ಬ್ರಹ್ಮಾವರ : ಜನಔಷಧಿ, ಮಹಿಳಾ ದಿನಾಚರಣೆ

Upayuktha
0

ಉಡುಪಿ : ಸಮುದಾಯ ಆರೋಗ್ಯ ಕೇಂದ್ರ, ಪ್ರಧಾನ ಮಂತ್ರಿ ಭಾರತೀಯ ಜನಔಷಧಿ ಕೇಂದ್ರ ಹಾಗೂ ಜಯಂಟ್ಸ್‍ ಗ್ರೂಪ್ ಬ್ರಹ್ಮಾವರ ಇವರ ಸಹಯೋಗದೊಂದಿಗೆ ಬ್ರಹ್ಮಾವರದ ಪ್ರಧಾನ ಮಂತ್ರಿ ಭಾರತೀಯ ಜನಔಷಧಿ ಕೇಂದ್ರದಲ್ಲಿ ಜನಔಷಧಿ ದಿವಸ ಹಾಗೂ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬ್ರಹ್ಮಾವರ ತಹಶೀಲ್ದಾರ್‍ ರಾಜಶೇಖರ ಮೂರ್ತಿ ಮಾತನಾಡಿ, ಜನಔಷಧಿಯು ಬಡ ಮತ್ತು ಮಧ್ಯಮ ವರ್ಗದ ರೋಗಿಗಳಿಗೆ ವರದಾನವಾಗಿದ್ದು, ಶೇ.50-90 ರ ವರೆಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಔಷಧಿಗಳನ್ನು ಸಾರ್ವಜನಿಕರಿಗೆ ನೀಡಿ ಜನಔಷಧಿ ಕೇಂದ್ರಗಳು ಬಹು ಜನೋಪಯೋಗಿಯಾಗಿ ಹೊರ ಹೊಮ್ಮಿದೆ.ತಳ ಮಟ್ಟದಜನರಿಗೂ ಈ ಯೋಜನೆಯ ಕುರಿತು ಅರಿವು ಮೂಡಿಸುವಲ್ಲಿ ಆಶಾ ಕಾರ್ಯಕರ್ತೆ ಮತ್ತು ವಿದ್ಯಾರ್ಥಿಗಳ ಪಾತ್ರ ಮಹತ್ತರವಾಗಿದೆ ಎಂದರು.


ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಹೇಶ್ ಐತಾಳ್, ಜನಔಷಧಿ ಬಗ್ಗೆ ಮಾಹಿತಿ ನೀಡಿದರು.


ಆಶಾ ನಿಲಯ ವಿಕಲಚೇತನ ವಿದ್ಯಾರ್ಥಿಗಳ ಶಾಲೆಯ ನಿವೃತ್ತ ಪ್ರಿನ್ಸಿಪಾಲ್‍ ಜಯ ವಿಜಯ, ಎನ್.ಎಸ್.ಎಸ್‍ ಅಧ್ಯಾಪಕ ರಘುರಾಮ್ ಶೆಟ್ಟಿ, ಜಯಂಟ್ಸ್‍ನ ನಿರ್ದೇಶಕ ಮಿಲ್ಟನ್ ಓಲಿವೆರಾ, ಅಣ್ಣಯ್ಯದಾಸ್, ಶ್ರೀನಾಥ್ ಕೋಟ, ವಿವೇಕ್‍ ಕಾಮತ್, ರೊನಾಲ್ಡ್, ಫಾರ್ಮಸಿಸ್ಟ್ ವಿಲ್ಸನ್, ಡೋರಿಸ್ ಡಿಸೋಜ, ಅಧ್ಯಾಪಕಿ ಮಮತಾ, ಎಸ್.ಎಂ.ಎಸ್‍ ಕಾಲೇಜಿನ ಎನ್.ಎಸ್.ಎಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರನ್ನು ಹಾಗೂ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಮಹಿಳೆಯರನ್ನು ಸನ್ಮಾನಿಸಲಾಯಿತು.


ಜಯಂಟ್ಸ್‍ ಅಧ್ಯಕ್ಷ ಸುಂದರ ಪೂಜಾರಿ ಮೂಡುಕುಕ್ಕುಡೆ ಸ್ವಾಗತಿಸಿ, ಮಧುಸೂದನ್ ಹೇರೂರು ನಿರೂಪಿಸಿ, ವಂದಿಸಿದರು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

0 Comments
Post a Comment (0)
To Top