ಗಣರಾಜ್ಯೋತ್ಸವ ವಿಶೇಷ: ಮುಳಿಯ ಜ್ಯುವೆಲ್ಸ್‌ನಿಂದ 'ಮುಳಿಯ ರಾಷ್ಟ್ರ ಸಿಂಚನ'

Upayuktha
0

ಪುತ್ತೂರು:  ಗಣರಾಜ್ಯೋತ್ಸವದ ಪ್ರಯುಕ್ತ ಪುತ್ತೂರಿನ ಮುಳಿಯ ಜ್ಯುವೆಲ್ಸ್‌  ವಿನೂತನ ಕಾರ್ಯಕ್ರಮವೊಂದನ್ನು ಪ್ರಸ್ತುತಪಡಿಸುತ್ತಿದೆ. "ಮುಳಿಯ ರಾಷ್ಟ್ರ ಸಿಂಚನ' ಆನ್‌ಲೈನ್‌ ನೃತ್ಯ ಸ್ಪರ್ಧೆಯನ್ನು ಜನವರಿ 28ರಂದು ಮಧ್ಯಾಹ್ನ 2:00 ಗಂಟೆಗೆ ಮತ್ತು 29ರಂದು ಬೆಳಗ್ಗೆ 10:30ಕ್ಕೆ ಆಯೋಜಿಸಿದೆ.


ಸೋಲೋ ಮತ್ತು ಗ್ರೂಪ್‌ ಎಂಬ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಸಲಾಗುತ್ತಿದ್ದು, ಸೋಲೋ ವಿಭಾಗದಲ್ಲಿ ಮೊದಲ 100 ಸ್ಪರ್ಧಿಗಳಿಗೆ ಅವಕಾಶವಿದೆ. ಈ ವಿಭಾಗದಲ್ಲಿ ಸ್ಪರ್ಧಿಸುವ ವಿದ್ಯಾರ್ಥಿಗಳು 12ರಿಂದ 21 ವರ್ಷ ವಯೋಮಿತಿಯೊಳಗಿನವರಾಗಿರಬೇಕು. 21 ವರ್ಷಕ್ಕೆ ಮೇಲ್ಪಟ್ಟವರು ಸಾರ್ವಜನಿಕ ವಿಭಾಗದಲ್ಲಿ ಸ್ಪರ್ಧಿಸಬಹುದಾಗಿದೆ.

ಹೆಸರು ನೋಂದಾಯಿಸಿಕೊಳ್ಳಲು ಜನವರಿ 25 ಕೊನೆಯ ದಿನಾಂಕವಾಗಿರುತ್ತದೆ.

ಗ್ರೂಪ್‌ ವಿಭಾಗದಲ್ಲಿ ಸ್ಪರ್ಧಿಸುವವರು ಗಮನಿಸಬೇಕಾದ ಅಂಶವೆಂದರೆ, ಮೊದಲ 35 ಗುಂಪುಗಳಿಗೆ ಮಾತ್ರ ಅವಕಾಶವಿರುತ್ತದೆ. 


ನಿಯಮಗಳು ಇಂತಿವೆ:

ದೇಶಭಕ್ತಿ ಗೀತೆಗೆ ಅಥವಾ ಚಲನಚಿತ್ರದ ದೇಶಭಕ್ತಿ ಗೀತೆಗೆ ನೃತ್ಯ ಮಾಡಬಹುದು.

* ಒಬ್ಬ ಸ್ಪರ್ಧಿಗೆ 2-3 ನಿಮಿಷ ಮಾತ್ರ ಅವಕಾಶವಿರುತ್ತದೆ. ಗುಂಪಿಗೆ 4-5 ನಿಮಿಷದ ಕಾಲಾವಕಾಶ ನೀಡಲಾಗುವುದು.

* ಸ್ಪರ್ಧೆಯು ಝೂಮ್‌ ವೇದಿಕೆಯ ಮೂಲಕ ನಡೆಯುತ್ತದೆ.

* ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.


ಹೆಸರು ನೋಂದಾಯಿಸಿಕೊಳ್ಳಲು  ಮತ್ತು ಹೆಚ್ಚಿನ ಮಾಹಿತಿಗಾಗಿ 9353030916 ಸಂಪರ್ಕಿಸಲು ಕೋರಲಾಗಿದೆ.


ಸ್ಪರ್ಧೆಯ ಮೊದಲನೆಯ ದಿನ ಸಾಕಷ್ಟು ಮುಂಚಿತವಾಗಿಯೇ, ಕರೆಯ ಮೂಲಕ ಸ್ಪರ್ಧಿಗಳು ತಮ್ಮ ಮಾಹಿತಿಯನ್ನು ಮತ್ತು ನಿಯಮಗಳನ್ನು ಖಚಿತಪಡಿಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top