ಮಂಗಳೂರು: ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಕೇಂದ್ರ, ಗಾನ ನೃತ್ಯ ಅಕಾಡೆಮಿ (ರಿ) ಮಂಗಳೂರು ಇದರ ಆಶ್ರಯದಲ್ಲಿ 'ನೃತ್ಯ ನಿರಂತರ - 07' ಎಂಬ ಕಾರ್ಯಕ್ರಮವು ಜ. 21 ಶನಿವಾರ, ನಗರದ ಡಾನ್ ಬೋಸ್ಕೋ ಸಭಾಂಗಣದಲ್ಲಿ ಸಂಜೆ 5:30ಕ್ಕೆ ಸರಿಯಾಗಿ ನಡೆಯಲಿದೆ.
ಅಕಾಡೆಮಿಯ ವಿದ್ಯಾರ್ಥಿಗಳಾದ ಅನುಷ್ಕಾ ಬಿ, ಆಕಾಂಕ್ಷಾ ಎಸ್.ಎನ್, ದ್ವಿತಿ ಶೆಟ್ಟಿ, ಧೃತಿ ಪ್ರಭು, ರಿಧಿ ಶೆಟ್ಟಿ, ಅಂಜಲಿ ಲತೀಶ್, ಸಹನಾ ಭಟ್, ಸಾಧ್ವಿ ಶಾಸ್ತ್ರಿ, ಸ್ತುತಿಶ್ರೀ, ಸಿಂಚನಾ ದೇವಿ, ಗೌತಮಿ ಸುಧಾಕರ್, ಮಹತಿ ಪವನಸ್ಕರ್, ಪೂರ್ವಿ ಕೃಷ್ಣ ಇವರು ಸಮೂಹ ನೃತ್ಯ ಭರತನಾಟ್ಯದಲ್ಲಿ ತಮ್ಮ ಪ್ರತಿಭೆ ಅನಾವರಣ ಮಾಡಲಿದ್ದಾರೆ. ಜೊತೆಗೆ ವಿದ್ಯಾಶ್ರೀ ರಾಧಾಕೃಷ್ಣ ಇವರ ಶಿಷ್ಯೆ ದಿವ್ಯ ಭಟ್ ಪ್ರಭಾತ್ ಕಾರ್ಯಕ್ರಮ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಉಪಸ್ಥಿತರಿರುವರು.
ಹಾಗೆಯೇ, ಬೃಹತ್ ಡ್ಯಾನ್ಸ್ ಬ್ಯಾಲೆಟ್ 'ಶ್ರೀಮಂತ್ ಯೋಗಿ' ನೈಜ ಕರ್ಮಯೋಗಿ ಛತ್ರಪತಿ ಶಿವಾಜಿ ಮಹಾರಾಜ್ ಎಂಬ ವಿನೂತನ ಕಾರ್ಯಕ್ರಮ ಜ.22 ಆದಿತ್ಯವಾರ ಪ್ರಸ್ತುತಿಗೊಳ್ಳಲಿದೆ. ಇದು ಮುಂಬೈಯ ಖ್ಯಾತ ಸಂಖ್ಯಾ ಡ್ಯಾನ್ಸ್ ಕಂಪನಿ ಇವರಿಂದ ಸಂಜೆ 6 ಗಂಟೆಗೆ ಮಂಗಳೂರು ಟೌನ್ ಹಾಲ್ ಸಮೀಪದ ಕುದ್ಮಲ್ ರಂಗರಾವ್ ಸಭಾಂಗಣದಲ್ಲಿ ನಡೆಯಲಿದೆ. ಈ ಪ್ರಯೋಗದ ನಿರ್ದೇಶಕ ಮತ್ತು ಕೊರಿಯೋಗ್ರಫಿಯನ್ನು ವೈಭವ್ ಅರೇಕರ್ ನಿರ್ವಹಿಸಿದ್ದಾರೆ.
ಇವೆರಡೂ ಕಾರ್ಯಕ್ರಮಕ್ಕೆ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಬೆಂಬಲ ನೀಡುತ್ತಿದೆ. ಆಸಕ್ತರು ಕಾರ್ಯಕ್ರಮದಲ್ಲಿ ಮುಕ್ತವಾಗಿ ಭಾಗವಹಿಸಲು ಅವಕಾಶ ನೀಡಲಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ