ತುಮಕೂರು: ಸಾಹಿತ್ಯ ಪ್ರಶಸ್ತಿಗೆ ಕೃತಿಗಳ ಆಹ್ವಾನ

Upayuktha
0

ತುಮಕೂರು: ತುಮಕೂರಿನ ನಾಡಿಗ್ ಸಾಹಿತ್ಯ ಪ್ರತಿಷ್ಠಾನ ಕೊಡುವ ರಾಜ್ಯಮಟ್ಟದ 5ನೇ ವರ್ಷದ ಸರ್ವೋತ್ತಮ ಆಚಾರ್ಯ, ವಿದ್ಯಾವಾಚಸ್ಪತಿ ಡಾ. ಕವಿತಾಕೃಷ್ಣ ಸಾಹಿತ್ಯ ಪ್ರಶಸ್ತಿ 2022-ಕ್ಕೆ ಸಾಹಿತ್ಯ ಕೃತಿಗಳನ್ನು ಆಹ್ವಾನಿಸಲಾಗಿದೆ. ೨೦೨೨ರ ಜನವರಿ 01 ರಿಂದ ೨೦೨೨ ಡಿಸೆಂಬರ್ 31 ರೊಳಗೆ ಪ್ರಕಟವಾದ ಸಾಹಿತ್ಯ ಕೃತಿಯ ಮೂರು ಪ್ರತಿಗಳನ್ನು ತಮ್ಮ ಪರಿಚಯ ಪತ್ರದೊಂದಿಗೆ ತಮ್ಮ ವಿವರಗಳನ್ನು ಅಶ್ವಿನಿ ಪಿ.ನಾಡಿಗ್, ಸಂಚಾಲಕರು, ನಾಡಿಗ್ ಸಾಹಿತ್ಯ ಪ್ರತಿಷ್ಠಾನ, ನಂ-103, ಆಭಯ್ ರಾಘವಿ, 5ನೇ ಅಡ್ಡರಸ್ತೆ, ಸ್ನೇಹ ಕ್ಲಿನಿಕ್ ಹಿಂಬಾಗ, ಬೋವಿಪಾಳ್ಯ ಬಡಾವಣೆ ಹತ್ತಿರ. ಬಾಲಾಜಿ ನಗರ, ಊರುಕೆರೆ ಅಂಚೆ, ತುಮಕೂರು-572106 ಇವರಿಗೆ ಜನವರಿ 25, 2023 ರೊಳಗೆ ತಲುಪುವಂತೆ ರಿಜಿಸ್ಟರ್ಡ್ ಅಂಚೆಯ ಮೂಲಕ ಮಾತ್ರ ಕಳಿಸಬೇಕು. ಪ್ರಶಸ್ತಿಗೆ ಕಳಿಸಿದ ಕೃತಿಗಳನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸಲಾಗುವುದಿಲ್ಲ. ಕೃತಿಯ ಮಾಹಿತಿ ಪುಟದಲ್ಲಿ ಮೊದಲ ಮುದ್ರಣ 2022 ಎಂದು ನಮೂದಿಸಿರಬೇಕು. ಕಳೆದ ಐದು ವರ್ಷಗಳಿಂದ ಪ್ರತಿಷ್ಠಾನ ಈ ಪ್ರಶಸ್ತಿಯನ್ನು ಕೊಡುತ್ತಿದ್ದು ಆಯ್ದ ಕೃತಿಗೆ ನಗದು, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಹೆಚ್ಚಿನ ಮಾಹಿತಿಗೆ 9845529789 ಸಂಖ್ಯೆಯನ್ನು ಸಂಪರ್ಕಿಸಬಹುದು. 

- ಡಾ. ಪ್ರಕಾಶ್ ಕೆ ನಾಡಿಗ್, ತುಮಕೂರು

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top