ಉಜಿರೆ : ಕೃಷಿಕರ ಮನೆಗೆ ಭೇಟಿ ನೀಡಿದ ಪತ್ರಿಕೋದ್ಯಮ ವಿದ್ಯಾರ್ಥಿಗಳು

Upayuktha
0

ಉಜಿರೆ : ಶ್ರೀ.ಧ. ಮಂ.ಕಾಲೇಜಿನ ಪ್ರಥಮ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಸರ್ಕಾರದಿಂದ ಕೊಡಲ್ಪಡುವ ನರೇಗಾ ಯೋಜನೆಯ ಸವಲತ್ತುಗಳನ್ನು ಮತ್ತು ಕೃಷಿಯ ಇನ್ನಿತರ ಮಾಹಿತಿಗಳನ್ನು ಪಡೆಯಲು ಕೃಷಿಕರ ಮನೆಗಳಿಗೆ ಭೇಟಿ ನೀಡಿದರು.


ಈ ಸಂದರ್ಭದಲ್ಲಿ ಮೋಹನದಾಸ್ ಅವರ ಮನೆಗೆ ಭೇಟಿ ನೀಡಿ ಅಡಿಕೆ , ರಬ್ಬರ್, ತೆಂಗು,ಕೋಕೋ ಕೃಷಿ , ಅಡಿಕೆ ರೋಗ ,ಕೊಯ್ಲು, ಫಸಲು,ರಾಸಾಯನಿಕಗಳು ಈ ಎಲ್ಲಾ ವಿಚಾರದ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ಪಡೆದರು. 


ಸರ್ಕಾರದ ನರೇಗಾ ಯೋಜನೆಯನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡು ಕೃಷಿಯಲ್ಲೇ ಜೀವನ ಕಂಡುಕೊಂಡಿರುವ ಮತ್ತೊಬ್ಬ ಕೃಷಿಕರಾದ ಗೋಪಾಲಕೃಷ್ಣರವರ ಮನೆಗೆ ಭೇಟಿ ನೀಡಿ ಎರೆಹುಳು ಗೊಬ್ಬರದ ತಯಾರಿ, ಸವಾಲುಗಳು, ಜೇನು ಕೃಷಿ,ಮಲ್ಲಿಗೆ ಕೃಷಿ ಮತ್ತು ದನ ಸಾಕಾಣಿಕೆಯ ಕುರಿತು ಮಾಹಿತಿಗಳನ್ನು ಪಡೆದುಕೊಳ್ಳಲಾಯಿತು .


ಈ ಸಂದರ್ಭದಲ್ಲಿ ಪ್ರಥಮ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಮತ್ತು ವಿಭಾಗದ ಉಪನ್ಯಾಸಕಿ ಶೃತಿ ಜೈನ್ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
To Top