ಅಂದು
ನಾ ಚಿಗುರಿದಾಗ
ನನ್ನ ಹರೆಯಕ್ಕೆ ವಸಂತ ಸ್ಪಂದಿಸಿದಾಗ
ಕೊಂಬೆ ಕೊಂಬೆಗಳಲ್ಲಿ ಕುಳಿತ
ಹಕ್ಕಿ ಪಿಕ್ಕಿಗಳು ಕೂಗಿ ಕರೆದಾಗ
ಹೃದಯ ಮಂದಿರದಲ್ಲಿ
ದುಂಬಿಗಳು ಝೆಂಕರಿಸಿದಾಗ
ಜುಳು ಜುಳು ನಾದದೊಂದಿಗೆ ಸ್ಫರ್ಶಿಸುತ್ತಿದ್ದ
ನನ್ನಜೀವ ಸಂಜೀವಿನಿ ಹೇಮಾವತಿ ಹೊಳೆ
ಮಾಗಿದ ಫಲಕ್ಕಾಗಿ ಹಾತೊರೆದು
ಈಜಲು ಬರುತ್ತಿದ್ದ ಮೋಜಿನ ಹುಡುಗರು
ಇಂದು
ಇವರು ನನ್ನಿಂದ .. ಬಹುದೂರ
ವಸಂತನಿಲ್ಲದ ಬರಡುಜೀವನ
ಹಸಿರು ಚಿಗುರದೆ ನೊಂದು
ನಾ ಆಹ್ವಾನಿಸುತ್ತಿದ್ದೇನೆ
ಬೀಸುವ ಬಿರುಗಾಳಿಯನ್ನು
ಇಲ್ಲಾ
ಕಡಿದೊಯ್ಯುವ ಮರಕಟುಕರನ್ನು..
-ಗೊರೂರು ಅನಂತರಾಜು, ಹಾಸನ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ