100ಕ್ಕೂ ಅಧಿಕ ಮಹಿಳೆಯರ ಮೇಲೆ ಅತ್ಯಾಚಾರ: ಜಿಲೇಬಿ ಬಾಬಾನಿಗೆ 14 ವರ್ಷ ಜೈಲು ಶಿಕ್ಷೆ

Upayuktha
0

ಫತೇಹಾಬಾದ್: 100ಕ್ಕೂ ಅಧಿಕ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲೇಬಿ ಬಾಬಾಗೆ 14 ವರ್ಷ ಜೈಲು ಶಿಕ್ಷೆ ವಿಧಿಸಿ ಹರಿಯಾಣ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.


ಈ ಕುರಿತಂತೆ ತೀರ್ಪು ನೀಡಿರುವ ನ್ಯಾಯಾಲಯ, ಜಿಲೇಬಿ ಬಾಬಾಗೆ ಪೊಕ್ಸೋ ಕಾಯ್ದೆಯಡಿ 14 ವರ್ಷ, ಐಟಿ ಕಾಯ್ದೆ ಅಡಿಯಲ್ಲಿ 5 ವರ್ಷ ಹಾಗೂ ಅತ್ಯಾಚಾರ ಪ್ರಕರಣಗಳಲ್ಲಿ ಒಟ್ಟಾಗಿ 14 ವರ್ಷ ಶಿಕ್ಷೆ ವಿಧಿಸಲಾಗಿದೆ.


ಏನು ಈತನ ವಿರುದ್ಧ ಆರೋಪ:


ಮಹಿಳೆಯರ ಮೇಲೆ ಅತ್ಯಾಚಾರ ಎಸಗುವುದು, ಅವರ ಅಶ್ಲೀಲ ವೀಡಿಯೋ ಸೆರೆ ಹಿಡಿಯುವುದು 63 ವರ್ಷದ ಜಿಲೇಬಿ ಬಾಬಾ ಅಲಿಯಾಸ್ ಅಮರವೀರ್ನ ನಿತ್ಯದ ಕಾಯಕವಾಗಿತ್ತು. ವೀಡಿಯೋ ಬಳಸಿಕೊಂಡು ಮಹಿಳೆಯರನ್ನು ಬ್ಲಾಕ್'ಮೇಲ್ ಮಾಡಿ ಶೋಷಿಸುತ್ತಿದ್ದ. ನಾಲ್ವರು ಹೆಣ್ಣುಮಕ್ಕಳು ಮತ್ತು ಇಬ್ಬರು ಗಂಡುಮಕ್ಕಳ ತಂದೆಯಾಗಿದ್ದ ಈತನ ಪತ್ನಿ ನಿಧನರಾಗಿದ್ದರು. ಮೂಲತಃ ಪಂಜಾಬ್ ಮೂಲದ ಈತ 23 ವರ್ಷಗಳ ಹಿಂದೆ ಮನ್ಸಾ ಪಟ್ಟಣದಿಂದ ತೋಹನಾಕ್ಕೆ ಬಂದು ಜಿಲೇಬಿ ಅಂಗಡಿ ತೆರೆದು ಪ್ರಸಿದ್ಧನಾಗಿದ್ದ.


ಕೆಲವು ವರ್ಷಗಳ ಬಳಿಕ ತೋಹನಾದಿಂದಲೂ ನಾಪತ್ತೆಯಾಗಿ ದೇವಸ್ಥಾನವೊಂದನ್ನು ಕಟ್ಟಿ ಬಾಬಾ ಅವತಾರದಲ್ಲಿ ಮರಳಿದ್ದ. ಅಲ್ಲಿಂದ ನಂತರ ಸಾಕಷ್ಟು ಮಹಿಳಾ ಅನುಯಾಯಿಗಳನ್ನು ಸಂಪಾದಿಸಿದ್ದ. ದೇವಸ್ಥಾನದ ಒಳಗೆ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಆತನ ವಿರುದ್ಧ 2018ರಲ್ಲಿ ಮೊದಲು ದೂರು ದಾಖಲಾಗಿತ್ತು. ಆದರೆ ಜಾಮೀನು ಪಡೆದುಕೊಂಡು ಬಚಾವ್ ಆಗಿದ್ದ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
To Top