾಗಿ ಸಮಥ೯ವಾಗಿ ಎದುರಿಸಬಲ್ಲ ಬಂಟರ ಯುವ ಅಭ್ಯರ್ಥಿ ಅಂದ್ರೆ ಅದು ಮೊಳಹಳ್ಳಿ ದಿನೇಶ್ ಹೆಗ್ಡೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಹಾಗಾಗಿ ಕಾಂಗ್ರೆಸ್ ಮಟ್ಟಿಗೆ ಇದು ಕಳೆದು ಕೊಂಡರೂ ಹೆಚ್ಚಿನ ನಷ್ಟವಿಲ್ಲ ಅನ್ನುವ ಕೊನೆಯ ಲೆಕ್ಕಾಚಾರವಿದು.


ಹಾಗಾದರೆ ಕಾಕ೯ಳದಲ್ಲಿ ಕಾಂಗ್ರೆಸ್ಸಿನ ಲೆಕ್ಕಾಚಾರವೆ ಬೇರೆ? ಇಲ್ಲೂ ಕೂಡಾ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ಜೊತೆ ನೇರ ಹಣಾಹಣಿಯಲ್ಲಿ ತಾವು ಗೆಲುವುದು ಸುಲಭದ ಮಾತಲ್ಲ ಅನ್ನುವುದು ಕಾಂಗ್ರೆಸ್ಗೆ ಸ್ವಷ್ಟವಾಗಿ ತಿಳಿದಿದೆ.ಇಲ್ಲಿ ಸ್ವಲ್ಪ ಅಳೆದು ತೂಗಿ ಕೊನೆಯ ಪಟ್ಟಿಯಲ್ಲಿ ಹೆಸರು ಘೇೂಷಣೆ ಮಾಡುವುದು ಉಚಿತ ಅನ್ನುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಕಾದು ಕೂತಂತಿದೆ. ಮುತಾಲಿಕ್ ಕಾರ್ಯಾಚರಣೆ ಬಿಜೆಪಿಗೆ ಎಷ್ಟು ಡ್ಯಾಮೇಜ್ ಮಾಡಬಹುದು ಜಾತಿ ಲೆಕ್ಕಾಚಾರದಲ್ಲಿ ಎರಡನೆಯ ಸ್ಥಾನದಲ್ಲಿ ನಿಂತಿರುವ ಬಂಟ ಅಭ್ಯರ್ಥಿ ಹಾಕಿದರೆ ಹೇಗೆ? ಈ ಬಂಟರಲ್ಲಿಯೇ ಕಾಕ೯ಳಕ್ಕೆ ಯಾರು ಹೆಚ್ಚು ಜನಪ್ರಿಯರು? ಮುಂತಾದ ಸಂಕಲನ ವ್ಯವಕಲನ ಗುಣಾಕಾರ ಲೆಕ್ಕಾಚಾರದಲ್ಲಿಯೇ ಕಾಂಗ್ರೆಸ್ ಮಗ್ನವಾಗಿದೆ.


ಹಾಗಾದರೆ ಉಡುಪಿಗೆ ಯಾರು?

ಇಲ್ಲಿಯೂ ಕೂಡಾ ಕಾಂಗ್ರೆಸ್ wait & see ತಂತ್ರಗಾರಿಕೆಯಲ್ಲಿ ನಿಂತಂತಿದೆ. ಒಂದು ವೇಳೆ ಬಿಜೆಪಿಯ ಹಾಲಿ ಸದಸ್ಯರಿಗೆ ಅವಕಾಶ ಕೊಡದೆ ಬೇರೆಯವರಿಗೆ ಮಣೆ ಹಾಕಿದರೆ ಗೆಲುವಿನ ಅಂತರ ಸುಲಭವಾಗ ಬಹುದು ಅನ್ನುವ ತರದಲ್ಲಿ ಕಾಂಗ್ರೆಸ್ ಕಾದು ಕೂತಂತಿದೆ.  ಸಂದರ್ಭದಲ್ಲಿ ಹೆಚ್ಚಿನ ಸಮರ್ಥ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಬೇಕು ಅನ್ನುವ ತೀರ್ಮಾನಕ್ಕೆ ಕಾಂಗ್ರೆಸ್ ಬಂದಿದೆ. ಅದೇ ಬಿಜೆಪಿಯ ಹಾಲಿ ಸದಸ್ಯರೇ ಮುಂದುವರಿದ್ದರೆ ಕಾಂಗ್ರೆಸ್ ಯಾರನ್ನು ಕೂಡ ಆಯ್ಕೆ ಮಾಡಬಹುದು ಅನ್ನುವುದು ಕಾಂಗ್ರೆಸ್‌ನ ಭವಿಷ್ಯದ ಕೊನೆಯ ಸೇೂಲು ಗೆಲುವಿನ ಲೆಕ್ಕಾಚಾರ.


ವಿಶ್ಲೇಷಣೆ: ಪ್ರೊ. ಕೊಕ್ಕರ್ಣೆ ಸುರೇಂದ್ರ ನಾಥ ಶೆಟ್ಟಿ ಉಡುಪಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top