ಹೆಣ್ಣು ಮನೆಯ ಕಣ್ಣು!

Upayuktha
0

 

ಣ್ಣವಿಲ್ಲದ ಹೂವಿನಂತೆಯೇ

ಹೆಣ್ಣು ಇಲ್ಲದ ಇಳೆಯು ಇರುವುದು

ಕಣ್ಣ ತುಂಬುವ ಹೆಣ್ಣು 

ಮನೆಯ ಕಣ್ಣುಆಗಿಹಳು


ಹೊತ್ತು ಹೊತ್ತಿಗೆ  ಕೂಳು ಬೇಯಿಸಿ

ತುತ್ತನಿಕ್ಕುತ ಸಾಕಿ ಬೆಳೆಸುತ

ಮಮತೆ ತೋರುವ ತಾಯಿಯಿದ್ದರೆ

ಬಾಳು ಸೊಗಸಿಹುದು


ಹೆಣ್ಣು ಮನೆಯ ಕಣ್ಣು ಎನ್ನುತ

ಕಾಡಬೇಡಿರಿ ಅವಳ ಬದುಕನು

ಹೆಣ್ಣ ಶಾಪವು ಹೊನ್ನ ಶೂಲದ 

ತೆರದಿ ಇರುತಿಹುದು


ಹೆಣ್ಣು ಮಕ್ಕಳ ಗೌರವಿಸುತಿರುತಿಹ 

ಸ್ಥಳದಿ ದೇವತೆಗಳು ನೆಲೆಸುತ

ಹರಸುತಿರುವರು ಸಕಲ ಜನರನು 

ಒಳಿತು ಮಾಡುತಲಿ


ಪಂಕಜಾ.ಕೆ. ರಾಮಭಟ್ 

ಮುಡಿಪು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Tags

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top