ಬಿಜೆಪಿಯಿಂದ ಸೂಫಿ ಸಮಾವೇಶ: 150ಕ್ಕೂ ಅಧಿಕ ಸೂಫಿಗಳೊಂದಿಗೆ ಸಂವಾದ

Upayuktha
0

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯ ಬಿಜೆಪಿಯ ಮುಖ್ಯ ಕಚೇರಿಯಲ್ಲಿ ಸೂಫಿ ಮಾತುಕತೆ ಕಾರ್ಯಕ್ರಮವನ್ನು ಪಕ್ಷದ ಅಲ್ಪಸಂಖ್ಯಾತರ ಮೋರ್ಚಾದ ವತಿಯಿಂದ ಆರಂಭಿಸಲಾಗಿದೆ. ಪ್ರಧಾನಿ ಮೋದಿಯವರೇ ಭಾಷಣ ಮಾಡಲಿದ್ದಾರೆ ಎನ್ನಲಾಗಿರುವ ಈ ಸೂಫಿ ಸಮಾವೇಶದಲ್ಲಿ 150ಕ್ಕೂ ಅಧಿಕ ರಾಜಕೀಯೇತರ ಮುಖಂಡರೊಂದಿಗೆ ಸೂಫಿ ಸಂವಾದ ಏರ್ಪಡಿಸಲಾಗಿದೆ.


ಶಾಂತಿ ಮತ್ತು ಸೌಹಾರ್ದಕ್ಕೆ ಹೆಸರಾದ ಸೂಫಿ ಸಮುದಾಯವನ್ನು ತಲುಪುವಂತೆ ಮೋದಿಯವರೇ ಸ್ವತ ಸೂಚನೆ ನೀಡಿದ್ದು, ಅವರ ನಿರ್ದೇಶನದಂತೆ ಇದನ್ನು ಏರ್ಪಡಿಸಿರುವುದಾಗಿ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದ ಅಧ್ಯಕ್ಷ ಜಮಾಲ್ ಸಿದ್ದಿಕಿ ತಿಳಿಸಿದ್ದಾರೆ. ಮೋದಿಯವರು ಸಬ್ ಕಾ ಸಾಥ್‌ ಸಬ್ ಕಾ ವಿಕಾಸ್ ಎಂದು ಹೇಳಿದ್ದಾರೆ, ನಾವೂ ಸಬ್ ಕಾ ಜೊತೆಯಾಗಿ ಹೋಗುತ್ತಿದ್ದೇವೆ ಎಂದೂ ಅವರು ಹೇಳಿದರು.


“ದೇಶದ 30 ರಾಜ್ಯಗಳ ದರ್ಗಾಗಳಲ್ಲಿ ಕೆಲಸ ಮಾಡುವ ಸೂಫಿ ಜನರು ಈಗ ಬಿಜೆಪಿಯ ಮುಖ್ಯ ಕಚೇರಿಯಲ್ಲಿ ಸೇರಿರುವ ತುಂಬ ಮಹೋನ್ನತವಾದ ಸಂದರ್ಭವಿದು. ಅದೇ ಸೂಫಿ ಮಾತುಕತೆಯ ವಿಶೇಷ. ಮೋದಿ ಸರಕಾರವು ಪ್ರತಿ ಪಕ್ಷಗಳವರ ಆರೋಪ ಮೀರಿ ಎಲ್ಲರಿಗಾಗಿ ಜಾತಿ, ಧರ್ಮ, ಕುಲ ನೋಡದೆ ಕೆಲಸ ಮಾಡುತ್ತಿದೆ ಎಂಬುದನ್ನು ಮುಸ್ಲಿಂ ಸಮುದಾಯದವರಿಗೆ ಮನದಟ್ಟು ಮಾಡಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ.” ಎಂದು ಕಾರ್ಯಕ್ರಮದ ಸಂಯೋಜಕ ಸಂಚಾಲಕ ಯಾಸಿರ್ ಜಿಲಾನಿ ಹೇಳಿದ್ದಾರೆ.


20 ಶೇಕಡಾ ಇಲ್ಲವೇ ಅದಕ್ಕಿಂತ ಹೆಚ್ಚು ಮುಸ್ಲಿಮರಿರುವ ಪ್ರದೇಶಗಳಲ್ಲೆಲ್ಲ ಈ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ. ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಕೇರಳ, ಬಿಹಾರ, ತೆಲಂಗಾಣಗಳು ಹೆಚ್ಚು ಮುಸ್ಲಿಮರಿರುವ, ಹೆಚ್ಚು ಸೂಫಿ ಸಂವಾದ ನಡೆಯಲಿರುವ ರಾಜ್ಯಗಳು. ಉತ್ತರ ಪ್ರದೇಶದ ಸಹರಾನ್’ಪುರ, ಮೀರತ್, ರಾಂಪುರ, ಅಜಂಗಡ, ಬಿಹಾರದ ಕಿಶನ್ ಗಂಜ್, ಅರಾರಿಯಾ, ಕತಿಹಾರ್ ಲೋಕ ಸಭಾ ಕ್ಷೇತ್ರಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಸಿದ್ಧತೆ ನಡೆದಿದೆ.


ಇಡೀ ವರ್ಷ ಸೂಫಿ ಸಂವಾದ ನಡೆಸಿ 2024ರ ಲೋಕ ಸಭಾ ಚುನಾವಣೆಗೆ ಸಿದ್ಧರಾಗುವುದು ಮೋದಿ ಅನುಯಾಯಿ ಬಿಜೆಪಿಗರ ಯೋಜನೆಯಾಗಿದೆ. 150 ರಾಜಕೀಯೇತರರ ಜೊತೆಗೆ ಸಂವಾದ ಎನ್ನುವುದು ಅದರಲ್ಲಿ ಪ್ರಮುಖವಾದುದು. ಪ್ರಧಾನಿಗಳೇ ಸಾಕಷ್ಟು ಕಡೆ ನೇರ ಸಂವಾದ ನಡೆಸುವರು ಎಂದು ತಿಳಿದುಬಂದಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top