ಮಂಗಳೂರು: ಮಂಗಳೂರು ಆಕಾಶವಾಣಿ ಕೇಂದ್ರ ಮತ್ತು ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ ಇವರ ಸಹಯೋಗದಲ್ಲಿ "ಯುವವಾಣಿ ಕನ್ನಡ ಕಥಾ-ಕವನ-ಲೇಖನ ಸ್ಪರ್ಧೆ" ನಡೆಯಲಿದೆ.
ಕನ್ನಡಕಟ್ಟೆ, ಮಂಗಳೂರು; ಪ್ರಣವ ಸಹಕಾರಿ ಬ್ಯಾಂಕ್; ವಿನಯ ಕೃಷಿಕ ಬಳಗ, ಹೋಟೆಲ್ ಡಿಂಕಿ ಡೈನ್, ಕದ್ರಿ- ಇವರ ಸಹಕಾರದೊಂದಿಗೆ ಈ ಸ್ಪರ್ಧೆ ಆಯೋಜಿಸಲಾಗುತ್ತಿದೆ.
ದಕ್ಷಿಣ ಕನ್ನಡ, ಕಾಸರಗೋಡು ಮತ್ತು ಉಡುಪಿ ಜಿಲ್ಲೆಗಳ 18ರಿಂದ 30 ವರ್ಷ ವಯಸ್ಸಿನ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಲೇಖನ ಮತ್ತು ಕತೆಗೆ ಪದಮಿತಿ: 1800ರಿಂದ 2000 ಪದಗಳು.
ಕವನ: 4 ಕವನಗಳು. (ಹನಿಗವನಗಳಿಗೆ ಅವಕಾಶ ಇಲ್ಲ).
ಕತೆ-ಕವನಗಳಿಗೆ ವಸ್ತುವಿನ ಆಯ್ಕೆ ನಿಮ್ಮದೇ.
ಲೇಖನಗಳಿಗೆ ವಿಷಯ:
ದೇಶೀಯ ಭಾಷೆಗಳ ಭವಿಷ್ಯ;
NEP 2020 ಮತ್ತು ದೇಶೀಯ ಭಾಷೆಗಳು;
ಉಪನುಡಿಗಳ ಮಹತ್ವ, ಸೊಗಸು, ಉಳಿವು;
ಉಪಭಾಷೆಗಳ ಓದು-ಬರಹ;
ಭಾಷೆ-ಉಪಭಾಷೆಗಳಿಗೆ ಅಕಾಡೆಮಿ, ಪೀಠಗಳ ಅಗತ್ಯ ಮತ್ತು ಔಚಿತ್ಯ.
ಮೇಲಿನ ವಿಷಯಗಳನ್ನು ಚೌಕಟ್ಟನ್ನಾಗಿ ಇರಿಸಿಕೊಂಡು ನಿಮ್ಮದೇ ಶೀರ್ಷಿಕೆಯನ್ನು ರಚಿಸಿಕೊಳ್ಳಬಹುದು.
ಓರ್ವ ಸ್ಪರ್ಧಾಳು ಮೂರೂ ವಿಭಾಗಗಳಲ್ಲಿ ಸ್ಪರ್ಧಿಸಬಹುದು.
ನಿಮ್ಮ ಬರಹ ನಮಗೆ ತಲುಪಬೇಕಾದ ಕೊನೆಯ ದಿನಾಂಕ: 10-4-2023.
ನಿಮ್ಮ ಬರಹ ನಮಗೆ ತಲುಪಬೇಕಾದ ವಿಳಾಸ: ನಿಲಯ ನಿರ್ದೇಶಕರು, (ಯುವವಾಣಿ ಕಥಾ-ಕವನ-ಲೇಖನ ಸ್ಪರ್ಧೆ ವಿಭಾಗ), ಆಕಾಶವಾಣಿ, ಮಂಗಳೂರು - 575 004.
ಅಥವಾ
airmangaluru.adp@gmail.com
(ಹಸ್ತಪ್ರತಿಯ ಚಿತ್ರಗಳನ್ನು ಕಳುಹಿಸಬಾರದು.)
ಬಹುಮಾನಿತ ಮತ್ತು ಆಯ್ದ ಬರಹಗಳ ಧ್ವನಿಮುದ್ರಣ ಮತ್ತು ಪ್ರಸಾರ ಇರುತ್ತದೆ. ಪ್ರಸಾರಗೊಂಡ ಎಲ್ಲ ಬರಹಗಳಿಗೆ ಸಂಭಾವನೆ ನೀಡಲಾಗುವುದು.
ಬಹುಮಾನ ವಿತರಣಾ ಕಾರ್ಯಕ್ರಮವು ಮಂಗಳೂರು ಆಕಾಶವಾಣಿ ನಿಲಯದಲ್ಲಿ ನಡೆಯಲಿದೆ. ದಿನಾಂಕವನ್ನು ಫಲಿತಾಂಶದೊಂದಿಗೆ ತಿಳಿಸಲಾಗುವುದು ಎಂದು ನಿಲಯದ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
ಮಾಹಿತಿಗಾಗಿ ಕರೆಮಾಡಬಹುದು: 9449923793.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ